ಬಾಲಿವುಡ್ ಸೂಪರ್'ಸ್ಟಾರ್'ಗೆ ಕಿಚ್ಚನೆ ವಿಲನ್

Published : Dec 02, 2017, 08:17 PM ISTUpdated : Apr 11, 2018, 12:59 PM IST
ಬಾಲಿವುಡ್ ಸೂಪರ್'ಸ್ಟಾರ್'ಗೆ ಕಿಚ್ಚನೆ ವಿಲನ್

ಸಾರಾಂಶ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ಸದ್ಯ 'ದಿ ವಿಲನ್', 'ಪೈಲ್ವಾನ್' ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ಸ್ಯಾಂಡಲ್'ವುಡ್ ಕಿಚ್ಚ ಸುದೀಪ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು, ಸುದೀಪ್ ಜೊತೆ ಮಾತಡೋಕ್ಕೆ, ಅವರ ಜೊತೆ ಒಂದು ಸಿನಿಮಾ ಮಾಡೋ ಚಾನ್ಸ್ ಸಿಕ್ರೆ ಸಾಕಾಪ್ಪ ಅಂತ ಅಭಿಮಾನಿಗಳು ಕಾಯ್ತಿದ್ದಾರೆ. ಇನ್ನು ಸುದೀಪ್ ಅವರು ಸರಳ ಸುಂದರ ವ್ಯಕ್ತಿತ್ವದವ್ರು. ಆದರೆ ಸಡನ್ ಆಗಿ ಕಿಚ್ಚ ಬಾಲಿವುಡ್ ಸೂಪರ್ ಸ್ಟಾರ್ ನಟನಿಗೆ ವಿಲನ್ ಆಗ್ತಿದ್ದಾರೆ ಅನ್ನೋ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿಬರ್ತಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ಸದ್ಯ 'ದಿ ವಿಲನ್', 'ಪೈಲ್ವಾನ್' ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಅವರಿಗೆ ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಸೈರಾ' ಚಿತ್ರದಲ್ಲಿ ನಟಿಸಲು ಆಫರ್ ಬಂದಿತ್ತಾದರೂ, ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಕೈಬಿಟ್ಟಿದ್ದರು. ಆದರೆ ಚಿತ್ರದ ನಿರ್ದೇಶಕರು, ಸುದೀಪ್ ಅವರೇ ಆ ಪಾತ್ರವನ್ನು ಮಾಡಬೇಕೆಂದು ಹಠ ಹಿಡಿದಿದ್ದು, ಕೊನೆಗೆ ಕಿಚ್ಚ ಒಪ್ಪಿಕೊಂಡಿದ್ದಾರೆ. ಇನ್ನು ಹಾಲಿವುಡ್ ಚಿತ್ರ 'ರೈಸನ್'ನಲ್ಲಿಯೂ ಅಭಿನಯಿಸ್ತಿರೋ ಸುದೀಪ್ ಬಾಲಿವುಡ್ ಸ್ಟಾರ್ ಒಬ್ಬರಿಗೆ ವಿಲನ್ ಆಗಿದ್ದಾರಂತೆ.

ರಣವೀರ್ ಸಿಂಗ್'ಗೆ ವಿಲನ್

ಡೈರೆಕ್ಟರ್ ರೋಹಿತ್ ಶೆಟ್ಟಿ ಆಕ್ಷನ್ ಕಟ್ ಹೇಳಲಿರುವ ಮುಂದಿನ ಪ್ರಾಜೆಕ್ಟ್ ನಲ್ಲಿ ರಣವೀರ್ ಸಿಂಗ್ ನಾಯಕರಾಗಿದ್ದು, ಇದರಲ್ಲಿ ಖಡಕ್ ವಿಲನ್ ರೋಲ್'ಗೆ ಸುದೀಪ್ ಅವರನ್ನು ಕೇಳಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಸುದೀಪ್ ಈ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿಲವಾದರೂ ಕಥೆ ಕೇಳಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಅಭಿನಯಿಸುವ ಸುದ್ದಿ ಪಕ್ಕ ಆಗಬೇಕಾದರೆ ಅಭಿಮಾನಿಗಳು ಕೆಲವು ದಿನಗಳು ಕಾಯಲೇಬೇಕು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸ್ಪೆಷಲ್ ಡ್ಯಾನ್ಸ್‌ಗಾಗಿಯೇ ನಾಯಕಿಯನ್ನು ಹುಡುಕುವ ನೆಲ್ಸನ್: ಜೈಲರ್ 2ನಲ್ಲಿ ರಜನಿಕಾಂತ್ ಆ ಫೀಲಿಂಗ್ಸ್ ಈಡೇರುತ್ತಾ?
ದುಬೈನಲ್ಲಿ ಮೋಸದಿಂದ 'ಬಾರ್​ ಗರ್ಲ್'​ ಆದೆ, ಆದ್ರೆ ಆ ಅನುಭವವೇ ಸೂಪರ್​: ರಾಧಾ ಕಲ್ಯಾಣ ನಟಿ ಮಾತು ಕೇಳಿ