ಪೈರೆಸಿ ನಡುವೆಯೂ 100 ಕೋಟಿ ಕ್ಲಬ್ ಸೇರಿಸ ಪೈಲ್ವಾನ್!

Published : Sep 21, 2019, 08:57 AM IST
ಪೈರೆಸಿ ನಡುವೆಯೂ 100 ಕೋಟಿ ಕ್ಲಬ್ ಸೇರಿಸ ಪೈಲ್ವಾನ್!

ಸಾರಾಂಶ

ಪ್ಯಾನ್‌ ಇಂಡಿಯಾ ಸಿನಿಮಾ ‘ಪೈಲ್ವಾನ್‌’ ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ. ಕನ್ನಡ, ಹಿಂದಿ, ತೆಲುಗು ಸೇರಿದಂತೆ ತೆರೆ ಕಂಡ ಐದು ಭಾಷೆಗಳಲ್ಲೂ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರಮಂದಿರಗಳು ಹೌಸ್‌ಫುಲ್‌ ಆಗುತ್ತಿವೆ. ಚಿತ್ರತಂಡದ ನಿರೀಕ್ಷೆಗೂ ಮೀರಿ ಕಲೆಕ್ಷನ್‌ನಲ್ಲಿ ಕಮಾಲ್‌ ಮಾಡುತ್ತಿದೆ.

ಶನಿವಾರ( ಸೆ.21)ಕ್ಕೆ ಚಿತ್ರ ತೆರೆಕಂಡು 10 ದಿನ ಆಗಿದೆ. ಇದುವರೆಗೂ ಆದ ಒಟ್ಟು ಕಲೆಕ್ಷನ್‌ ಸುಮಾರು . 85 ಕೋಟಿ ಎನ್ನುವ ಸುದ್ದಿಯಿದೆ. ಸೋಮವಾರದ ಹೊತ್ತಿಗೆ ‘ಪೈಲ್ವಾನ್‌’ . 100 ಕೋಟಿ ಕ್ಲಬ್‌ಗೆ ಸೇರ್ಪಡೆ ಆಗುವುದು ಖಚಿತ ಎನ್ನುತ್ತಿವೆ ಮೂಲಗಳು.

ಪತ್ತೆಯಾಗ್ತಿದೆ ಪೈರಸಿ ಜಾಲ, ಫೈಟ್ ಮುಂದುವರಿಯಲಿದೆ; ಪೈಲ್ವಾನ್ ಶಪಥ

ಕನ್ನಡದ ಮಟ್ಟಿಗೆ ‘ಪೈಲ್ವಾನ್‌’ ಬಹು ನಿರೀಕ್ಷಿತ ಚಿತ್ರವೇ ಆಗಿತ್ತು. ಕಿಚ್ಚ ಸುದೀಪ್‌ ಅಭಿನಯದ ಚಿತ್ರ ಎನ್ನುವುದರ ಜತೆಗೆ ಪ್ಯಾನ್‌ ಇಂಡಿಯಾ ರಿಲೀಸ್‌ ಪರಿಕಲ್ಪನೆಯಲ್ಲೇ ಆ ಚಿತ್ರವನ್ನು ಅದ್ದೂರಿಯಾಗಿ ತೆರೆಗೆ ತರಲಾಗಿತ್ತು. ಅದಕ್ಕೆ ಪೂರಕವಾದ ಕಲಾವಿದರು ಚಿತ್ರದಲ್ಲಿದ್ದರು. ಚಿತ್ರ ತೆರೆ ಕಂಡಾಗ ಹಿಂದಿ ಹೊರತುಪಡಿಸಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಅತ್ಯದ್ಭುತ ಪ್ರತಿಕ್ರಿಯೆ ಸಿಕ್ಕಿದ್ದು ಸುಳ್ಳಲ್ಲ. ಪೈಲ್ವಾನ್‌ ಮೊದಲ ದಿನವೇ ಒಟ್ಟು .

ಕಲೆಕ್ಷನ್‌ ಕುರಿತಂತೆ ನಾನು ಅನಧಿಕೃತವಾಗಿ ಏನನ್ನು ಹೇಳುವುದಿಲ್ಲ. ಇನ್ನೇನು ಮೂರ್ನಾಲ್ಕು ದಿನಗಳಲ್ಲಿ ಅಧಿಕೃತ ದಾಖಲೆಗಳೊಂದಿಗೆ ಮಾತನಾಡಲಿದ್ದೇನೆ. ಆಗ ನಿಜವಾದ ಕಲೆಕ್ಷನ್‌ ಮಾಹಿತಿ ರಿವೀಲ್‌ ಆಗಲಿದೆ. ಉಳಿದಂತೆ ನಾವು ಹ್ಯಾಪಿ ಆಗಿದ್ದೇವೆ. ಇಂತಹದ್ದೊಂದು ಅದ್ದೂರಿ ವೆಚ್ಚದ ಚಿತ್ರ ಮಾಡಿದ್ದಕ್ಕೂ ಸಾರ್ಥಕ ಎನಿಸಿದೆ. ಚಿತ್ರ ಬಿಡುಗಡೆಯಾದ ಐದು ಭಾಷೆಗಳಲ್ಲೂ ನಾವು ನಿರೀಕ್ಷೆ ಮಾಡಿದಕ್ಕಿಂತ ಹೆಚ್ಚಾಗಿ ರೆಸ್ಪಾನ್ಸ್‌ ಸಿಕ್ಕಿದೆ.- ಕೃಷ್ಣ, ನಿರ್ದೇಶಕ

ಪ್ರೇಕ್ಷಕನ ಕಣ್ಣಲ್ಲಿ ಕಂಡಂತೆ ‘ಪೈಲ್ವಾನ್’!

10 ಕೋಟಿ ಕಲೆಕ್ಷನ್‌ ಮಾಡಿ ದಾಖಲೆ ಸೃಷ್ಟಿಸಿತು ಎನ್ನುವ ಮಾತುಗಳು ಕೇಳಿಬಂದಿದ್ದವು. ಮೂರು ದಿನಗಳ ಗಳಿಕೆ ಒಟ್ಟು 25 ಕೋಟಿ ದಾಟಿತ್ತು. ಈಗ ಹತ್ತು ದಿನಕ್ಕೆ . 85 ಕೋಟಿ ಕಲೆಕ್ಷನ್‌ ಮಾಡಿದೆ ಎನ್ನುತ್ತಿವೆ ಗಾಂಧಿನಗರದ ಮೂಲಗಳು. ಇದು ನಿಜವಾಗಿದ್ದರೆ, ಸೋಮವಾರಕ್ಕೆ ‘ಪೈಲ್ವಾನ್‌’ . 100 ಕೋಟಿ ಕ್ಲಬ್‌ಗೆ ಸೇರ್ಪಡೆ ಆಗುವುದು ಖಚಿತ.

‘ಪೈಲ್ವಾನ್‌’ ಕಲೆಕ್ಷನ್‌ ಕುರಿತಂತೆ ಚಿತ್ರ ತಂಡ ಇದುವರೆಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಅಧಿಕೃತ ಲೆಕ್ಕಚಾರ ಸಿಗುವ ತನಕ ಗಳಿಕೆಯ ಅಂದಾಜು ವಿವರ ನೀಡುವುದು ಕಷ್ಟಎನ್ನುತ್ತಿದೆ ಚಿತ್ರತಂಡ. ಅದು ಸತ್ಯವೂ ಹೌದು. ಆದರೆ ಚಿತ್ರಕ್ಕೆ ಸಿಕ್ಕ ಅತ್ಯದ್ಭುತ ಪ್ರತಿಕ್ರಿಯೆ ಆಧರಿಸಿಯೇ ಕಲೆಕ್ಷನ್‌ ಲೆಕ್ಕಾಚಾರ ಹಾಕುತ್ತಿದೆ ಗಾಂಧಿನಗರ. ಜತೆಗೆ ಅದು ದೊಡ್ಡ ಮಟ್ಟದಲ್ಲೇ ಬಿಡುಗಡೆ ಆಗಿದೆ. ಚಿತ್ರತಂಡವೇ ಹೇಳಿಕೊಂಡಂತೆ 3500 ಕ್ಕೂ ಹೆಚ್ಚು ಸ್ಕ್ರೀನ್‌ನಗಳಲ್ಲಿ ತೆರೆ ಕಂಡಿದೆ. ಆ ಪ್ರಕಾರ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ‘ಪೈಲ್ವಾನ್‌’ ಚಿತ್ರ . 100 ಕೋಟಿ ಕ್ಲಬ್‌ಗೆ ಸೇರುತ್ತದೆ ಎನ್ನುವುದು ಸಿನಿಮಾ ಮಂದಿ ಮಾತು.

ಪತ್ತೆಯಾಗ್ತಿದೆ ಪೈರಸಿ ಜಾಲ, ಫೈಟ್ ಮುಂದುವರಿಯಲಿದೆ; ಪೈಲ್ವಾನ್ ಶಪಥ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Kannada Serials: ಸೀರಿಯಲ್​ ನಾಯಕಿಯರು ಭಾರಿ ಸಂಕಷ್ಟದಲ್ಲಿ! ದೀಪಾ, ನಿಧಿ ಆಯ್ತು ಈಗ ಭಾರ್ಗವಿಯೂ ಜೈಲಿಗೆ- ಏನಾಗ್ತಿದೆ ಇಲ್ಲಿ? ​
Amruthadhaare Serial: ಬಲು ಕಿಲಾಡಿ ಈ ಅಜ್ಜಿ! ಕೊನೆ ಆಸೆ ಈಡೇರಿಸಿಕೊಳ್ತೇನಂತ ಸತ್ತೇ ಹೋಗೋದಾ? ಮಾಡಿದ್ದೇನು ನೋಡಿ!