
ಚಿತ್ರದ ಹೆಸರು ‘ಸುವರ್ಣ ಸುಂದರಿ’. ತೆಲುಗು, ಕನ್ನಡದಲ್ಲಿ ಮೊದಲು ತೆರೆಕಂಡು ನಂತರ ತಮಿಳು ಹಾಗೂ ಹಿಂದಿಗೂ ಹೋಗಲಿರುವ ಈ ಚಿತ್ರವನ್ನು ನಿರ್ದೇಶಿಸಿರುವುದು ಎಂ.ಎಸ್.ಎನ್ ಸೂರ್ಯ. ವಿಶೇಷ ಅಂದರೆ ಡಾ ಜಯಪ್ರದಾ ಮತ್ತೊಮ್ಮೆ ಕನ್ನಡದಲ್ಲಿ ನಟಿಸುತ್ತಿದ್ದಾರೆ. ‘ಸುವರ್ಣ ಸುಂದರಿ’ ಚಿತ್ರದ ಮುಖ್ಯ ಪಾತ್ರಧಾರಿಯೇ ಅವರು.
ತೆಲುಗಿನ ‘ಅರುಂಧತಿ’ ಮಾದರಿಯಲ್ಲಿ ಮೂಡಿ ಬಂದಿರುವ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಮಾಡಲಾಗಿದೆ. 10 ನಿಮಿಷದ ಕಪ್ಪು ಬಿಳುಪು ಸನ್ನಿವೇಶಗಳು, 15 ನಿಮಿಷದ ಗ್ರಾಫಿಕ್ಸ್ ತಂತ್ರಜ್ಞಾನ ಅಳವಡಿಸಿಕೊಂಡಿರುವ ಈ ಚಿತ್ರದ ಟೀಸರ್‌ಗೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಸಾಯಿ ಕಾರ್ತಿಕ್ ಸಂಗೀತ, ಈಶ್ವರ್ ಛಾಯಾಗ್ರಹಣ ಇರುವ ಈ ಚಿತ್ರ ಸುಮಾರು 600 ವರ್ಷಗಳ ಹಿಂದಿನ ಇತಿಹಾಸಕ್ಕೆ ತೆರಳಿ ಮೂರು ಹಂತಗಳಲ್ಲಿ ಪ್ರೇಕ್ಷಕನಿಗೆ ಚಾರಿತ್ರಿಕ ಘಟನೆಗಳ ದರ್ಶನ ಮಾಡಿಸುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.