
ಪುನೀತ್ ರಾಜ್‌ಕುಮಾರ್, ಶ್ರೀಮುರಳಿ ಅವರು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಯೋಗೀಶ್ ಚಿತ್ರಕ್ಕೆ ಶುಭ ಕೋರಿದ್ದರು. ಈಗ ಜಗ್ಗೇಶ್ ಸರದಿ. ಇಡೀ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡುವ ಮೂಲಕ ‘ಲಂಬೋದರ’ನಿಗೆ ಸಾಥ್ ನೀಡಿದ್ದಾರೆ ಜಗ್ಗೇಶ್. ಚಿತ್ರದಲ್ಲಿನ ಪಾತ್ರಗಳ ಪರಿಚಯ ಹಾಗೂ ಕತೆಯಲ್ಲಿ ಬರುವ ಕೆಲವೊಂದು ತಿರುವುಗಳಿಗೆ ಜಗ್ಗೇಶ್ ಅವರ ಧ್ವನಿಯೇ ಹೈಲೈಟ್.
ಭಿನ್ನ ರೀತಿಯ ಕಾಮಿಡಿ ಚಿತ್ರವನ್ನು ಯೋಗೀಶ್ ಮಾಡುತ್ತಿದ್ದು, ನಿರ್ದೇಶಕ ಕೃಷ್ಣರಾಜ್ ಅವರು ಯೋಗಿ ಇಮೇಜ್‌ಗೆ ತದ್ವಿರುದ್ಧವಾದ ಸಿನಿಮಾ ಮಾಡಿದ್ದಾರೆ. ‘ಬಸವನಗುಡಿ, ಬೆಂಗಳೂರು’ ಎಂಬ ಟ್ಯಾಗ್ ಲೈನ್ ಒಳಗೊಂಡಿರುವ ಈ ಚಿತ್ರಕ್ಕೆ ಈಗಷ್ಟೇ ಜಗ್ಗೇಶ್ ಹಿನ್ನೆಲೆ ಧ್ವನಿ ಮುಗಿಸಿದ್ದಾರೆ. ‘ನಾನು ಚಿತ್ರದ ದೃಶ್ಯಗಳನ್ನು ನೋಡಿದೆ. ತುಂಬಾ ಚೆನ್ನಾಗಿ ಬಂದಿದೆ.
ಮನರಂಜನೆಗೆ ಕೊರತೆ ಇಲ್ಲ. ನನಗೆ ಖುಷಿಯಾಗಿ ಈ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡುವುದಕ್ಕೆ ಒಪ್ಪಿಕೊಂಡೆ. ತುಂಬಾ ದಿನಗಳ ನಂತರ ಯೋಗೀಶ್ ಹೊಸ ರೀತಿಯ ಸಿನಿಮಾ ಮೂಲಕ ಬರುತ್ತಿ ದ್ದಾರೆಂಬುದರಲ್ಲಿ ಎರಡು ಮಾತಿಲ್ಲ’ ಎಂಬು ದು ನಟ ಜಗ್ಗೇಶ್ ಮಾತು. ವಿಶ್ವೇಶ್ವರ್ ಪಿ ಹಾಗೂ ರಾಘವೇಂದ್ರ ಭಟ್ ನಿರ್ಮಾಣದ ಚಿತ್ರವಿದು. ಅಕಾಂಕ್ಷ ಈ ಚಿತ್ರದ ನಾಯಕಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.