ಸಾಹಿತಿ ಬರಗೂರು ರಾಮಚಂದ್ರಪ್ಪ ‘ಬಯಲಾಟದ ಭೀಮಣ್ಣ’ ಸಿನಿಮಾ ನಿರ್ದೇಶಿಸಿದ ನಂತರವೀಗ ಅವರು ಮತ್ತೊಂದು ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಈಗವರು ಹಳಗನ್ನಡದ ಕಾವ್ಯ ಜನ್ನನ ‘ಯಶೋಧರ ಚರಿತೆ’ಯನ್ನು ಆಧರಿಸಿ ಸಿನಿಮಾ ಮಾಡಲು ಹೊರಟಿದ್ದಾರೆ. ಸಿನಿಮಾದ ಹೆಸರು ‘ಅಮೃತಮತಿ’.
ಸಾಹಿತಿ ಬರಗೂರು ರಾಮಚಂದ್ರಪ್ಪ ‘ಬಯಲಾಟದ ಭೀಮಣ್ಣ’ ಸಿನಿಮಾ ನಿರ್ದೇಶಿಸಿದ ನಂತರವೀಗ ಅವರು ಮತ್ತೊಂದು ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಈಗವರು ಹಳಗನ್ನಡದ ಕಾವ್ಯ ಜನ್ನನ ‘ಯಶೋಧರ ಚರಿತೆ’ಯನ್ನು ಆಧರಿಸಿ ಸಿನಿಮಾ ಮಾಡಲು ಹೊರಟಿದ್ದಾರೆ. ಸಿನಿಮಾದ ಹೆಸರು ‘ಅಮೃತಮತಿ’.
ರಾಜಕಾರಣಕ್ಕೆ ಸುದೀಪ್? ಚಿರಂಜೀವಿಯಿಂದ ಪೈಲ್ವಾನ್ ಕಲಿತ ಪಾಠ
ಜನ್ನನ ಯಶೋಧರ ಚರಿತೆಯಲ್ಲಿ ‘ಅಮೃತಮತಿ’ ಪ್ರಮುಖ ವ್ಯಕ್ತಿ. ಆ ಪಾತ್ರವನ್ನೇ ಕೇಂದ್ರವಾಗಿಸಿಕೊಂಡು ‘ಅಮೃತಮತಿ’ ಹೆಸರಲ್ಲಿ ಸಿನಿಮಾ ಮಾಡಲು ಬರಗೂರು ರಾಮಚಂದ್ರಪ್ಪ ಮುಂದಾಗಿರುವುದು ವಿಶೇಷ. ಇನ್ನು ಬೆಳ್ಳಿಪರದೆ ಮೇಲೆ ಐತಿಹಾಸಿಕ ಹಾಗೂ ಪೌರಾಣಿಕ ಕತೆಗಳಲ್ಲಿನ ಮಹಿಳಾ ಕೇಂದ್ರಿತ ಚಿತ್ರಗಳು ಈಗಾಗಲೇ ದೊಡ್ಡ ಸದ್ದು ಮಾಡಿವೆ. ಈಗ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಚಿತ್ರವೂ ಮಹಿಳಾ ಕೇಂದ್ರಿತ ಸಿನಿಮಾವೇ. ಹಾಗಾಗಿ ‘ಅಮೃತಮತಿ’ ಬೆಳ್ಳಿಪರದೆ ಮೇಲೆ ಮೂಡಿ ಬರಲಿರುವ ಬಗ್ಗೆ ಸಾಕಷ್ಟುಕುತೂಹಲವಿದೆ.
ಅಮೃತಮತಿ ಪಾತ್ರದಲ್ಲಿ ಹರಿಪ್ರಿಯಾ
ಇಲ್ಲಿನ ಇನ್ನೊಂದು ಇಂಟರೆಸ್ಟಿಂಗ್ ಸಂಗತಿ ಅಂದ್ರೆ ನಟಿ ಹರಿಪ್ರಿಯಾ ಈ ಚಿತ್ರದ ನಾಯಕಿ ಆಗಿರುವುದು. ಇಲ್ಲಿ ಅಮೃತಮತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಹರಿಪ್ರಿಯಾ. ಯಶೋಧರ ಚರಿತೆಯಲ್ಲಿ ರಾಜ ಯಶೋಧರ ಮತ್ತು ರಾಣಿ ಅಮೃತಮತಿ. ಆಕೆ ಕುದುರೆಲಾಯದಲ್ಲಿರುವ ಹಾಡುಗಾರ ಕುರೂಪಿ ಅಷ್ಟಾವಂಕನನ್ನು ಪ್ರೇಮಿಸುತ್ತಾಳೆ.
ಮೂರನೇ ಮಗುವಿನ ನಿರೀಕ್ಷೆಯಲ್ಲಿ ಶಾಹಿದ್-ಮೀರಾ ದಂಪತಿ?
ಆತ ಎಷ್ಟೇ ಹಿಂಸೆ ನೀಡಿದರೂ ಆ ಕುರೂಪಿ ಅಷ್ಟಾವಂಕನನ್ನೇ ಆರಾಧಿಸುತ್ತಾಳೆ. ಇದು ರಾಜ ಯಶೋಧರನಿಗೆ ತಿಳಿಯುತ್ತದೆ. ಇಂಥಾ ಕತೆಯನ್ನು ಬರಗೂರು ಹೇಗೆ ತೆರೆ ಮೇಲೆ ತರುತ್ತಾರೆ ಎನ್ನುವುದು ಸದ್ಯದ ಕುತೂಹಲ.
‘ಚಿತ್ರದ ಕತೆಯ ಬಗ್ಗೆ ಬರಗೂರು ಸದ್ಯಕ್ಕೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಚಿತ್ರ ಸೆಟ್ಟೇರಿದ ನಂತರವೇ ಚಿತ್ರದ ಕುರಿತು ವಿವರವಾಗಿ ಮಾತನಾಡುತ್ತೇನೆ’ ಎನ್ನುತ್ತಾರೆ. ಮಗಳು ಜಾನಕಿ ಧಾರವಾಹಿಯ ಖ್ಯಾತಿಯ ನಟಿ ಸುಪ್ರಿಯಾ ರಾವ್ ಕೂಡ ಇಲ್ಲಿನ ಮತ್ತೊರ್ವ ಪ್ರಮುಖ ಪಾತ್ರಧಾರಿ.