ಕಿಚ್ಚನ ಕೋಟಿಗೊಬ್ಬ-3 ಸಂಭಾವನೆ ಕೇಳಿದ್ರೆ ಶಾಕ್!

Published : Nov 29, 2017, 09:26 PM ISTUpdated : Apr 11, 2018, 12:46 PM IST
ಕಿಚ್ಚನ ಕೋಟಿಗೊಬ್ಬ-3 ಸಂಭಾವನೆ ಕೇಳಿದ್ರೆ ಶಾಕ್!

ಸಾರಾಂಶ

ಕಿಚ್ಚ ಸುದೀಪ್ ಸೂಪರ್ ಡ್ಯೂಪರ್ ಹೀರೋ. ದುಡ್ಡು ಹಾಕೋರಿಗೆ ಮೋಸ ಆಗೋದಿಲ್ಲ. ವಿತರಕರೂ ಫುಲ್ ದುಡ್ ಮಾಡಿಕೊಳ್ತಾರೆ. ಕೋಟಿಗೊಬ್ಬ-2 ಸಿನಿಮಾ ಅದನ್ನ ಸಾಬೀತು ಮಾಡಿದೆ

ಕನ್ನಡದಲ್ಲಿ ಕೋಟಿ ಕೋಟಿ ಪಡೆಯೊ ಸೂಪರ್ ಸ್ಟಾರ್ ಇದ್ದಾರೆ. ಆದರೆ, ಈ ಕೋಟಿಗೊಬ್ಬ ಅವರೆಲ್ಲರಿಗಿಂತಲೂ ಒಂದ್ ಕೈ ಮುಂದೆ. ಕೋಟಿ ಕೋಟಿ ಪಡೆಯುತ್ತಲೇ ಕೋಟಿಗೊಬ್ಬ ಸಿನಿಮಾ ಮಾಡ್ತಿದ್ದಾರೆ.

ಕನ್ನಡದ ಕೋಟಿಗೊಬ್ಬ. ಇದು ಸತ್ಯವೇ. ಆದರೆ, ಕನ್ನಡದಲ್ಲಿ ಕೋಟಿ ಪಡೆಯೋರ ಸಂಖ್ಯೆ ಕಡಿಮೆ ಏನೂ ಇಲ್ಲ. ಕೋಟಿ ಕೋಟಿ ಪಡೆಯೋ ಸೂಪರ್ ಸ್ಟಾರ್'ಗಳೇ ಕನ್ನಡದಲ್ಲಿರೋದು. ಅವರ ಸಿನಿಮಾಕೆ ದುಡ್ಡು ಹಾಕಿದರೆ ನಿರ್ಮಾಪಕ ಫುಲ್ ಸೇಫ್. ಅದಕ್ಕೆ ತಾನೇ ಇವರ ಕೋಟಿ ಫಿಗರ್ ಇನ್ನೂ ಏರ್ತಿರೋ. ಆದರೆ, ನಾವ್ ಹೇಳ್ತೀರೋ ಈ ಕೋಟಿ ವೀರ ಡಿಫರಂಟ್. ಮಾಡೋ ಸಿನಿಮಾನೂ ವಿಭಿನ್ನ. ಪಡೆಯೋ ದುಡ್ಡು ಎಲ್ಲರಕ್ಕಿಂತಲೂ ಕೊಂಚ ಹೆಚ್ಚು. ಅವರೆ ಮಿಸ್ಟರ್ ಹೆಬ್ಬುಲಿ. ಅವರೇ ಮಿಸ್ಟರ್ ಕಿಚ್ಚ. ಅವರೇ ಕನ್ನಡದ ಅಭಿನಯ ಚಕ್ರವರ್ತಿ. ಕಿಚ್ಚನ ಕೋಟಿಗೊಬ್ಬ-2 ಸೂಪರ್ ಡ್ಯೂಪರ್,ನಿರ್ಮಾಪಕ ಸೂರಪ್ ಬಾಬು ಫುಲ್ ಸೇಫ್,ಕೋಟಿಗೊಬ್ಬ ಚಿತ್ರಕ್ಕೆ ಹಾಕಿದ್ದ ದುಡ್ಡು ವಾಪಸ್
ಕಿಚ್ಚ ಸುದೀಪ್ ಸೂಪರ್ ಡ್ಯೂಪರ್ ಹೀರೋ. ದುಡ್ಡು ಹಾಕೋರಿಗೆ ಮೋಸ ಆಗೋದಿಲ್ಲ. ವಿತರಕರೂ ಫುಲ್ ದುಡ್ ಮಾಡಿಕೊಳ್ತಾರೆ. ಕೋಟಿಗೊಬ್ಬ-2 ಸಿನಿಮಾ ಅದನ್ನ ಸಾಬೀತು ಮಾಡಿದೆ.ಅದರಲ್ಲೂ  ಕೋಟಿಗೊಬ್ಬ-2 ಸಿನಿಮಾದ ನಿರ್ಮಾಪಕ ಸೂರಪ್ಪ ಬಾಬು ಕೂಡ ಆಗಲೇ ಕಿಚ್ಚನ ಜೊತೆಗೆ ಮತ್ತೊಂದು ಸಿನಿಮಾ ಮಾಡೋಕೆ ಆಸೆ ಪಟ್ಟಿದ್ದರು. ಅದುವೇ ಈಗಿನ ಕೋಟಿಗೊಬ್ಬ-3 ಸಿನಿಮಾ.
ಕೋಟಿಗೊಬ್ಬ-3 ಚಿತ್ರಕ್ಕೆ ಕಿಚ್ಚನಿಗೆ 8 ಕೋಟಿ ಸಂಭಾವನೆ
ಕೋಟಿಗೊಬ್ಬ-3 ಚಿತ್ರದ ಕೆಲಸ ನಡೀತಿದೆ. ಸ್ಕ್ರಿಪ್ಟಿಂಗ್ ಕೂಡ ಆಗುತ್ತಿದೆ. ಆದರೆ, ಸದ್ಯ ಸೂರಪ್ಪ ಬಾಬು ತಮ್ಮ ಚಿತ್ರಕ್ಕೆ ಕೊಟ್ಟ ಸಂಭಾವನೆಯ ಸುದ್ದಿಯನ್ನ ಹೊರಗೆಡವಿದ್ದಾರೆ. ಇಷ್ಟು ಬಿಟ್ರೆ, ಕಿಚ್ಚನ ಈ ಕೋಟಿಗೊಬ್ಬ-3 ಸಿನಿಮಾ ಕೂಡ ಧಮಾಕಾ ಮಾಡೋ ಥರವೇ ಕತೆ ರೆಡಿಯಾಗ್ತಿದೆ.ಯಾವುದಕ್ಕೂ ವೇಟ್ ಮಾಡಿ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಆಗ ಕಿಚ್ಚ ಸುದೀಪ್‌ ಹೇಳಿದ್ರೂ ಕೇಳಲಿಲ್ಲ; ಈಗ ಗಿಲ್ಲಿ ನಟ ಶರಣಾಗುವಂತೆ ಮಾಡಿದ ರಕ್ಷಿತಾ ಶೆಟ್ಟಿ
ಐಶ್ವರ್ಯಾ ರೈ ನೆರಳಲ್ಲಿ ಮರೆಯಾದ ಆ ನೀಲಿಗಣ್ಣಿನ ಸುಂದರಿ