ರೈ ಸಿನಿಮಾ ನಿಂತಿಲ್ಲ, ಶೀಘ್ರದಲ್ಲೇ ಶುರು

By Suvarna Web DeskFirst Published Nov 29, 2017, 8:31 PM IST
Highlights

ಮುತಪ್ಪ ರೈ ಜೀವನ ಕತೆಯನ್ನು ಒಳಗೊಂಡ ರೈಸಿನಿಮಾ ಆಗುವುದಿಲ್ಲ ಎಂದೇ ಎಲ್ಲರುನಿರ್ಧರಿಸಿದ್ದರು. ಆದರೆ, ಹೀಗೆ ಟೇಕಾಫ್ ಆಗದೆ ಆರಂಭದಲ್ಲೇ ನಿಂತು ಹೋಗಿದ್ದ ಚಿತ್ರವನ್ನು ನಿರ್ಮಾಪಕ ಪದ್ಮನಾಭ್ ಆರಂಭಿಸುವುದಕ್ಕೆ ಮುಂದಾಗಿದ್ದಾರೆ.

ಕನ್ನಡದಲ್ಲಿ ‘ರೈ’ ಹೆಸರಿನ ಸಿನಿಮಾವೊಂದು ಸೆಟ್ಟೇರಿದ್ದು ನೆನಪಿರಬೇಕಲ್ಲ. ರಾಮ್‌ಗೋಪಾಲ್ ವರ್ಮಾ, ವಿವೇಕ್ ಒಬೆರಾಯ್ ಕಾಂಬಿನೇಷನ್‌ನಲ್ಲಿ ಶುರುವಾಗಿದ್ದ ಈ ಚಿತ್ರ ಮುತ್ತಪ್ಪ ರೈ ಅವರ ಜೀವನ ಚರಿತ್ರೆಯನ್ನು ಆಧರಿಸಿದ್ದು ಎಂಬುದು ಪ್ರತ್ಯೇಕವಾಗಿ ಹೇಳ ಬೇಕಿಲ್ಲ. ವರ್ಮಾ ಶುರು ಮಾಡಿದ ಈ ‘ರೈ’ ಸಿನಿಮಾ ಸದ್ದಿಲ್ಲದೆ ನಿಂತು ಹೋಗಿತ್ತು. ಈ ಬಗ್ಗೆ ವರ್ಮಾ ‘ರೈ ಸಿನಿಮಾ ನಾನು ಮಾಡುತ್ತಿಲ್ಲ’ ಎಂದು ಹೇಳಿಕೆ ಕೊಟ್ಟರು. ಅಲ್ಲಿಗೆ ಮುತಪ್ಪ ರೈ ಜೀವನ ಕತೆಯನ್ನು ಒಳಗೊಂಡ ‘ರೈ’ ಸಿನಿಮಾ ಆಗುವುದಿಲ್ಲ ಎಂದೇ ಎಲ್ಲರು ನಿರ್ಧರಿಸಿದ್ದರು. ಆದರೆ, ಹೀಗೆ ಟೇಕಾಫ್ ಆಗದೆ ಆರಂಭದಲ್ಲೇ ನಿಂತು ಹೋಗಿದ್ದ ಚಿತ್ರ ವನ್ನು ನಿರ್ಮಾಪಕ ಪದ್ಮನಾಭ್ ಆರಂಭಿಸುವುದಕ್ಕೆ ಮುಂದಾಗಿದ್ದಾರೆ. ಹಾಗಂತ ಅವರು ವರ್ಮಾ ಜತೆಗೆ ಈ ಚಿತ್ರ ಮಾಡುತ್ತಿಲ್ಲ. ಸಂಪೂರ್ಣವಾಗಿ ಬೇರೆಯದ್ದೇ ತಂಡವನ್ನಿಟ್ಟುಕೊಂಡು ಈ ‘ರೈ’ ಚಿತ್ರಕ್ಕೆ ಚಾಲನೆ ಕೊಡಲಿದ್ದಾರಂತೆ.

click me!