
ಗೋಲ್ಡನ್ ಸ್ಟಾರ್ ಗಣೇಶ್‌ಗೆ ಇತ್ತೀಚೆಗೆ ಬ್ರಿಟಿಷ್ ಏರ್‌ವೇಸ್‌ನಲ್ಲೊಂದು ಅಚ್ಚರಿ ಕಾದಿತ್ತು. ಮೊನ್ನೆ ಅವರು ಲಂಡನ್‌ಗೆ ಹೋಗಿದ್ದರಂತೆ. ವಾಪಸ್ಸು ಬರುವಾಗ ಬ್ರಿಟಿಷ್ ಏರ್‌ವೇಸ್ ಹತ್ತಿದ್ದಾರೆ. ಅದೇ ವಿಮಾನದ ಗಗನಸಖಿ ಗಣೇಶ್ ಬಳಿಗೆ ಓಡಿಬಂದು ‘ಸಾರ್ ನಿಮ್ಮ ಮುಂಗಾರು ಮಳೆ-2 ಸಿನಿಮಾ ಬಿಡುಗಡೆ ಯಾವಾಗ?’ ಎಂದು ಕೇಳಿದ್ದಾಳೆ! ಗಣೇಶ್‌ಗೆ ಆಗ ಅಚ್ಚರಿ. ‘ಬ್ರಿಟಿಷ್ ಏರ್‌ವೇಸ್‌ನ ಗಗನಸಖಿಗೆ ಮುಂಗಾರು ಮಳೆ-2 ಸಿನಿಮಾ ಹೇಗೆ ಗೊತ್ತು?’ ಎಂದು ಪ್ರಶ್ನಿಸಿದರಂತೆ. ‘ನಾನು ನಾರ್ತ್ ಇಂಡಿಯನ್. ನಿಮ್ಮ ಮುಂಗಾರು ಮಳೆ ಸಿನಿಮಾ ಬಿಡುಗಡೆಯಾದಾಗ ನಾನು ಬೆಂಗಳೂರಿನಲ್ಲಿ ಓದುತ್ತಿದ್ದೆ. ಆಗ ಆ ಚಿತ್ರದ ಹಾಡುಗಳು ನನ್ನ ಸ್ನೇಹಿತೆಯರ ಮೂಲಕ ಕೇಳಿದೆ. ತುಂಬಾ ಚೆನ್ನಾಗಿತ್ತು. ಹೀಗಾಗಿ ಸಿನಿಮಾ ನೋಡಿದೆ. ನಾನು ಕೆಲಸ ಮಾಡುವ ವಿಮಾನ ಲಂಡನ್‌ನಿಂದ ಬೆಂಗಳೂರಿಗೆ ಬರುತ್ತದೆ. ಒಮ್ಮೆ ಪ್ರಯಾಣ ಮಾಡಿದರೆ ಎರಡು ದಿನ ವಿಶ್ರಾಂತಿ ಇರುತ್ತದೆ. ಈಗ ಮುಂಗಾರು ಮಳೆ-2 ಬರುತ್ತಿದೆ ಅಂತ ಗೊತ್ತಾಗಿದ್ದು ಇತ್ತೀಚೆಗೆ ಬೆಂಗಳೂರಿಗೆ ಬಂದಾಗ’ ಎಂದು ಗಗನಸಖಿ ಹೇಳಿದ್ದನ್ನು ಕೇಳಿ ಗಣೇಶ್ ಹುಬ್ಬು ಅರ್ಧ ಇಂಚು ಮೇಲಕ್ಕೆ ಹಾರಿತ್ತು. ಕನ್ನಡ ಗೊತ್ತಿಲ್ಲದಿದ್ದರೂ ಸಿನಿಮಾ ಗಡಿ ದಾಟಿ ಪ್ರಭಾವಿಸುವ ರೀತಿ, ಸಂಗೀತದ ಮೋಡಿ ಮುಂಗಾರು ಹುಡುಗನನ್ನು ಬೆರಗಿನ ಬಾಗಿಲಿಗೆ ತಂದು ನಿಲ್ಲಿಸಿತ್ತು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.