
ಮುಂಬೈ(ಸೆ.06): ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಟೆಲಿಕಾಂ ಇಂಡಸ್ಟ್ರೀಗೆ ತನ್ನ ಜಿಯೋ ನೆಟ್ವರ್ಕ್ ಪರಿಚಯಿಸಿದ್ಧೇ ತಡ ಎಲ್ಲೆಲ್ಲೂ ಇದರದ್ದೇ ಮಾತು. ಅಗ್ಗದ ಡೇಟಾ, ಸಿಮ್ ಕಾರ್ಯವೈಖರಿ ಸೇರಿದಂತೆ ಹಲವು ವಿಶೇಷತೆಗಳ ಬಗ್ಗೆ ಸುದ್ದಿಯಾಗುತ್ತಲೇ ಇದೆ. ಈ ಬಾರಿ ಬಾಲಿವುಡ್ ನಟಿ ಪ್ರಿಯಾಂಕಾಚೋಪ್ರಾ ಜಿಯೋ ಸಬ್`ಸ್ಕ್ರಿಪ್ಷನ್`ಗಾಗಿ ಸಲ್ಲಿಸಿದ್ದಾರೆನ್ನಲಾದ ಅಪ್ಲಿಕೇಶನ್ ಒಂದು ಆನ್`ಲೈನ್`ನಲ್ಲಿ ಭಾರೀ ಸದ್ದು ಮಾಡುತ್ತಿದೆ.
ಪಾಸ್`ಪೋರ್ಟ್ ಸೈಜ್ ಫೋಟೋ ಇರುವ ಅಪ್ಲಿಕೇಶನ್ನಿನನಲ್ಲಿ ಸಹಿ ಸಹ ಮಾಡಲಾಗಿದೆ. ಮಹಾರಾಷ್ಟ್ರ ಎಂದು ಅಡ್ರೆಸ್ ನೀಡಲಾಗಿದೆ. ಹಲವರು ಟ್ವಿಟ್ಟರ್`ನಲ್ಲಿ ಈ ಅಪ್ಲಿಕೆಶನ್ ಪೋಸ್ಟ್ ಮಾಡಿದ್ದಾರೆ. ಅರ್ಜಿಯ ಸತ್ಯಾಸತ್ಯತೆ ಇನ್ನಷ್ಟೆ ತಿಳಿಯಬೇಕಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಆದರೆ, ಕ್ವಾಂಟಿಕೋ ಸೀಸನ್-2 ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಚೋಪ್ರಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.