ಸೋಷಲ್ ಮಿಡಿಯಾದಲ್ಲಿ ಕೋಟಿ ದಾಟುತ್ತಿದೆ '6 ಅಡಿ' ಕಟೌಟ್‌ಗಳ ಚಿತ್ರ!

By Kannadaprabha NewsFirst Published Jan 24, 2019, 9:42 AM IST
Highlights

ಯೂಟ್ಯೂಬ್‌ನಲ್ಲಿ ಕನ್ನಡ ಚಿತ್ರರಂಗ ಧೂಳೆಬ್ಬಿಸುತ್ತಿವೆ. ಒಂದೊಂದು ಹಾಡು ಕೂಡ ಲಕ್ಷಾಂತರ ಹಿಟ್ಸ್‌ ಪಡೆಯುತ್ತಿವೆ. ಒಂದು ಕಾಲದಲ್ಲಿ ಯೂಟ್ಯೂಬ್‌ನಲ್ಲಿ ಕನ್ನಡ ಚಿತ್ರಗಳ ಸದ್ದು ಇರಲಿಲ್ಲ. ಆದರೆ ಈಗ ಸೋಷಲ್‌ ಮೀಡಿಯಾದಲ್ಲೆಲ್ಲಾ ಕಡೆ ಕನ್ನಡ ಚಿತ್ರಗಳದೇ ಹವಾ.

ಕನ್ನಡ ಸಿನಿಮಾಗಳು ಯೂಟ್ಯೂಬ್‌ನಲ್ಲಿ ಸಾವಿರಗಳ ಸಂಖ್ಯೆಯಲ್ಲಿ ಮಾತ್ರ ವೀಕ್ಷಕರನ್ನು ಸೆಳೆಯುತ್ತಿದ್ದವು. ಆದರೆ, ಈಗ ಮಿಲಿಯನ್‌ ಗಡಿಯನ್ನು ದಾಟಿವೆ.

  • ಸದ್ಯಕ್ಕೆ ಹಾಡು, ಟೀಸರ್‌, ಟ್ರೇಲರ್‌ ವೀಕ್ಷಣೆಯಲ್ಲಿ ಅತಿ ಹೆಚ್ಚು ದಾಖಲೆ ಮಾಡಿರುವುದು ನಟ ಯಶ್‌ ಅಭಿನಯದ ‘ಕೆಜಿಎಫ್‌’ ಸಿನಿಮಾ. ‘ಕೆಜಿಎಫ್‌’ನ ಮೂರು ಹಾಡುಗಳ ಪೈಕಿ ‘ಜೋಕೆ ನಾನು ಬಳ್ಳಿಯ ಮಿಂಚು’ ಹಾಡು 9 ಮಿಲಿಯನ್‌ ಹಾಗೂ ಇದೇ ಹಾಡಿನ ಹಿಂದಿ ವರ್ಷನ್‌ ‘ಗಲಿ ಗಲಿ’ ಹಾಡು 105 ಮಿಲಿಯನ್‌ ವೀಕ್ಷಣೆ ಪಡೆದುಕೊಂಡಿದೆ. ಉಳಿದ ಹಾಡುಗಳು ಸರಾಸರಿ 2 ಮಿಲಿಯನ್‌ ದಾಟಿದೆ.
  • ನಟ ಸುದೀಪ್‌ ಅಭಿನಯದ ‘ಫೈಲ್ವಾನ್‌’ ಚಿತ್ರದ ಕುಸ್ತಿ ಟೀಸರ್‌ಗೆ ಸಾಕಷ್ಟುರೆಸ್ಪಾನ್ಸ್‌ ಬಂದಿದ್ದು, ಈಗಾಗಲೇ 4 ಮಿಲಿಯನ್‌ ಗಡಿ ದಾಟಿದೆ. ಈ ಟೀಸರ್‌ ಬೇರೆ ಬೇರೆ ಭಾಷಿಕರ ಗಮನ ಸೆಳೆಯುತ್ತಿದೆ. ಈ ಟೀಸರ್‌ ರಿಲೀಸಾದ ದಿನ ಟ್ವೀಟರ್‌ನಲ್ಲಿ ಭಾರಿ ಹವಾ ಮೇಂಟೇನ್‌ ಮಾಡಿತ್ತು. ಸಲ್ಮಾನ್‌ ಖಾನ್‌ ಕೂಡ ಶುಭ ಹಾರೈಸಿದ್ದರು.
  • ಸಿನಿಮಾ ಬಿಡುಗಡೆಯ ಹೊತ್ತಿನಲ್ಲಿ ಬಂದ ನಿಖಿಲ್‌ ಕುಮಾರ್‌ ನಟನೆಯ ‘ಸೀತಾರಾಮ ಕಲ್ಯಾಣ’ ಟ್ರೇಲರ್‌ ಧೂಳೆಬ್ಬಿಸುತ್ತಿದೆ. ಈಗಾಗಲೇ ಯೂಟ್ಯೂಬ್‌ ಖಾತೆಯಲ್ಲಿ 5 ಮಿಲಿಯನ್‌ ವೀಕ್ಷಕರ ಸಂಖ್ಯೆ ಜಮೆಯಾಗಿದೆ.
  • ದರ್ಶನ್‌ ಚಿತ್ರದ ಹಾಡು ಸೃಷ್ಟಿಸಿರುವ ಅಬ್ಬರದ್ದೇ ಮತ್ತೊಂದು ಕತೆ. ಯಜಮಾನ ಚಿತ್ರದ ‘ಶಿವನಂದಿ’ ಹೆಸರಿನ ಹಾಡು ಯೂಟ್ಯೂಬ್‌ವೊಂದರಲ್ಲೇ 6 ಮಿಲಿಯನ್‌ ವೀಕ್ಷಕರನ್ನು ತನ್ನತ್ತ ಸೆಳೆದಿದೆ. ‘ಒಂದು ಮುಂಜಾನೆ’ ಎಂದು ಸಾಗುವ ಮೆಲೋಡಿ ಹಾಡಿನ ಖದರ್‌, ಬರೋಬ್ಬರಿ 4 ಮಿಲಿಯನ್‌ ಗಡಿ ದಾಟಿದೆ. ಹಾಗೆ
  • ಪುನೀತ್‌ರಾಜ್‌ಕುಮಾರ್‌ ಅವರು ಕಾಣಿಸಿಕೊಂಡಿರುವ ‘ನಟ ಸಾರ್ವಭೌಮ’ ಚಿತ್ರದ ಟೀಸರ್‌ 1 ಮಿಲಿಯನ್‌ ಕ್ರಾಸ್‌ ಮಾಡಿದರೆ, ಹೊಸ ವರ್ಷದ ಸಂಭ್ರಮಕ್ಕೆ ಬಂದ ಹಾಡು 2 ಮಿಲಿಯನ್‌ ಹಿಟ್ಸ್‌ ಪಡೆದುಕೊಂಡಿದೆ. ಅಲ್ಲದೆ ಧ್ರುವ ಸರ್ಜಾ ನಟನೆಯ ‘ಪೊಗರು’ ಟೀಸರ್‌ ಸದ್ದಿಲ್ಲದೆ ಬಂದರೂ ಯೂಟ್ಯೂಬ್‌ನಲ್ಲಿ ಮಾತ್ರ ಸದ್ದು ಮಾಡುತ್ತಿದೆ. ಇದನ್ನು ನೋಡಿದವರ ಸಂಖ್ಯೆ 3 ಮಿಲಿಯನ್‌.

ಹೀಗೆ ನಮ್ಮ ಸ್ಯಾಂಡಲ್‌ವುಡ್‌ ಹೀರೋಗಳು ಯೂಟ್ಯೂಬ್‌ನಲ್ಲಿ ಹಾಡು, ಟೀಸರ್‌, ಟ್ರೇಲರ್‌ಗಳ ಮೂಲಕ ಮಿಲಿಯನ್‌ಗಳ ಗಡಿಯನ್ನು ದಾಟಿ ‘ಮಿಲಿಯನ್‌ ಸ್ಟಾರ್‌’ಗಳೆನಿಸಿಕೊಳ್ಳುತ್ತಿದ್ದಾರೆ. ನೆಟ್‌ ಜಗತ್ತಿನಲ್ಲಿ ಕನ್ನಡ ಚಿತ್ರಗಳ ಈ ಕ್ರೇಜ್‌ ನೋಡಿಯೇ ಪ್ರತಿಷ್ಠಿತ ನೆಟ್‌ಫ್ಲಿಕ್ಸ್‌, ಅಮೆಜಾನ್‌ನಂತಹ ಸಂಸ್ಥೆಗಳು ಕನ್ನಡ ಚಿತ್ರಗಳ ಮೇಲೆ ಬಂಡವಾಳ ಹೂಡುವುದಕ್ಕೆ ಬರುತ್ತಿವೆ. ಆ ಮೂಲಕ ಕನ್ನಡ ಚಿತ್ರಗಳು ಗ್ಲೋಬಲ್‌ ಮಾರುಕಟ್ಟೆಯ ಕದಂಬಗಳನ್ನು ಮುಟ್ಟುತ್ತಿವೆ.

  • ಕೆಜಿಎಫ್‌ ಗಲಿ ಗಲಿ ಹಾಡು- 105 ಮಿಲಿಯನ್‌
  • ಪೈಲ್ವಾನ್‌ ಟೀಸರ್‌- 4 ಮಿಲಿಯನ್‌
  • ಯಜಮಾನ ಶಿವನಂದಿ ಹಾಡು- 6 ಮಿಲಿಯನ್‌
  • ಸೀತಾರಾಮ ಕಲ್ಯಾಣ ಟ್ರೈಲರ್‌- 5 ಮಿಲಿಯನ್‌
  • ನಟಸಾರ್ವಭೌಮ ಹಾಡು- 2 ಮಿಲಿಯನ್‌
click me!