ಅಯ್ಯಯ್ಯೋ! ಮೀಟೂ ನಾಯಕಿ ಆದ್ರಾ 'ಕಪಟನಾಟಕ ಪಾತ್ರಧಾರಿ'?

Published : Sep 24, 2019, 09:33 AM IST
ಅಯ್ಯಯ್ಯೋ! ಮೀಟೂ ನಾಯಕಿ ಆದ್ರಾ 'ಕಪಟನಾಟಕ ಪಾತ್ರಧಾರಿ'?

ಸಾರಾಂಶ

ಸಾಮಾನ್ಯವಾಗಿ ಸಿನಿಮಾ ಪತ್ರಿಕಾಗೋಷ್ಟಿಗಳಲ್ಲಿ ನಾಯಕ, ನಾಯಕಿ ಇಬ್ಬರಲ್ಲಿ ಯಾರಾದರೂ ಒಬ್ಬರು ಇದ್ದೇ ಇರುತ್ತಾರೆ. ಆದರೆ, ‘ಕಟಪಟನಾಟಕ ಪಾತ್ರದಾರಿ’ ಚಿತ್ರದ ಪರಿಸ್ಥಿತಿಯೇ ಬೇರೆ.

ನಾಯಕ ಬಾಲುನಾಗೇಂದ್ರ, ನಾಯಕಿ ಸಂಗೀತಾ ಭಟ್‌ ಇಬ್ಬರೂ ನಾಪತ್ತೆ. ನಾಯಕ ಬಿಜಿ, ನಾಯಕಿ ಜರ್ಮನಿ. ನಾಯಕಿ ವಿಡಿಯೋ ಕಾನ್ಫರೆನ್ಸಿಂಗಿನಲ್ಲಿ ಮಾತಾಡುತ್ತೇನೆ ಅಂದರೂ ಇಂಟರ್‌ನೆಟ್‌ ಕೈ ಕೊಟ್ಟಿತು. ಹೀಗಾಗಿ ಅವರ ವಿಡಿಯೋ ಮಾತಾಡಿತು.

- ಕ್ಷಮೆ ಇರಲಿ. ನಾನು ಬೆಂಗಳೂರಿನಲ್ಲಿ ಇಲ್ಲ. ಜರ್ಮನಿಯಲ್ಲಿದ್ದೇನೆ. ಹೀಗಾಗಿ ಚಿತ್ರದ ಪತ್ರಿಕಾಗೋಷ್ಟಿಗೆ ಬರಲು ಆಗಲಿಲ್ಲ. ನಾನು ಇಲ್ಲಿಗೆ ಬರುವ ಮುನ್ನವೇ ಚಿತ್ರೀಕರಣ ಮುಗಿಸಿಕೊಟ್ಟಸಿನಿಮಾ ‘ಕಪಟನಾಟಕ ಪಾತ್ರದಾರಿ’.

#MeToo ನಂತರ ಕಪಟ ನಾಟಕ ಸೂತ್ರಧಾರಿಯಾದ್ರಾ ಸಂಗೀತಾ ಭಟ್?

- ಈಗ ಈ ಚಿತ್ರದ ಟ್ರೇಲರ್‌ ಲಾಂಚ್‌ ಆಗುತ್ತಿದೆ ಎಂದು ಕೇಳಿ ಸಾಕಷ್ಟುಖುಷಿ ಆಯಿತು. ಎಲ್ಲರು ತುಂಬಾ ಪ್ರೀತಿಯಿಂದ ಹಗಲು ರಾತ್ರಿ ದುಡಿದು ರೂಪಿಸಿರುವ ಸಿನಿಮಾ ಇದು.

- ನಿರ್ದೇಶಕ ಕ್ರಿಷ್‌ ಅವರು ಒಂದು ಮುದ್ದಾದ ಕತೆ, ಅದಕ್ಕೆ ತಕ್ಕಂತೆ ಚಿತ್ರಕತೆ ಮಾಡಿಕೊಂಡಿದ್ದರು. ಹೀಗಾಗಿ ನಾನು ಈ ಚಿತ್ರವನ್ನು ಒಪ್ಪಿ ನಟಿಸಿದೆ.

- ನಟ ಬಾಲುನಾಗೇಂದ್ರ ಅವರು ಅದ್ಭುತ ನಟ ಅಂತ ಗೊತ್ತಾಗಿದ್ದು ಅವರ ಜತೆ ಕೆಲಸ ಮಾಡಿದ ಮೇಲೆ. ಈ ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಒಂದು ಒಳ್ಳೆಯ ಅವಕಾಶ.

- ನಾನು ಪ್ರತಿ ಚಿತ್ರವನ್ನು ಪ್ರಯೋಗದ ದೃಷ್ಟಿಯಿಂದಲೇ ಒಪ್ಪಿಕೊಳ್ಳುತ್ತಿದ್ದೇನೆ. ಈ ಚಿತ್ರವನ್ನೂ ಹಾಗೆ ಒಪ್ಪಿ ನಟಿಸಿದೆ. ಯಾಕೆಂದರೆ ಮಾನಸಿಕವಾಗಿಯೂ ಈ ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ಳಬೇಕಾಯಿತು. ಒಂದು ಸವಾಲಿನ ಪಾತ್ರ ಎಂದು ಹೇಳಬಹುದು.

- ಕಪಟನಾಟಕ ಪಾತ್ರದಾರಿ ಚಿತ್ರದ ಬಿಡುಗಡೆ ಹೊತ್ತಿಗೆ ಬೆಂಗಳೂರಿನಲ್ಲಿ ಇರುತ್ತೇನೆ. ಈ ಚಿತ್ರದ ಪ್ರಚಾರಕ್ಕೆ ಬೆಂಗಳೂರಿಗೆ ಬರುತ್ತೇನೆ. ಆ ಮೂಲಕ ಮತ್ತೆ ಚಿತ್ರರಂಗಕ್ಕೆ ಬರುವ ಪ್ಲಾನ್‌ ಇದೆ. ಒಳ್ಳೆಯ ಸಿನಿಮಾಗಳು ಸಿಕ್ಕರೆ ಖಂಡಿತ ನಟಿಸುತ್ತೇನೆ.

#MeToo ನಂತರ ಸಂಗೀತಾ ಭಟ್ ಮದ್ವೆ ಫೋಟೋ ರಿವೀಲ್ !

ನಾಯಕ ನಾಯಕಿ ಇಬ್ಬರೂ ಇಲ್ಲ ಎಂದು ನಿರ್ದೇಶಕ ಕ್ರಿಷ್‌ ಹೇಳುತ್ತಿದ್ದಂತೆ ಅತಿಥಿಯಾಗಿ ಬಂದಿದ್ದ ತರುಣ್‌ ಸುಧೀರ್‌ ಸಿಟ್ಟಾದರು. ‘ಚಿತ್ರಕ್ಕೆ ನಾಯಕಿ, ನಾಯಕ ಮುಖ್ಯ. ಏನೇ ಸಮಸ್ಯೆ ಇದ್ದರೂ ಮಾತನಾಡಿಕೊಂಡು ಬಗೆಹರಿಸಿಕೊಳ್ಳಿ. ತಂಡ ಪೂರ್ತಿ ಇದ್ದಾಗ ಚಿತ್ರದ ಪತ್ರಿಕಾಗೋಷ್ಠಿ ಕರೆಯಿರಿ’ ಎಂದು ಸಲಹೆ ನೀಡಿದರು. ಇನ್ನೂ ಈ ಚಿತ್ರದ ಪೋಸ್ಟರ್‌ಗಳನ್ನು ನೋಡಿಯೇ ಫಿದಾ ಆಗಿದ್ದ ನಿರ್ದೇಶಕ ಸಿಂಪಲ್‌ ಸುನಿ, ಇಡೀ ತಂಡಕ್ಕೆ ಶುಭ ಕೋರಲು ಬಂದಿದ್ದ ನಟಿ ಸೋನು ಗೌಡ ಹೀಗೆ ಅತಿಥಿಗಳೇ ಚಿತ್ರತಂಡವಾಗಿ ಮಾತನಾಡಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?