
ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಶೃಂಗೇರಿಗೆ ಭೇಟಿ ನೀಡಿದ್ದು ದೊಡ್ಡ ಸುದ್ದಿಗೆ ಅವಕಾಶ ಮಾಡಿಕೊಟ್ಟಿತ್ತು. ನಟ ನಿಖಿಲ್ ಕುಮಾರಸ್ವಾಮಿ ಮತ್ತು ರಚಿತಾ ವಿವಾಹ ಬಂಧನಕ್ಕೆ ಒಳಗಾಗುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಎಲ್ಲ ಊಹಾಪೋಹಗಳಿಗೆ ಸ್ವತಃ ನಟಿ ರಚಿತಾ ತೆರೆ ಎಳೆದಿದ್ದಾರೆ.
ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ಜನರಿಗೆ, ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.ಹಾಗಾದರೆ ರಚಿತಾ ಏನು ಹೇಳಿದ್ದಾರೆ? ನೋಡಿಕೊಂಡು ಬನ್ನಿ
ನಿಖಿಲ್-ರಚಿತಾ ಕಲ್ಯಾಣ, ಅಸಲಿ ಕತೆ ಏನು?
ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ರಚಿತಾ ರಾಮ್, ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರೋ ವದಂತಿಗಳ ಬಗ್ಗೆ ಒಂದು ಸ್ಪಷ್ಟತೆ ಕೊಡಲು ಬಯಸುತ್ತೇನೆ. ನನ್ನ ಸಿನಿಮಾಗಳ ಕುರಿತಾದ ವಿಷಯಗಳಾಗಲಿ ಅಥವಾ ವೈಯಕ್ತಿಕ ವಿಷಯಗಳಾಗಲಿ ನನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದರೆ ಮಾತ್ರ ಅದು ಸತ್ಯವೆಂದು ಪರಿಗಣಿಸಿ, ಮನರಂಜನೆಗಾಗಿ ಸುಳ್ಳು ವದಂತಿಗಳನ್ನು ಸೃಷ್ಟಿ ಮಾಡಿದರೆ ಖುಷಿಯುಂಟಾಗಬಹುದು, ಆದರೆ ಅದರಿಂದ ನನಗೆ ಹಾಗೂ ವದಂತಿಗಳಲ್ಲಿ ಸಿಲುಕಿದ ಸಂಬಂಧಪಟ್ಟ ವ್ಯಕ್ತಿಗಳಿಗೆ ಬೇಸರ ಉಂಟಾಗುತ್ತದೆ ಎಂಬ ವಿಷಯ ಅರ್ಥ ಮಾಡಿಕೊಂಡರೆ ಉತ್ತಮ.
ಅತಿ ಮುಖ್ಯವಾದ ಸಂಗತಿ ಏನೆಂದರೆ ಸದ್ಯಕ್ಕೆ ನನ್ನ ಮದುವೆ ನಿಶ್ಚಯ ಆಗಿಲ್ಲ. ನಾನು ಮದುವೆ ಆಗುವ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ತಿಳಿಸಿ ಎಲ್ಲರ ಸಮ್ಮುಖದಲ್ಲಿ ಗುರು ಹಿರಿಯರ ಆಶೀರ್ವಾದದೊಂದಿಗೆ ಆಗುತ್ತೇನೆ ಸುಳ್ಳು ವದಂತಿಗಳನ್ನು ನಂಬಿ ವೖಯಕ್ತಿಕ ವಿಚಾರಗಳ ಬಗ್ಗೆ ನಗೆಪಾಟಲು ಮಾಡಬೇಡಿ ಎಂದು ವಿನಮ್ರತೆಯಿಂದ ಕೇಳಿಕೊಳ್ಳುತ್ತಿದ್ದೇನೆ
ನಿಮ್ಮ
ರಚಿತಾ ರಾಮ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.