
ನಟಿ ಮಾನ್ವಿತಾ ಹರೀಶ್ ಹೊಸ ದಾಖಲೆ ಬರೆದಿದ್ದಾರೆ. , ಲಂಡನ್ ಬಿಬಿಸಿ ರೇಡಿಯೋಗೆ ಸಂದರ್ಶನ ನೀಡಿದ ಮೊದಲ ಕನ್ನಡದ ನಟಿಯೆಂಬ ಖ್ಯಾತಿಯನ್ನೂ ಮಾನ್ವಿತಾ ಪಡೆದುಕೊಂಡಿದ್ದಾರೆ.ಹಿಂದೆ ಮಂಗಳೂರಿನಲ್ಲಿ ರೇಡಿಯೋ ಮಿರ್ಚಿ 98.3 ಸ್ಟೇಷನ್ನಲ್ಲಿ ಕಿಲಾಡಿ ಕಾರ್ಯಕ್ರಮವನ್ನು ಮಾನ್ವಿತಾ ನಡೆಸುತ್ತಿದ್ದರು.
ಸೂರಿ ನಿರ್ದೇಶನದ ‘ಕೆಂಡಸಂಪಿಗೆ’ಯಲ್ಲಿ ಅವಕಾಶ ಪಡೆದುಕೊಂಡು ಕನ್ನಡಿಗರ ಮನ ಗೆದ್ದಿದ್ದರು. ಈ ವರ್ಷದ ಯಶಸ್ವಿ ಚಿತ್ರ ‘ಟಗರು’ದಲ್ಲಿ ಅಭಿನಯಿಸಿ ಮನ ಗೆದ್ದಿದ್ದರು.
ಶೂಟಿಂಗ್ ಸಲುವಾಗಿಯೇ ಲಂಡನ್ನಲ್ಲಿ ನಾಗತಿಹಳ್ಳಿ ಚಿತ್ರ ತಂಡದೊಂದಿಗೆ ಇರುವ ಮಾನ್ವಿತಾ ಸಂದರ್ಶನ ನೀಡಿದ್ದಾರೆ. ನಟ ವಶಿಷ್ಟ ಸಿಂಹ ಹಾಗೂ ನಟಿ ಮಾನ್ವಿತಾ ಹರೀಶ್ ಹಾಡುತ್ತಾ ಬಕಿಂಗ್ ಹ್ಯಾಮ್ ಪ್ಯಾಲೇಸ್ ಎದುರು ಹಾಡಿಕುಣಿದದಿದ್ದು ಸುದ್ದಿಯಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.