
'ನಾವು ಮನೆಗ್ ಹೋಗೋದಿಲ್ಲಾ…ನಮ್ಗೆ ಬಾಗಿಲು ತೆಗಿಯೋರಿಲ್ಲಾ.' ಅಂತ ಕುಡುಕ ಗಂಡರಿಗೆ ಅಂತಾನೇ ಬರೆದಿರುವ ಯೋಗರಾಜ್ ಭಟ್ಟರ ಸಾಹಿತ್ಯ ಜನಮೆಚ್ಚುಗೆ ಗಳಿಸುತ್ತಿದೆ. ಹೆಂಡಿರ ಮಕ್ಕಳ ಯೋಚನೆ ಮಾಡೋಕೆ ಬಾರಿಗೆ ಬಂದರೆ ತಪ್ಪೇನಿದೆ, ಮನೆಗೆ ಬನ್ನಿ ನೋಡ್ಕೋತಿನಿ ಅಂತೀರಾ ನಾವೇನ್ ಮನೆ ಕಟ್ಸಿಲ್ವಾ ತಿಂಗಳ ಈ.ಎಂ.ಐ ಕಟ್ಟಲ್ವಾ? ಎಂದೆಲ್ಲಾ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಡಿನಲ್ಲಿದೆ. ಹೆಂಡತಿಯನ್ನೇ ಉದ್ದೇಶಿಸಿ ಭಟ್ಟರು ಹಾಡು ಬರೆದಂತಿದೆ.
ಗಾಯಕ ವಿಜಯ್ ಪ್ರಕಾಶ್ ಧ್ವನಿಯಾಗಿದ್ದು ,ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸ್ಯಾಂಡಲ್ ವುಡ್ ನ ಬಹುತೇಕ ಹೀರೋಗಳು ಹಾಡು ಕೇಳಿ ಮೆಚ್ಚುಗೆ ಸೂಚಿಸಿದ್ದಾರೆ. 'ರಾಂಬೋ 2' ಚಿತ್ರ ಯಶಸ್ವಿಯಾದ ನಂತರ ಶರಣ್ 'ವಿಕ್ಟರಿ-2' ನಲ್ಲಿ ಕಾಣಿಸಿಕೊಳ್ಳುತ್ತಿದ್ದು ನಾಯಕಿಯರಾಗಿ ಅಪೂರ್ವ , ಆಸ್ಮಿತಾ ಸೂದ್ ಕಾಣಿಸಿಕೊಂಡಿದ್ದಾರೆ. ಸಾಧು ಕೋಕಿಲಾ ಮತ್ತು ರವಿಶಂಕರ್ ಬಲ ಕೂಡ ಚಿತ್ರಕ್ಕಿದೆ. ನೀವು ಒಮ್ಮೆ ಹಾಡು ಕೇಳಿಕೊಂಡು ಬನ್ನಿ.....
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.