ಬಾಲಿವುಡ್‌ನ ನವಜೋಡಿ ರಣವೀರ್-ದೀಪಿಕಾ ಬೆಂಗಳೂರಿಗೆ ಬಂದಿದ್ದಾರೆ. ಇಟಲಿಯ ಲೇಕ್ ಕೋಮೋದಲ್ಲಿ ವಿವಾಹ ಬಂಧನಕ್ಕೊಳಗಾದ ನಂತರ ಮುಂಬೈಗೆ ತೆರಳಿ, ಮಂಗಳವಾರ ಬೆಳಗ್ಗೆಯಷ್ಟೇ ಬೆಂಗಳೂರಿಗೆ ಬಂದಿಳಿದಿದೆ ಈ ಜೋಡಿ. ದೀಪಿಕಾಗೆ ಬೆಂಗಳೂರು ತವರೂರು. ಹಾಗಾಗಿಯೇ ಇಂದು(ನ.21) ನಗರದ ಹೋಟೆಲ್ ಲೀಲಾ ಪ್ಯಾಲೇಸ್‌ನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್‌ನ ನಟ, ನಟಿಯರು ಹಾಗೂ ತಂತ್ರಜ್ಞರು ಭಾಗವಹಿಸುತ್ತಿದ್ದಾರೆ.
ದಕ್ಷಿಣ ಭಾರತದ ಸ್ಟಾರ್‌ಗಳು:
ಆರತಕ್ಷತೆ ಕಾರ್ಯಕ್ರಮದಲ್ಲಿ ಅಂಬರೀಶ್, ಕಿಚ್ಚ ಸುದೀಪ್, ಉಪೇಂದ್ರ, ಯಶ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪಾಲ್ಗೊಳ್ಳುವುದು ಖಚಿತವಾಗಿದೆ. ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ ಮತ್ತು ಅಂಬರೀಶ್ ಸ್ನೇಹಿತರು. ಕಿಚ್ಚ ಸುದೀಪ್ ಹಿಂದಿಯಲ್ಲೂ ಚಿರಪರಿಚಿತ ನಟ, ರಣವೀರ್ ಸ್ನೇಹಿತ. ಉಪೇಂದ್ರ ಮತ್ತು ಇಂದ್ರಜಿತ್ ಲಂಕೇಶ್‌ರಿಗೆ ದೀಪಿಕಾ ಅಭಿನಯದ ಮೊದಲ ಸಿನಿಮಾದ ನಂಟು.
ಇದನ್ನೂ ಓದಿ: 'ಪದ್ಮಾವತಿ'ಯೊಂದಿಗೆ ಬೆಂಗಳೂರಿಗೆ ಬಂದಿಳಿದ 'ಖಿಲ್ಜಿ'
ಆರತಕ್ಷತೆಗೆ ಆಹ್ವಾನ ಸಿಕ್ಕವರ ಸಂಖ್ಯೆ ತುಂಬಾ ಕಡಿಮೆ:
ಕಾರ್ಯಕ್ರಮಕ್ಕೆ ಬರುವ ಸ್ಟಾರ್‌ಗಳ ಭದ್ರತೆಯ ದೃಷ್ಟಿಯಿಂದಲೂ ಆಯ್ದ ಸೆಲೆಬ್ರಿಟಿಗಳಿಗೆ, ಆಪ್ತರಿಗೆ, ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ. ರಣವೀರ್ -ದೀಪಿಕಾ ಜೋಡಿಯ ಈ ಆರತಕ್ಷತೆಗೆ ಸೌತ್ ಸಿನಿಮಾದ ಸಾಕಷ್ಟು ಸ್ಟಾರ್‌ಗಳು ಸಾಕ್ಷಿಯಾಗುವ ಸಾಧ್ಯತೆಯಿದೆ. ತೆಲುಗು, ತಮಿಳು, ಮಲಯಾಳಂ ಚಿತ್ರರಂಗದ ದಿಗ್ಗಜರೂ ಪಾಲ್ಗೊಳಲಿದ್ದಾರೆ. ಹಲವು ಪ್ರಮುಖ ರಾಜಕಾರಣಿಗಳು, ಕ್ರೀಡ ತಾರೆಯರೂ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಇದನ್ನೂ ಓದಿ: ಕೋಣೆಯಲ್ಲಿ ಅವಾಂತರ, ದೀಪಿಕಾ ರಣವೀರ್‌ಗೆ ಆಘಾತ!
ದಕ್ಷಿಣ ಭಾರತದ ಸ್ಟಾರ್‌ಗಳು:
ಆರತಕ್ಷತೆ ಕಾರ್ಯಕ್ರಮದಲ್ಲಿ ಅಂಬರೀಶ್, ಕಿಚ್ಚ ಸುದೀಪ್, ಉಪೇಂದ್ರ, ಯಶ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪಾಲ್ಗೊಳ್ಳುವುದು ಖಚಿತವಾಗಿದೆ. ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ ಮತ್ತು ಅಂಬರೀಶ್ ಸ್ನೇಹಿತರು. ಕಿಚ್ಚ ಸುದೀಪ್ ಹಿಂದಿಯಲ್ಲೂ ಚಿರಪರಿಚಿತ ನಟ, ರಣವೀರ್ ಸ್ನೇಹಿತ. ಉಪೇಂದ್ರ ಮತ್ತು ಇಂದ್ರಜಿತ್ ಲಂಕೇಶ್‌ರಿಗೆ ದೀಪಿಕಾ ಅಭಿನಯದ ಮೊದಲ ಸಿನಿಮಾದ ನಂಟು.
ಆರತಕ್ಷತೆಯಲ್ಲಿ ಕನ್ನಡದ ಸ್ಟಾರ್‌ಗಳು
ಅಂಬರೀಶ್, ಕಿಚ್ಚ ಸುದೀಪ್, ಉಪೇಂದ್ರ, ಇಂದ್ರಜಿತ್ ಲಂಕೇಶ್, ಯಶ್, ಪುನೀತ್, ಅನಿಲ್ ಕುಂಬ್ಳೆ, ಪ್ರಸಾದ್ ಬಿದ್ದಪ್ಪ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.