Toxic ಮಧ್ಯೆ ಯಶ್ ಇನ್‌ಸ್ಟಾಗ್ರಾಮ್ ಬಯೋ ವೈರಲ್: ‘ಒರಿಜಿನಲ್’ ಸಾಲುಗಳೇ ಈಗ ಟ್ರೋಲಿಗರಿಗೆ ಕೌಂಟರ್!

Published : Aug 29, 2026, 08:31 PM IST
Yash

ಸಾರಾಂಶ

‘ಟಾಕ್ಸಿಕ್’ ಸಿನಿಮಾ ಕುರಿತ ಟ್ರೋಲ್‌ಗಳ ನಡುವೆ ಯಶ್ ಇನ್‌ಸ್ಟಾಗ್ರಾಮ್ ಬಯೋದಲ್ಲಿನ ‘Original’ ಸಾಲು ವೈರಲ್ ಆಗಿದೆ. ಫ್ಯಾನ್ಸ್ ಈ ಮಾತನ್ನು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಶೇರ್ ಮಾಡುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಸದ್ಯ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಗ್ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಮಾತ್ರ ಚಿತ್ರದ ಓಟ ಮುಂದುವರಿದಿದೆ. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಕುರಿತ ಚರ್ಚೆ, ಟ್ರೋಲ್ ಹಾಗೂ ನೆಗೆಟಿವ್ ಕಾಮೆಂಟ್‌ಗಳು ಜೋರಾಗಿರುವ ಬೆನ್ನಲ್ಲೇ, ಯಶ್ ಅವರ ಇನ್‌ಸ್ಟಾಗ್ರಾಮ್ ಬಯೋ ಇದೀಗ ಸಖತ್ ವೈರಲ್ ಆಗಿದೆ.

ಯಶ್ ಬಯೋದಲ್ಲಿರುವ ಆ ಒಂದು ಸಾಲು!

ಯಶ್ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ 'Be Yourself because An Original is Worth more than a Copy' ಎಂದು ಬರೆದುಕೊಂಡಿದ್ದಾರೆ. ಅಂದರೆ, 'ನೀವು ನೀವಾಗಿಯೇ ಇರಿ, ಏಕೆಂದರೆ ನಕಲಿಗಿಂತ ಅಸಲಿಗೆ ಹೆಚ್ಚು ಬೆಲೆ' ಎಂಬ ಅರ್ಥ.

‘ಟಾಕ್ಸಿಕ್’ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೋಲಿಕೆಗಳು, ಟ್ರೋಲ್‌ಗಳು ಹಾಗೂ ನೆಗೆಟಿವ್ ಕಾಮೆಂಟ್‌ಗಳು ಹೆಚ್ಚಾಗುತ್ತಿದ್ದಂತೆ, ಯಶ್ ಅಭಿಮಾನಿಗಳು ಇದೇ ಬಯೋ ಸಾಲನ್ನು ಹಂಚಿಕೊಳ್ಳುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಪ್ರಯತ್ನವನ್ನು ಸಮರ್ಥಿಸಿಕೊಳ್ಳಲು ಈ ಸಾಲುಗಳನ್ನೇ ಕೌಂಟರ್ ಆಗಿ ಬಳಸುತ್ತಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.

ಯಶ್ ಬೆನ್ನಿಗೆ ನಿಂತ ಸ್ಯಾಂಡಲ್‌ವುಡ್ ಸ್ಟಾರ್ಸ್

‘ಟಾಕ್ಸಿಕ್’ ಬಗ್ಗೆ ಅಭಿಪ್ರಾಯಗಳು ಏನೇ ಇರಲಿ, ಸಿನಿಮಾದ ಮೇಕಿಂಗ್, ಭರ್ಜರಿ ಆಕ್ಷನ್ ಸೀಕ್ವೆನ್ಸ್‌ಗಳು, ಯಶ್ ಅವರ ಮಾಸ್ ಅವತಾರ ಹಾಗೂ ತಾಂತ್ರಿಕ ಶ್ರೀಮಂತಿಕೆ ಗಮನ ಸೆಳೆಯುತ್ತಿದೆ. ಇದೇ ವೇಳೆ ಸ್ಯಾಂಡಲ್‌ವುಡ್‌ನ ಹಲವು ಸ್ಟಾರ್ ನಟರು ಯಶ್ ಮತ್ತು ಅವರ ಸಿನಿಮಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಟರಾದ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವರಾಜ್‌ಕುಮಾರ್ ಸೇರಿದಂತೆ ಚಿತ್ರರಂಗದ ಗಣ್ಯರು ಯಶ್ ಅವರ ಪ್ರಯತ್ನವನ್ನು ಬೆಂಬಲಿಸಿರುವುದು ಅಭಿಮಾನಿಗಳ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.

‘ಒರಿಜಿನಲ್’ ಪ್ರಯತ್ನಕ್ಕೆ ಸೋಲಿಲ್ಲ ಅಂತಿದ್ದಾರೆ ಫ್ಯಾನ್ಸ್!

ಇದೀಗ ಯಶ್ ಅವರ ಬಯೋದಲ್ಲಿರುವ ‘Original’ ಎಂಬ ಪದವೇ ಅಭಿಮಾನಿಗಳ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳ ಪ್ರಮುಖ ಅಸ್ತ್ರವಾಗಿದೆ. ಸಿನಿಮಾ ಕುರಿತ ನೆಗೆಟಿವಿಟಿಗೆ ತಲೆಕೆಡಿಸಿಕೊಳ್ಳದೆ, ವಿಭಿನ್ನ ಪ್ರಯತ್ನಗಳಿಗೆ ಬೆಲೆ ಕೊಡಬೇಕು ಎಂಬ ಸಂದೇಶದೊಂದಿಗೆ ಫ್ಯಾನ್ಸ್ ಈ ಸಾಲನ್ನು ಸ್ಟೇಟಸ್ ಹಾಗೂ ಪೋಸ್ಟ್‌ಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಹೀಗಾಗಿ ‘ಟಾಕ್ಸಿಕ್’ ಸಿನಿಮಾದ ಚರ್ಚೆಯ ಜೊತೆಗೆ ಯಶ್ ಅವರ ಬಯೋ ಕೂಡ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.

ಮೂರು ದಿನದಲ್ಲೇ ₹221 ಕೋಟಿ ದಾಟಿದೆಯಾ ‘ಟಾಕ್ಸಿಕ್’?

ಮತ್ತೊಂದೆಡೆ, ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲೇ ‘ಟಾಕ್ಸಿಕ್’ ಜಾಗತಿಕವಾಗಿ ₹221 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಎಂಬ ವರದಿಗಳು ಹರಿದಾಡುತ್ತಿವೆ. ಭಾರತದಲ್ಲಿ ಮಾತ್ರ ₹165 ಕೋಟಿಗೂ ಹೆಚ್ಚು ನೆಟ್ ಕಲೆಕ್ಷನ್ ಮಾಡಿದೆ ಎನ್ನಲಾಗಿದ್ದು, ಕನ್ನಡ ಹಾಗೂ ಹಿಂದಿ ಆವೃತ್ತಿಗಳು ಚಿತ್ರದ ಕಲೆಕ್ಷನ್‌ಗೆ ಪ್ರಮುಖ ಕೊಡುಗೆ ನೀಡಿವೆ.

ಇನ್ನು ವಿಮರ್ಶೆಗಳ ನಡುವೆ ಕೂಡ ಬಾಕ್ಸ್ ಆಫೀಸ್‌ನಲ್ಲಿ ತನ್ನದೇ ಆಟ ಮುಂದುವರಿಸಿರುವ ‘ಟಾಕ್ಸಿಕ್’, ಇದೀಗ ಯಶ್ ಅವರ ವೈರಲ್ ಬಯೋದಿಂದ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಟ ಚಿಕ್ಕಣ್ಣ: ಎಂಗೇಜ್​ಮೆಂಟ್​ ಕ್ಯೂಟ್​ ಫೋಟೋಸ್​ ವೈರಲ್​
ನಟ ಚಿಕ್ಕಣ್ಣ-ಪಾವನಾ ಗೌಡ ರೆಸೆಪ್ಶನ್, ಅದ್ಧೂರಿ ಸಮಾರಂಭದಲ್ಲಿ ಮಿಂಚಿದ ಜೋಡಿ