ಕೈಯಲ್ಲಿ ಉದ್ದನೆಯ ಆಯುಧ, ರಗಡ್ ಲುಕ್: ಹುಟ್ಟುಹಬ್ಬದಂದು ತಲೆಕೆಳಗಾಗಿ ನೇತಾಡಿದ ಉಪೇಂದ್ರ!

Published : Sep 18, 2026, 03:58 PM IST
Upendra Zombie Reddy 2

ಸಾರಾಂಶ

ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ ‘ಜಾಂಬಿ ರೆಡ್ಡಿ 2 NXT LVL’ ಸಿನಿಮಾದ ಅವರ ಫಸ್ಟ್ ಲುಕ್ ರಿಲೀಸ್ ಆಗಿದೆ. ಪೋಸ್ಟರ್‌ನಲ್ಲಿ ಉಪೇಂದ್ರ ತಲೆಕೆಳಗಾಗಿ ನೇತಾಡುತ್ತಾ, ಕೈಯಲ್ಲಿ ಉದ್ದನೆಯ ಆಯುಧ ಹಿಡಿದು ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

'ಜಾಂಬಿ ರೆಡ್ಡಿ 2 NXT LVL' ಸಿನಿಮಾದಿಂದ ರಿಯಲ್ ಸ್ಟಾರ್ ಉಪೇಂದ್ರ ಅವರ ಫಸ್ಟ್ ಲುಕ್ ಅನ್ನು ಅವರ ಹುಟ್ಟುಹಬ್ಬದಂದು ರಿಲೀಸ್ ಮಾಡಲಾಗಿದೆ. ಪೋಸ್ಟರ್‌ನಲ್ಲಿ ಉಪ್ಪಿ ತಲೆಕೆಳಗಾಗಿ ನೇತಾಡುತ್ತಾ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತೇಜ ಸಜ್ಜಾ ನಾಯಕನಾಗಿರುವ ಈ ಚಿತ್ರದ ಮೂಲಕ ಶನಾಯಾ ಕಪೂರ್ ಟಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ.

ಉಪೇಂದ್ರ ಫಸ್ಟ್ ಲುಕ್ ರಿಲೀಸ್

ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ ಮುಂಬರುವ ತೆಲುಗು ಸಿನಿಮಾ 'ಜಾಂಬಿ ರೆಡ್ಡಿ 2 NXT LVL' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಜಾಂಬಿ ಕಾಮಿಡಿ-ಆಕ್ಷನ್ ಫ್ರಾಂಚೈಸಿಯ ಎರಡನೇ ಭಾಗದಲ್ಲಿ ಉಪ್ಪಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಉಪೇಂದ್ರ ಮರದ ಕೊಂಬೆಗೆ ತಲೆಕೆಳಗಾಗಿ ನೇತಾಡುತ್ತಾ, ಕೈಯಲ್ಲಿ ಉದ್ದನೆಯ ಆಯುಧ ಹಿಡಿದುಕೊಂಡಿದ್ದಾರೆ. ಉದ್ದನೆಯ ಕೂದಲು, ರಗಡ್ ಲುಕ್ ಹಾಗೂ ತೀಕ್ಷ್ಣವಾದ ನೋಟದಿಂದ ಅವರು ಗಮನ ಸೆಳೆಯುತ್ತಿದ್ದಾರೆ. ಹಿನ್ನೆಲೆಯಲ್ಲಿ ಕಾಡು, ಉರಿಯುತ್ತಿರುವ ಪಂಜುಗಳು ಮತ್ತು ಜನರ ಗುಂಪು ಕಾಣಿಸುತ್ತಿದೆ. ಪಾತ್ರದ ವಿಭಿನ್ನ ಲುಕ್‌ಗೆ ತಕ್ಕಂತೆ ಪೋಸ್ಟರ್‌ನಲ್ಲಿ "READY TO TURN THE WORLD UPSIDE DOWN" (ಜಗತ್ತನ್ನೇ ತಲೆಕೆಳಗಾಗಿಸಲು ರೆಡಿ) ಎಂಬ ಟ್ಯಾಗ್‌ಲೈನ್ ಕೂಡ ಇದೆ.

ತಾರಾಗಣ ಮತ್ತು ನಿರ್ಮಾಣದ ಡೀಟೇಲ್ಸ್

'ಜಾಂಬಿ ರೆಡ್ಡಿ 2 NXT LVL' ಸಿನಿಮಾದಲ್ಲಿ ತೇಜ ಸಜ್ಜಾ ನಾಯಕನಾಗಿ ನಟಿಸುತ್ತಿದ್ದಾರೆ. 'ಮಿರಾಯ್' ಬಳಿಕ ಪೀಪಲ್ ಮೀಡಿಯಾ ಫ್ಯಾಕ್ಟರಿ ಜೊತೆ ಇದು ಅವರ ಎರಡನೇ ಸಿನಿಮಾ. ಬಾಲಿವುಡ್ ನಟಿ ಶನಾಯಾ ಕಪೂರ್ ಈ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಈ ವರ್ಷದ ಆರಂಭದಲ್ಲಿ ತೇಜ ಸಜ್ಜಾ ಅವರ 31ನೇ ಹುಟ್ಟುಹಬ್ಬದಂದು ಈ ತೆಲುಗು ಜಾಂಬಿ ಕಾಮಿಡಿ ಸೀಕ್ವೆಲ್ ಅನ್ನು ಅನೌನ್ಸ್ ಮಾಡಲಾಗಿತ್ತು. ಸುಪರ್ಣ್ ಎಸ್. ವರ್ಮಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊದಲ ಭಾಗವನ್ನು ನಿರ್ಮಿಸಿದ್ದ ಪೀಪಲ್ ಮೀಡಿಯಾ ಫ್ಯಾಕ್ಟರಿ ಈ ಚಿತ್ರಕ್ಕೂ ಬಂಡವಾಳ ಹೂಡುತ್ತಿದೆ. ಸಾವಿರಾರು ಜಾಂಬಿಗಳ ನಡುವೆ ತೇಜ ಸಜ್ಜಾ ಒಂಟಿಯಾಗಿ ನಿಂತಿರುವ ಸೀಕ್ವೆಲ್‌ನ ಗ್ಲಿಂಪ್ಸ್ ವಿಡಿಯೋವನ್ನು ಚಿತ್ರತಂಡ ಈ ಹಿಂದೆ ರಿಲೀಸ್ ಮಾಡಿತ್ತು.

ಇದೊಂದು ಜಾಂಬಿ ಆಕ್ಷನ್-ಕಾಮಿಡಿ ಸಿನಿಮಾವಾಗಿದ್ದು, ಕನ್ನಡದ ಸ್ಟಾರ್ ನಟ ಉಪೇಂದ್ರ ಪ್ರಮುಖ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಶನಾಯಾ ಕಪೂರ್‌ಗೆ ಇದು ದಕ್ಷಿಣ ಭಾರತದ ಮೊದಲ ಸಿನಿಮಾ. ಒರಿಜಿನಲ್ 'ಜಾಂಬಿ ರೆಡ್ಡಿ' ಚಿತ್ರವನ್ನು ನಿರ್ದೇಶಿಸಿದ್ದ ಪ್ರಶಾಂತ್ ವರ್ಮಾ ಕೂಡ ಈ ಸೀಕ್ವೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಹುಸೇನ್ ದಲಾಲ್, ಪ್ರಶಾಂತ್ ವರ್ಮಾ ಮತ್ತು ಸುಪರ್ಣ್ ಎಸ್. ವರ್ಮಾ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಗೌರ ಹರಿ ಸಂಗೀತ ನಿರ್ದೇಶನವಿದ್ದು, ಟಿ.ಜಿ. ವಿಶ್ವ ಪ್ರಸಾದ್ ಮತ್ತು ಕೃತಿ ಪ್ರಸಾದ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನು 'ಜಾಂಬಿ ರೆಡ್ಡಿ 2 NXT LVL' ಸಿನಿಮಾ ಹಿಂದಿ, ತೆಲುಗು, ಕನ್ನಡ, ತಮಿಳು, ಮಲಯಾಳಂ, ನೇಪಾಳಿ ಮತ್ತು ಜಾಪನೀಸ್ ಸೇರಿದಂತೆ ಒಟ್ಟು ಏಳು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಆದರೆ, ರಿಲೀಸ್ ಡೇಟ್ ಅನ್ನು ಚಿತ್ರತಂಡ ಇನ್ನೂ ಅನೌನ್ಸ್ ಮಾಡಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಎಂ.ಎಸ್‌. ಸುಬ್ಬುಲಕ್ಷ್ಮಿ ದೇಶದ ಮೊದಲ ಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್: ಕಮಲ್ ಹಾಸನ್
ವಿಜಯ್-ರಶ್ಮಿಕಾ ವಿವಾಹಕ್ಕೂ ನಟಿ ನೀನಾ ಗುಪ್ತಾಗೂ ಏನ್ ಸಂಬಂಧ? ಈ ಸುದ್ದಿ ತಿಳಿದು 'ಚೀ.. ಥೂ..' ಅಂತ ಉಗಿತೀರಾ ನೋಡಿ!