ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ್ ರೆಬಲ್ ಸ್ಟಾರ್ ಅಂಬರೀಶ್‌ರ ಪರಮಾಪ್ತರಾಗಿದ್ದ ಮಾಜಿ ಸಚಿವ, ಉದ್ಯಮಿ ಎಸ್.ಎಸ್.ಮಲ್ಲಿಕಾರ್ಜುನ ಭೇಟಿ ಮಾಡಿದರು ಅವರು ರಾಜಸ್ಥಾನದಿಂದ ತಂದ ಕುದುರೆಗಳನ್ನು ವೀಕ್ಷಿಸಿದರು.
ದಾವಣಗೆರೆ(ಆ.31): ಕನ್ನಡ ಚಿತ್ರರಂಗದ ಡಿ ಬಾಸ್ ಖ್ಯಾತಿಯ ದರ್ಶನ್ ತೂಗುದೀಪ್ ರೆಬಲ್ ಸ್ಟಾರ್ ಅಂಬರೀಶ್‌ರ ಪರಮಾಪ್ತರಾಗಿದ್ದ ಮಾಜಿ ಸಚಿವ, ಉದ್ಯಮಿ ಎಸ್.ಎಸ್.ಮಲ್ಲಿಕಾರ್ಜುನ ಭೇಟಿ ಮಾಡಿದರು.
ಕಲ್ಲೇಶ್ವರ ರೈಸ್ ಮಿಲ್‌ಗೆ, ಹರಪನಹಳ್ಳಿ ತಾ. ದುಗ್ಗಾವತಿದ ಶುಗರ್ ಫ್ಯಾಕ್ಟರಿಗೆ ಎಸ್ಸೆಸ್ ಮಲ್ಲಿಕಾರ್ಜುನ ಜೊತೆಗೆ ತೆರಳಿದ ನಟ ದರ್ಶನ್ ತೂಗುದೀಪ ರಾಜಸ್ಥಾನದಿಂದ ಮಲ್ಲಿಕಾರ್ಜುನ ತಂದಿರುವ ಹೊಸ ಕುದುರೆಗಳನ್ನು ವೀಕ್ಷಿಸಿದರು.
ಕುದುರೆ, ಎತ್ತು, ಆಕಳು, ಎಮ್ಮೆ, ಕೋಣ, ಕುರಿಗಳು, ಬನ್ನೂರು ಕುರಿ ಹೀಗೆ ಪ್ರಾಣಿ ಪ್ರೇಮಿಯೂ ಆಗಿರುವ ಎಸ್ಸೆಸ್ ಮಲ್ಲಿಕಾರ್ಜುನ ಒಡೆತನದ ಫ್ಯಾಕ್ಚರಿಯಲ್ಲಿ ದರ್ಶನ್ ಸ್ವಲ್ಪ ಹೊತ್ತು ಕಳೆದರು. ಕಲ್ಲೇಶ್ವರ ರೈಸ್ ಮಿಲ್‌ನಲ್ಲೂ ತಮಗಿಂತಲೂ ಎತ್ತರದ ಧೈತ್ಯವಾದ ರಾಜಸ್ಥಾನದ ಕುದುರೆ ಮೈದಡವಿ ದರ್ಶನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಚಿರು ಸಾವಿನ ಬಗ್ಗೆ ಆರೋಪ: ದರ್ಶನ್ ಪ್ರತಿಕ್ರಿಯೆ ಮುಖಕ್ಕೆ ಹೊಡೆದಂಗಿತ್ತು..!
ರೆಬಲ್ ಸ್ಟಾರ್ ಅಂಬರೀಶ್‌ರ ಪರಮಾಪ್ತರಾದ ಎಸ್ಸೆಸ್ ಮಲ್ಲಿಕಾರ್ಜುನ್ ಜೊತೆಗೆ ದರ್ಶನ್ ತೂಗುದೀಪ ಸುಮಾರು ಗಂಟೆಗಳ ಕಾಲ ಕುದುವೆ, ಆಕಳು, ಎತ್ತುಗಳು, ಎಮ್ಮೆ, ಕೋಣ, ಕುರಿಗಳ ಬಗ್ಗೆ, ವಿವಿಧ ಬೆಳೆಗಳ ಬಗ್ಗೆ ಚರ್ಚಿಸಿದರು.
ನಂತರ ಬಾಪೂಜಿ ಅತಿಥಿ ಗೃಹಕ್ಕೆ ದರ್ಶನ್ ಶಾಮನೂರು ಮಲ್ಲಿಕಾರ್ಜುನ ಜೊತೆಗೆ ತೆರಳಿದರು. ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಅಂಬರೀಶ್ ಸಾಕಷ್ಟುಒಡನಾಟ ಹೊಂದಿದ್ದರು. ಅದರಲ್ಲೂ ಶಾಮನೂರು ಕಿರಿಯ ಪುತ್ರ ಎಸ್ಸೆಸ್ ಮಲ್ಲಿಕಾರ್ಜುನ, ಅಂಬರೀಷ್‌ರದ್ದು ಅವಿನಾಭಾವ ಸ್ನೇಹ. ದಾವಣಗೆರೆ ಅಂಬರೀಶ್ ಬಂದರೆಂದರೆ ಇಡೀ ಬಾಪೂಜಿ ಗೆಸ್ಟ್ ಹೌಸ್ ತುಂಬಿ ತುಳುಕುತ್ತಿತ್ತು.
ಇದೀಗ ತಮ್ಮ ತಂದೆ ತೂಗುದೀಪ ಶ್ರೀನಿವಾಸರಿಗೆ ಇರುವಷ್ಟೇ ಸ್ಥಾನವನ್ನು ರೆಬಲ್ ಸ್ಟಾರ್ ಅಂಬರೀಷ್‌ರಿಗೂ ನೀಡಿರುವ ದರ್ಶನ್ ತೂಗುದೀಪ ಅಂಬರೀಷ್‌ರನ್ನು ಅಪ್ಪಾಜಿ ಅಂತಲೇ ಕರೆಯುತ್ತಿದ್ದವರು. ಇದೀಗ ಅಂಬರೀಷ್‌ರ ಆತ್ಮೀಯರಾದ ಎಸ್ಸೆಸ್ ಮಲ್ಲಿಕಾರ್ಜುನ ಜೊತೆಗೆ ದರ್ಶನ್ ಅದೇ ಬಾಂಧವ್ಯ ಮುಂದುವರಿಸುತ್ತಿದ್ದಾರೆ.
ದರ್ಶನ್- ಸುದೀಪ್ ಸಂಬಂಧೀಕರು? ಒಳ್ಳೆ ಹುಡುಗ ಪ್ರಥಮ್ ಬಿಡಿಸಿಟ್ಟ ಸಂಬಂಧ!...
ಈಗ್ಗೆ 15 ದಿನಗಳ ಹಿಂದೆ ದರ್ಶನ್ ತೂಗುದೀಪ ನಗರಕ್ಕೆ ಭೇಟಿ ನೀಡಿದ್ದ ಡಾ.ಶಾಮನೂರು ಶಿವಶಂಕರಪ್ಪ, ಪುತ್ರ ಎಸ್ಸೆಸ್ ಮಲ್ಲಿಕಾರ್ಜುನ ಕೊರೋನಾ ಸೋಂಕಿಗೀಡಾಗಿದ್ದರು. ಶಾಮನೂರು ಶಿವಶಂಕರಪ್ಪ ಬೆಂಗಳೂರಿನಲ್ಲಿ ಚಿಕಿತ್ಸೆಗೆ ದಾಖಲಾದರೆ, ಎಸ್ಸೆಸ್ ಮಲ್ಲಿಕಾರ್ಜುನ ಹೋಂ ಕ್ವಾರಂಟೈನ್‌ನಲ್ಲಿದ್ದರು. ಹಾಗಾಗಿ ಎಸ್ಸೆಸ್ಸೆಂ ಭೇಟಿ ಸಾಧ್ಯವಾಗಿರಲಿಲ್ಲ.
ದರ್ಶನ್ ಭೇಟಿ ವಿಚಾರ ತಿಳಿದ ಅಪಾರ ಸಂಖ್ಯೆಯ ಅಭಿಮಾನಿಗಳು ಕಲ್ಲೇಶ್ವರ ರೈಸ್ ಮಿಲ್, ಬಾಪೂಜಿ ಅತಿಥಿ ಗೃಹದ ಬಳಿ ಜಮಾಯಿಸಿದ್ದರು. ಈಚೆಗೆ ಕೊರೋನಾ ಸೋಂಕಿನಿಂದ ಶಾಮನೂರು, ಮಲ್ಲಿಕಾರ್ಜುನ ಗುಣಮುಖರಾದ ಹಿನ್ನೆಲೆಯಲ್ಲಿ ದರ್ಶನ್ ಭೇಟಿ ನೀಡಿದ್ದಾರೆ ಎನ್ನಲಾಗಿದೆ.