ಸೋದರಳಿಯನಿಗೆ ‘ಟಕ್ಕರ್’ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್!

Published : Sep 13, 2019, 08:23 AM ISTUpdated : Sep 13, 2019, 09:10 AM IST
ಸೋದರಳಿಯನಿಗೆ ‘ಟಕ್ಕರ್’ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್!

ಸಾರಾಂಶ

ದರ್ಶನ್‌ ಸಂಬಂಧಿ ಮನೋಜ್‌ ಕುಮಾರ್‌ ನಾಯಕರಾಗಿ ಅಭಿನಯಿಸಿರುವ ‘ಟಕ್ಕರ್‌’ ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ರಿಲೀಸ್‌ ಪೂರ್ವಭಾವಿಯಾಗಿ ಚಿತ್ರತಂಡ ಈಗ ಆಡಿಯೋ ಲಾಂಚ್‌ ಮೂಲಕ ಸದ್ದು ಮಾಡಿದೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಆಡಿಯೋ ಮತ್ತು ಟ್ರೇಲರ್‌ ಲಾಂಚ್‌ ಮಾಡಿದ್ದಾರೆ.

ಮನೋಜ್‌ಗೆ ಹೀರೋ ಆಗಿ ಇದು ಮೊದಲ ಸಿನಿಮಾ. ನಟರಾಗಿ ಈಗಾಗಲೇ ದರ್ಶನ್‌ ಅಭಿನಯದ ‘ಅಂಬರೀಶ’ಹಾಗೂ ‘ಚಕ್ರವರ್ತಿ’ ಸಿನಿಮಾಗಳಲ್ಲೂ ಅಭಿನಯಿಸಿದ್ದರು.ಈಗ ಅವರನ್ನು ತೆರೆ ಮೇಲೆ ಹೀರೋ ಆಗಿ ತೋರಿಸಲು ಹೊರಟವರು ನಿರ್ದೇಶಕ ರಘು ಶಾಸ್ತ್ರಿ ಹಾಗೂ ನಿರ್ಮಾಪಕ ನಾಗೇಶ್‌.

ಮನೋಜ್‌ ನನ್ನ ಅಕ್ಕನ ಮಗ. ನನ್ನ ದೊಡ್ಡಪ್ಪನ ಮೊಮ್ಮಗ. ಸಿನಿಮಾ ರಂಗದಲ್ಲಿ ಸಾಕಷ್ಟುಕಷ್ಟಪಟ್ಟಿದ್ದಾನೆ. ಈಗ ಹೀರೋ ಆಗಿ ಎಂಟ್ರಿ ಆಗುತ್ತಿದ್ದಾನೆ. ಕತೆಯ ಎಳೆ ಚೆನ್ನಾಗಿದೆ. ಟ್ರೇಲರ್‌ ಕೂಡ ಚೆನ್ನಾಗಿ ಬಂದಿದೆ. ನಿರ್ಮಾಪಕ ನಾಗೇಶ್‌ ಅವರಿಗೆ ಸಿನಿಮಾ ಪ್ಯಾಷನ್‌ ಇದೆ ಎನ್ನುವುದಕ್ಕೆ ಸಿನಿಮಾ ಕ್ವಾಲಿಟಿ ನೋಡಿದರೆ ಗೊತ್ತಾಗುತ್ತದೆ. ಸಿನಿಮಾ ಗೆಲ್ಲುತ್ತೆ ಎನ್ನುವ ನಂಬಿಕೆ. ಪ್ರೇಕ್ಷಕರ ಬೆಂಬಲ ಮನೋಜ್‌ಗೆ ಬೇಕಾಗಿದೆ.- ದರ್ಶನ್‌

ಆಡಿಯೋ ಲಾಂಚ್‌ ಸಂದರ್ಭದಲ್ಲಿ ಅವರಿಬ್ಬರು ಸಿನಿಮಾದ ಕತೆ ಜತೆಗೆ ನಾಯಕ ಮನೋಜ್‌ ಸಿನಿಮಾ ಬದ್ಧತೆಯನ್ನು ಮುಕ್ತ ಕಂಠದಲ್ಲಿ ಬಣ್ಣಿಸಿದರು. ‘ಟಕ್ಕರ್‌ ಎಂದರೆ ಪಾಸಿಟಿವ್‌ ಹಾಗೂ ನೆಗಟಿವ್‌ ಎರಡೂ ಅರ್ಥಗಳಿವೆ. ಅದಕ್ಕೆ ತಕ್ಕಂತೆ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಸಂಘರ್ಷವೇ ಈ ಚಿತ್ರ. ಲವ್‌ ಸ್ಟೋರಿ ಜತೆಗೆ ಆ್ಯಕ್ಷನ್‌ ಪ್ಯಾಕ್‌ ಈ ಚಿತ್ರದ ವಿಶೇಷ. ಈ ಕತೆಗೆ ಮನೋಜ್‌ ತುಂಬಾ ಶೂಟ್‌ ಆಗ್ತಾರೆ ಅಂತನೇ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿಕೊಂಡೆವು. ಸಾಕಷ್ಟುಸಿದ್ಧತೆಯೊಂದಿಗೆ ಅವರು ಸಿನಿಮಾಕ್ಕೆ ಬಂದರು’ ಎನ್ನುವ ಮಾತು ನಿರ್ದೇಶಕ ರಘು ಶಾಸ್ತ್ರಿ ಅವರದ್ದು.

ದರ್ಶನ್ ಮೆಚ್ಚಿದ ಟಕ್ಕರ್ ಟೀಸರ್, ಕಿವಿಮಾತು ಹೇಳಿದ ಚಾಲೆಂಜಿಂಗ್ ಸ್ಟಾರ್!

ಕತೆಗೆ ತಕ್ಕಂತೆ ಚಿತ್ರವನ್ನು ಅದ್ಧೂರಿಯಾಗಿಯೇ ತೆರೆಗೆ ತಂದಿದ್ದೇವೆ ಎನ್ನುವ ಮಾತುಗಳ ಜತೆಗೆ ದರ್ಶನ್‌ ಬೆಂಬಲಕ್ಕೆ ಧನ್ಯವಾದ ಹೇಳಿದರು ನಿರ್ಮಾಪಕ ನಾಗೇಶ್‌. ನಾಯಕ ಮನೋಜ್‌ ಮಾತನಾಡಿ ದರ್ಶನ್‌ ಬೆಂಬಲ ಸ್ಮರಿಸಿಕೊಂಡರು. ನಾಯಕಿ ರಂಜನಿ ರಾಘವನ್‌ ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿಯಿದೆ’ಎಂದರು. ನಾಗೇಂದ್ರ ಪ್ರಸಾದ್‌ ಹಾಗೂ ನಿರ್ದೇಶಕ ರಘು ಶಾಸ್ತ್ರಿ ಅವರ ಸಾಹಿತ್ಯಕ್ಕೆ ಮಣಿಕಾಂತ್‌ ಕದ್ರಿ ಸಂಗೀತ ನೀಡಿದ್ದಾರೆ. ಚಿತ್ರದ ಪ್ರಮುಖ ಖಳನಟನಾಗಿ ಭಜರಂಗಿ ಲೋಕಿ ಇದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss Kannada: ಎಲ್ಲಿ ನೋಡಿದ್ರೂ ಗಿಲ್ಲಿ ಗಿಲ್ಲಿ, ಪಿಆಒಗಳಿಗೆ ವಿನಯ್ ಗೌಡ ಹೇಳಿದ್ದೇನು?
'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?