ರಾಷ್ಟ್ರ ಪ್ರಶಸ್ತಿ ವಿಜೇತ ನಟ ಎನ್ನುವ ಇಮೇಜ್‌ನ ಆಚೆಗೂ ಎಲ್ಲ ರೀತಿಯ ಸಿನಿಮಾಗಳಲ್ಲಿ ನಟಿಸುತ್ತಿರುವ ಸಂಚಾರಿ ವಿಜಯ್ ಅವರ ಮೊದಲ ಕಮರ್ಷಿಯಲ್ ಸಿನಿಮಾ ತೆರೆಗೆ ಸಿದ್ಧವಾಗಿದೆ. ಚಿತ್ರದ ಹೆಸರು ‘ಪಾದರಸ’. ಈ ಚಿತ್ರದ ಟ್ರೇಲರ್ ಅನ್ನು ಭಾರಿ ಸಂಖ್ಯೆಯ ಜನ ಮೆಚ್ಚಿಕೊಂಡಿದ್ದಾರೆ.
ಬೆಂಗಳೂರು (ಜು. 30): ರಾಷ್ಟ್ರ ಪ್ರಶಸ್ತಿ ವಿಜೇತ ನಟ ಎನ್ನುವ ಇಮೇಜ್‌ನ ಆಚೆಗೂ ಎಲ್ಲ ರೀತಿಯ ಸಿನಿಮಾಗಳಲ್ಲಿ ನಟಿಸುತ್ತಿರುವ ಸಂಚಾರಿ ವಿಜಯ್ ಅವರ ಮೊದಲ ಕಮರ್ಷಿಯಲ್ ಸಿನಿಮಾ ತೆರೆಗೆ ಸಿದ್ಧವಾಗಿದೆ. ಚಿತ್ರದ ಹೆಸರು ‘ಪಾದರಸ’. ಈ ಚಿತ್ರದ ಟ್ರೇಲರ್ ಅನ್ನು ಭಾರಿ ಸಂಖ್ಯೆಯ ಜನ ಮೆಚ್ಚಿಕೊಂಡಿದ್ದಾರೆ.
ತಮ್ಮ ಕೆರಿಯರ್‌ನಲ್ಲೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಟ್ರೇಲರ್ ಹಿಟ್ ಆಗಿಲ್ಲ. ಈ ಕೊರತೆಯನ್ನು ‘ಪಾದರಸ’ ಸಿನಿಮಾ ಬ್ರೇಕ್ ಮಾಡಿದೆ ಎನ್ನುವ ಸಂಭ್ರಮ ವಿಜಯ್ ಅವರದ್ದು. ಅಂದಹಾಗೆ ಈ ಚಿತ್ರ ಆಗಸ್ಟ್ 10 ಕ್ಕೆ ತೆರೆಗೆ ಬರುತ್ತಿದೆ. ಆರ್ಟ್ ಎನ್ ಸೋಲ್ ಮೀಡಿಯಾ ಸರ್ವೀಸ್ ಬ್ಯಾನರ್ ನಿರ್ಮಾಣದ ಈ ಚಿತ್ರಕ್ಕೆ ಹೃಕೇಶ್ ಜಂಬಗಿ ನಿರ್ದೇಶಕರು. ಈ ಸಂದರ್ಭದಲ್ಲಿ ತಮ್ಮ ಚಿತ್ರಗಳ ಕುರಿತು ಸಂಚಾರಿ ವಿಜಯ್
ಹೇಳಿಕೊಂಡ ಮಾತುಗಳು ಇಲ್ಲಿವೆ.
undefined
- ರಾಷ್ಟ್ರ ಪ್ರಶಸ್ತಿ ಬಂದ ಮೇಲೆ ನನಗೆ ಹೆಚ್ಚು ಹೆಚ್ಚು ಅವಕಾಶಗಳು ಬಂದಿದ್ದು ನಿಜ. ಆದರೆ, ಒಂದೇ ರೀತಿಯ ಸಿನಿಮಾಗಳು ಬರಲಿಲ್ಲ ಎಂಬುದು ಖುಷಿಯ ವಿಚಾರ. ನನ್ನ ಇಮೇಜ್‌ಗೂ ಸವಾಲು ಒಡ್ಡುವಂತಹ ಪಾತ್ರಗಳು ಸಿಗುತ್ತಿವೆ. ಹರಿವು, ನಾನು ಅವನಲ್ಲ ಅವಳು ಚಿತ್ರಗಳಿಗೂ ಆ ನಂತರ ಬಂದ ನನ್ ಮಗಳೇ ಹೀರೋಯಿನ್, 6 ನೇ ಮೈಲಿ, ಈಗ ಬಿಡುಗಡೆಗೆ ಸಿದ್ಧವಾಗಿರುವ ಪಾದರಸ ಚಿತ್ರಗಳಿಗೂ ಕೊಂಚವೂ ಸಂಬಂಧವಿಲ್ಲ. ಇದರ ಜತೆಗೆ ಹಾರರ್ ಚಿತ್ರದಲ್ಲೂ ನಟಿಸಿದೆ. ವಿಲನ್ ಆಗಿಯೂ ಕಾಣಿಸಿಕೊಂಡಿದ್ದೇನೆ.
- ಸಾಮಾನ್ಯವಾಗಿ ಪ್ರಶಸ್ತಿ ಬಂದ ನಟರನ್ನು ಆಫ್‌ಬೀಟ್ ಚಿತ್ರಗಳಿಗೆ ಸೀಮಿತ ಮಾಡುವುದು ವಾಡಿಕೆ. ನನ್ನ ವಿಚಾರದಲ್ಲಿ ಇದು ನಡೆಯಲಿಲ್ಲ. ಪಾದರಸ ಸಿನಿಮಾ ನೋಡಿದರೆ ಸಂಚಾರಿ ವಿಜಯ್ ಅವರಿಂದ ಇಂಥ ಸಿನಿಮಾ ಮಾಡುವುದಕ್ಕೂ ಸಾಧ್ಯವೇ ಎಂದು ಅಚ್ಚರಿಪಡುತ್ತೀರಿ. ವಿಶೇಷ ಅಂದರೆ ಇದು ನಾನು ಒಪ್ಪಿಕೊಂಡ ಮೊದಲ ಕಮರ್ಷಿಯಲ್ ಸಿನಿಮಾ.
- ಚಿತ್ರದ ಹೆಸರೇ ಹೇಳುವಂತೆ ನಾನು ತುಂಬಾ ಆ್ಯಕ್ಟಿವ್ ಆಗಿರುತ್ತೇನೆ. ಅಂದರೆ ನನ್ನ ಪಾತ್ರ ಪಾದರಸದಂತೆ ಚಿತ್ರದಲ್ಲಿದೆ. ಒಂದು ರೀತಿಯಲ್ಲಿ ಪ್ರೇಕ್ಷಕರಿಗೆ ನಾನೇ ಖಳನಾಯಕ ಎನ್ನುವಂತಿರುತ್ತದೆ. ಹಾಗೆ ನಾನು ನೋಡುಗರಿಗೆ ನೆಗೆಟಿವ್ ಆಗಿ ಯಾಕೆ ಕಾಣಿಸಿಕೊಳ್ಳುತ್ತೇನೆಂಬುದು ಸಿನಿಮಾ ನೋಡಿ ತಿಳಿಯಬೇಕು. ಒಂದು ವೇಳೆ ಅರ್ಧ ಚಿತ್ರ ನೋಡಿ ಎದ್ದು ಬಂದರೆ ನನ್ನ ಬೈಯ್ದುಕೊಳ್ಳುವುದು ಗ್ಯಾರಂಟಿ. ಚಿತ್ರ ಪೂರ್ತಿ ನೋಡಿದರೆ ನನ್ನ ಹೊಗಳುವುದು ಸತ್ಯ.
- ಒಳ್ಳೆಯವನ ಅಸಲಿ ಮುಖವಾಡವನ್ನು ತೆರೆದಿಡುವ ಕತೆ ಇಲ್ಲಿದೆ. ಪರಿಸ್ಥಿತಿಗಳ ಒತ್ತಡಕ್ಕೆ ಸಿಲುಕುವ ವ್ಯಕ್ತಿ ಏನೆಲ್ಲ ಮಾಡುತ್ತಾನೆ ಎಂಬುದೇ ಚಿತ್ರದ ಕತೆ. ಹಾಟ್ ಆಗಿ ಕಾಣಿಸಿಕೊಳ್ಳುವ ನಾಯಕಿ ಇಲ್ಲಿದ್ದಾರೆ.
ಬೀಚ್‌ನಲ್ಲಿ ಹಾಡುತ್ತೇನೆ, ಕುಣಿಯುತ್ತೇನೆ. ಕೊಂಚ ಸ್ಪೈಸಿಯಾಗಿರುತ್ತದೆ. ಚಿತ್ರದ ನಾಯಕಿ ವೈಷ್ಣವಿ ಮೆನನ್. ನಿರಂಜನ್ ದೇಶಪಾಂಡೆ ನನ್ನ ಗೆಳೆಯನ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ಹಾಸ್ಯ ಹೆಚ್ಚಾಗಿದೆ. ಸಹಜವಾಗಿ ಮೂಡುವ ಮತ್ತು ವಿಲನ್‌ಗಳ ಜತೆಗೆ ಮಾತನಾಡುವ ಹೇಳುವ ಟೈಮ್ ಡೈಲಾಗ್‌ಗಳೇ ಚಿತ್ರದ ಪ್ಲಸ್ ಪಾಯಿಂಟ್.