
ನಟಿ ಸಮಂತಾ ಸದ್ಯ ಸಖತ್ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ತೆರೆಕಂಡ ಅವರ 'ಮಾ ಇಂಟಿ ಬಂಗಾರಂ' ಸಿನಿಮಾ ದೊಡ್ಡ ಹಿಟ್ ಆಗಿದೆ. ತೆಲುಗು ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ಈ ಮಹಿಳಾ ಪ್ರಧಾನ ಸಿನಿಮಾ ಯಶಸ್ಸಿನ ಅಲೆಯಲ್ಲಿ ಸಮಂತಾ ತೇಲುತ್ತಿದ್ದಾರೆ. ಇದರ ಜೊತೆಗೆ, ಅವರು ತಮ್ಮ ಪತಿ ರಾಜ್ ನಿಡಿಮೋರು ಜೊತೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಷಯ ಕೇಳಿ ಅಭಿಮಾನಿಗಳು ಫುಲ್ ಎಕ್ಸೈಟ್ ಆಗಿದ್ದಾರೆ.
ವೆಲ್‌ನೆಸ್ ರಿಟ್ರೀಟ್‌ನಲ್ಲಿ ಭಾವಿ ಪೋಷಕರು
ಸದ್ಯದಲ್ಲೇ ಪೋಷಕರಾಗಲಿರುವ ಈ ಜೋಡಿ, ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಈ ಅಮೂಲ್ಯ ಕ್ಷಣಗಳನ್ನು ಒಟ್ಟಿಗೆ ಸಂಭ್ರಮಿಸುತ್ತಿದ್ದಾರೆ. ಸಿನಿಮಾದ ಯಶಸ್ಸಿನ ಬಿಡುವಿಲ್ಲದ ಕೆಲಸಗಳಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿರುವ ಈ ಜೋಡಿ, 'ವೆಲ್‌ನೆಸ್ ವೆಕೇಷನ್'ಗೆ ಹಾರಿದ್ದಾರೆ.
ಸಮಂತಾಳ ಕ್ಯೂಟ್ ಇನ್‌ಸ್ಟಾಗ್ರಾಮ್ ಪೋಸ್ಟ್
ಹೌದು, ಸಮಂತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ವೆಕೇಷನ್‌ನ ಸುಂದರ ಮತ್ತು ಕ್ಯೂಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಗಂಡ-ಹೆಂಡತಿ ಇಬ್ಬರೂ ಜೊತೆಯಾಗಿ ಸಮಯ ಕಳೆಯುತ್ತಿರುವುದನ್ನು ಕಾಣಬಹುದು. ಒಳ್ಳೆ ಊಟ, ಹೀಲಿಂಗ್ ಸೆಷನ್‌ಗಳು, ಮಸಾಜ್, ಯೋಗ ಮತ್ತು ಸ್ಕಿನ್‌ಕೇರ್ ಸೆಷನ್‌ಗಳನ್ನು ಎಂಜಾಯ್ ಮಾಡುತ್ತಾ, ಸಮಂತಾ ಮತ್ತು ರಾಜ್ ತಮ್ಮ ಖುಷಿಯ ಕ್ಷಣಗಳನ್ನು ಕಳೆದಿದ್ದಾರೆ. ಈ ಪೋಸ್ಟ್ ಹಂಚಿಕೊಂಡು ಸಮಂತಾ, "ವೆಲ್‌ನೆಸ್ ಟ್ರಾವೆಲ್ ಯಾವಾಗಲೂ ನನ್ನ ಫೇವರಿಟ್," ಎಂದು ಬರೆದುಕೊಂಡಿದ್ದಾರೆ.
ಅಭಿಮಾನಿಗಳ ಪ್ರತಿಕ್ರಿಯೆ
ಸಮಂತಾ ಈ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಂತೆ, ಅಭಿಮಾನಿಗಳು ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ. ಒಬ್ಬರು "ಬೇಬಿ ಬಾಯ್" ಎಂದು ಬರೆದರೆ, ಮತ್ತೊಬ್ಬರು "ಅದ್ಭುತ ಸೌಂದರ್ಯ" ಎಂದಿದ್ದಾರೆ. ಇನ್ನೊಬ್ಬರು "8ನೇ ಸ್ಲೈಡ್ ಓ ಮೈ ಗಾಡ್" ಎಂದು ಕಾಮೆಂಟ್ ಮಾಡಿದ್ದಾರೆ. "ಓ ಮೈ ಗಾಡ್, ಇದು ತುಂಬಾ ಇಷ್ಟ ಆಯ್ತು" ಎಂಬ ಕಾಮೆಂಟ್‌ಗಳು ಕೂಡ ಬಂದಿವೆ.
ನಂದಿನಿ ರೆಡ್ಡಿ ನಿರ್ದೇಶನದ ಮತ್ತು ಸಮಂತಾ ಪತಿ ರಾಜ್ ನಿರ್ಮಾಣದ 'ಮಾ ಇಂಟಿ ಬಂಗಾರಂ' ಸಿನಿಮಾ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಕೆ ಮಾಡಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.