ಕೆಡಿ ಧ್ರುವ ಸರ್ಜಾಗೆ ಸಮಂತಾ ಸವಾಲ್: ‘ಮಾ ಇಂಟಿ ಬಂಗಾರಂ’ ಕದನಕ್ಕಿಳಿದ ಸ್ಯಾಮ್

Published : Mar 31, 2026, 07:01 PM IST
Samantha vs Dhruva Sarja

ಸಾರಾಂಶ

ಸಮಂತಾ ರುತ್ ಪ್ರಭು.. ಈ ಹೆಸ್ರು ಸೌತ್ ಸಿನಿ ಇಂಡಸ್ಟ್ರಿಯ ಪ್ರೈಡ್​.. ಯಾಕಂದ್ರೆ ಕಳೆದ 15 ವರ್ಷದಿಂದ ಸಮಂತಾ ತೆಲುಗು ಚಿತ್ರರಂಗವನ್ನ ಆಳುತ್ತಿದ್ದಾರೆ. ರಶ್ಮಿಕಾರಂತಹ ಸ್ಟ್ರಾಂಗೆಸ್ಟ್​​ ನಟಿಯರು ಬಂದ್ರು ಅವರಿಗಿಂತ ಗಟ್ಟಿಗಿತ್ತಿ.

ನಟಿ ಸಮಂತಾ ಜೀವನದಲ್ಲಿ ಬಂದ ಸವಾಲುಗಳು ಒಂದೆರಡಲ್ಲ. ಮುರಿದು ಬಿದ್ದ ಸಂಸಾರ. ಅದಕ್ಕೊಂದಿಷ್ಟು ನಿಂದನೆಗಳು ಸಮಂತಾಳ ನಿದ್ದೆ ಗೆಡಿಸಿದ್ದು ಸಳ್ಳಲ್ಲ. ಆದ್ರು ಈ ಗಟ್ಟಿಗಿತ್ತಿ ಎದ್ದು ಬಂದು ಮತ್ತೊಂದು ಚಿತ್ರ ಜಗತ್ತು ಹಾಗು ಪರ್ಸನಲ್​ ಜೀವನದಲ್ಲಿ ಹೊಸದೊಂದು ಪ್ರಪಂಚ ಕಟ್ಟಿಕೊಂಡ್ರು. ಈಗ ಇದೇ ಸ್ಯಾಮ್​ ಕನ್ನಡದ ಸ್ಟಾರ್ ಧ್ರುವ ಸರ್ಜಾಗು ಸವಾಲ್​ ಹಾಕೋ ಮಟ್ಟಕ್ಕೆ ಬಂದಿದ್ದಾರೆ. ಹಾಗಾದ್ರೆ ಆಂಧ್ರದ ಸಮಂತಾಗೂ ಕನ್ನಡದ ಹುಡುಗ ಧ್ರುವ ಸರ್ಜಾ ಮಧ್ಯೆ ಇರೋ ಸವಾಲಿನ ಕಥೆ ಏನು?

ಸಮಂತಾ ರುತ್ ಪ್ರಭು.. ಈ ಹೆಸ್ರು ಸೌತ್ ಸಿನಿ ಇಂಡಸ್ಟ್ರಿಯ ಪ್ರೈಡ್​.. ಯಾಕಂದ್ರೆ ಕಳೆದ 15 ವರ್ಷದಿಂದ ಸಮಂತಾ ತೆಲುಗು ಚಿತ್ರರಂಗವನ್ನ ಆಳುತ್ತಿದ್ದಾರೆ. ರಶ್ಮಿಕಾರಂತಹ ಸ್ಟ್ರಾಂಗೆಸ್ಟ್​​ ನಟಿಯರು ಬಂದ್ರು ಅವರಿಗಿಂತ ಗಟ್ಟಿಗಿತ್ತಿ ನಾನು ಅಂತ ತೋರಿಸ್ತಾ ಸಿನಿಮಾ ಮಾಡ್ತಾ ಗೆಲ್ಲುತ್ತಾ ಇರೋ ನಟಿ ಸಮಂತಾ. ಪರ್ಸನಲ್ ಜೀವನ ಹಳ್ಳ ಹಿಡಿದ್ರೂ, ಈಗ ಅದಕ್ಕೊಂದು ದಾರಿ ಮಾಡಿಕೊಂಡು ಮತ್ತೆ ಮತ್ತೆ ಎದ್ದು ನಿಂತಿರೋ ರಿಯಲ್ ಸ್ಟ್ರಾಂಗೆಸ್ಟ್​ ನಟಿ ಅಂದ್ರೆ ಸಮಂತಾ. ಇಂತಹ ಸ್ಯಾಮ್ ಈಗ ತೆಲುಗು ಸಿನಿಮಾ ರಂಗದಲ್ಲಿ ಹೊಸದೊಂದು ಅಧ್ಯಾಯ ಆರಂಭ ಮಾಡಿದ್ದಾರೆ.

ಅದೇ ಮಾ ಇಂಟಿ ಬಂಗಾರಂ ಮೂಲಕ ಮತ್ತೊಂದು ಕದನಕ್ಕೆ ಇಳಿದಿದ್ದಾರೆ ಸಮಂತಾ.. ಅದು ಕನ್ನಡದ ಹುಡುಗ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎದುರು. ಯೆಸ್, ಜೋಗಿ ಪ್ರೇಮ್​ ಕೆಡಿ ಸಿನಿಮಾದ ಸರ್ಸೆ ಸರ್ಸೆ ಸೆರ್ಗಾ ಹಾಡಿನ ಮೂಲಕ ಇಡೀ ಪಾರ್ಲಿಮೆಂಟ್​​ ವರೆಗೂ ಸೌಂಡ್ ಮಾಡಿದ್ದು ಆಗಿದೆ. ಈ ವಿವಾದ ತಣ್ಣಗಾಗಿ ಆ ಹಾಡಿಗೆ ಹೊಸ ಪದ ಪೋಣಿಸೋ ಕೆಲಸದಲ್ಲಿ ಪ್ರೇಮ್ ಇದ್ದಾರೆ. ಇದರ ಮಧ್ಯೆ ಕೆಡಿ ಸಿನಿಮಾವನ್ನ ಏಪ್ರಿಲ್​ 30ಕ್ಕೆ ಕನ್ನಡ ತೆಲುಗು ಸೇರಿ 5 ಭಾಷೆಯಲ್ಲಿ ಬಿಡುಗಡೆ ಮಾಡೋದಾಗಿ ಬಿಗ್ ಅನೌನ್ಸ್​ಮೆಂಟ್ ಆಗಿದೆ.

ಅದೇ ದಿನ ಸಮಂತಾ ನಟನೆಯ ಮೋಸ್ಟ್ ಎಕ್ಸ್​​ಪೆಕ್ಟೆಡ್​​ ಮಾ ಇಂಟಿ ಬಂಗಾರಂ ಸಿನಿಮಾ ಕೂಡ ತೆರೆ ಕಾಣುತ್ತಿದೆ. ಹೀಗಾಗಿ ಆಂಧ್ರ, ತೆಲಂಗಾಣದಲ್ಲಿ ಧ್ರುವ ಸರ್ಜಾ ಹಾಗು ಸಮಂತಾ ಬಾಕ್ಸಾಫೀಸ್​​ ಗುದ್ದಾಟಕ್ಕೆ ಇಳಿಯಲಿದ್ದಾರೆ. ಇನ್ನು 2023ರಲ್ಲಿ ‘ಖುಷಿ’ ಸಿನಿಮಾ ಬಳಿಕ ಸಮಂತಾ ರುತ್ ಪ್ರಭು ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಅಂದಿನಿಂದ ಇಂದಿನವರಿಗೆ ಸ್ಯಾಮ್ ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ. ಈಗ ರಾಜ್ ನಿಧಿಮೋರು ಜೊತೆ ಸಮಂತಾ ಎರಡನೇ ವಿವಾಹ ಆಗಿದ್ದು ನೆಮ್ಮದಿ ಸಂಸಾರ ಸಾಗಿಸುತ್ತಿದ್ದಾರೆ. ಇದೀಗ ವಿವಾಹದ ಬಳಿಕ ಸಮಂತಾ ನಟಿಸಿರೋ ಮೊದಲ ಸಿನಿಮಾ ಮಾ ಇಂಟಿ ಬಂಗಾರಂ ಬಿಡುಗಡೆ ಆಗುತ್ತಿದೆ.

ಮೇಕಿಂಗ್ ಝಲಕ್​ ರಿಲೀಸ್

ಮತ್ತೊಂದು ಕಡೆ ಡೈರೆಕ್ಟರ್ ಜೋಗಿ ಪ್ರೇಮ್ ತನ್ನ ಕನಸಿಕ ಕೆಡಿ ಸಿನಿಮಾ ಪ್ರಚಾರವನ್ನ ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಎಲ್ಲ ಕಡೆ ಹೋಗುತ್ತಿದ್ದಾರೆ. ಈಗಾಗ್ಲೆ ಬಿಡುಗಡೆ ಆಗಿರೋ ಕೆಡಿಯ ಶಿವ ಶಿವ ಸಾಂಗ್ ಸೂಪರ್ ಹಿಟ್ ಆಗಿದೆ. ಈಗ ಅದೇ ಹಾಡಿನ ಮೇಕಿಂಗ್ ಝಲಕ್​ ರಿಲೀಸ್ ಆಗಿದೆ. ಈ ಹಾಡಿಗಾಗಿ ಧ್ರುವ ಹೇಗೆಲ್ಲಾ ಕಷ್ಟ ಪಟ್ಟಿದ್ದಾರೆ ಅಂತ ಹೇಳಿದ್ದಾರೆ. ‘ಮಾ ಇಂಟಿ ಬಂಗಾರಂ’ ಅಂದ್ರೆ ನಮ್ಮ ಮನೆಯ ಬಂಗಾರ ಅಂತ ಅರ್ಥ.. ಸೋ ಈಗ ತೆಲುಗು ಚಿತ್ರರಂದಗ ಬಂಗಾರವನ್ನ ಕನ್ನಡದ ಸಿನಿಮಾ ಕೆಡಿ ಎದುರು ಪಣಕ್ಕಿಡಲಾಗಿದೆ. ಈ ಆಟದಲ್ಲಿ ಯಾರು ಗೆಲ್ತಾರೆ ಅನ್ನೋದೇ ಈಗಿರೋ ಕುತೂಹಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕ್ರಿಶ್ಚಿಯನ್‌ ಸಂಪ್ರದಾಯದಂತೆ ಪ್ರಕಾಶ್‌ ರಾಜ್‌ ತಾಯಿ ಅಂತಿಮ ಸಂಸ್ಕಾರ, ಬೆಂಗಳೂರಲ್ಲಿ ಅಂತ್ಯಕ್ರಿಯೆ ನಡೆದಿದ್ದೆಲ್ಲಿ?
ಪೂನಂ ಪಾಂಡೆ ಪ್ರೆಗ್ನೆಂಟ್? ಪೋಸ್ಟ್ ಬೆನ್ನಲ್ಲೇ ನೆಟ್ಟಿಗರ ಕಮೆಂಟ್‌ಗೆ ಸುಸ್ತಾದ ನಟಿ