
ಮುಂಬೈ[ಜು.08]: ಕಿರುತೆರೆ ಜಗತ್ತಿನ ಪ್ರಖ್ಯಾತ ಕಾರ್ಯಕ್ರಮಗಳಲ್ಲಿ ಒಂದಾದ ಬಿಗ್ ಬಾಸ್ ಸೀಜನ್ 13 ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗ ಕಾರ್ಯಕ್ರಮ ನಡೆಯಲಿರುವ ಸ್ಥಳ ಬದಲಾಗುವ ಮಾತುಗಳು ಜೋರಾಗಿವೆ. ಅಷ್ಟಕ್ಕೂ ಕಾರ್ಯಕ್ರಮ ಎಲ್ಲಾಗುತ್ತೆ?
ಲಭ್ಯವಾದ ಮಾಹಿತಿ ಅನ್ವಯ ಈ ಬಾರಿ ಬಿಗ್ ಬಾಸ್ ನಿರ್ಮಾಪಕರು ಕಾರ್ಯಕ್ರಮದ ಫಾರ್ಮೆಟ್ ಮಾತ್ರವಲ್ಲದೇ, ಲೊಕೇಶನ್ ಕೂಡಾ ಬದಲಾಯಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಾರಿ ಬಿಗ್ ಬಾಸ್ 13ರ ಸೆಟ್, ಮರಾಠಿ ಬಿಗ್ ಬಾಸ್ ಸೀಜನ್ 2 ನಡೆದ ಮುಂಬೈನ ಗೊರೆಗಾಂವ್ ಫಿಲಂ ಸಿಟಿಗೆ ಸ್ಥಳಾಂತರಗೊಳ್ಳಲಿದೆ. ಈ ಐಡಿಯಾ ಮರಾಠಿ ಬಿಗ್ ಬಾಸ್ ನಿರೂಪಕ ಹಾಗೂ ಸಲ್ಮಾನ್ ಖಾನ್ ಆಪ್ತ ಮಹೇಶ್ ಮಾಂಜ್ರೇಕರ್ ನೀಡಿದ್ದಾರೆ ಎನ್ನಲಾಗಿದೆ. ಈ ಹಿಂದಿನ ಬಿಗ್‌ಬಾಸ್ ಸೀಜನ್‌ಗಳು ಮುಂಬೈನ ಲೋನಾವಲಾದಲ್ಲಿರುವ ಸೆಟ್‌ನಲ್ಲಿ ನಡೆಯುತ್ತಿದ್ದವು.
ಸುಮಾರು 15 ವಾರಗಳವರೆಗೆ ನಡೆಯುವ ಬಿಗ್ ಬಾಸ್ ಸೀಜನ್ 13 ಸಪ್ಟೆಂಬರ್ 29ರಿಂದ ಆರಂಭವಾಗಲಿದೆ. ಈ ಬಾರಿಯೂ ಬಾಲಿವುಡ್ ನಟ ಸಲ್ಮಾನ್ ಖಾನ್ ಈ ಕಾರ್ಯಕ್ರಮ ನಿರೂಪಿಸಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.