ಚಾಲೆಂಜಿಂಗ್ ಸ್ಟಾರ್‌ಗೆ ಸಿಕ್ತು ಹೊಸ ಬಿರುದು; ಕೊಟ್ಟಿದ್ದು ಅಭಿಮಾನಿಗಳಲ್ಲ!

By Web Desk  |  First Published Jul 8, 2019, 2:21 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಸಿಕ್ತು ಹೊಸ ಬಿರುದು | ಬಿರುದು ಕೊಟ್ಟಿದ್ದು ಅಭಿಮಾನಿಗಳಲ್ಲ, ಬದಲಾಗಿ ಸ್ಯಾಂಡಲ್‌ವುಡ್ ಹಿರಿಯ ನಟಿ |  


ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸಾರಥಿ, ದಾಸ, ಡಿ ಬಾಸ್ ಹೀಗೆ ಅಭಿಮಾನಿಗಳು ಬಹಳ ಪ್ರೀತಿಯಿಂದ ಕರೆಯುತ್ತಾರೆ. ಈಗ ದರ್ಶನ್ ಗೆ ಇಬ್ಬೊಂದು ಹೆಸರು ಸೇರ್ಪಡೆಯಾಗಿದೆ. 

ಸುಲ್ತಾನ್ ಆಫ್ ಸ್ಯಾಂಡಲ್ ವುಡ್ ಎಂಬ ಬಿರುದು ಹೊಸದಾಗಿ ಸೇರ್ಪಡೆಯಾಗಿದೆ. ಇದನ್ನು ಕೊಟ್ಟಿದ್ದು ಅಭಿಮಾನಿಗಳಲ್ಲ, ಬದಲಾಗಿ ನಟಿ ತಾರಾ ಅನುರಾಧಾ. 

Tap to resize

Latest Videos

ಮುನಿರತ್ನ ಮೇಲೆ ಮುನಿಸಿಕೊಂಡ ಡಿ-ಬಾಸ್ ಫ್ಯಾನ್ಸ್!

ಇತ್ತೀಚಿಗಷ್ಟೇ ಸಿಂಗ ಆಡಿಯೋ ರಿಲೀಸ್ ಗೆ ತಾರಾ ಅನುರಾಧಾ ಆಗಮಿಸಿದ್ದರು. ಆ ವೇಳೆ ದರ್ಶನ್ ಗೆ ಸುಲ್ತಾನ್ ಆಫ್ ಸ್ಯಾಂಡಲ್ ವುಡ್ ಎಂಬ ಬಿರುದು ನೀಡಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಬಗ್ಗೆ ಹಾಡಿ ಹೊಗಳಿದ್ದಾರೆ. 

ಚಿರಂಜೀವಿ ಸರ್ಜಾ ಹಾಗೂ ಅದಿತಿ ಪ್ರಭುದೇವ ನಟನೆಯ ಸಿಂಗ ಚಿತ್ರದ ಆಡಿಯೋ ರಿಲೀಸ್ ಆಗಿದೆ. ಇದೊಂದು ಪಕ್ಕಾ ಮಾಸ್ ಕಂಟೆಂಟಿನ ಚಿತ್ರವಾಗಿದೆ. ಸಾಹಸ ದೃಶ್ಯಗಳನ್ನು ಡಾ.ಕೆ ರವಿವರ್ಮಾ ಮತ್ತು ಪಳನಿರಾಜ್ ನಿರ್ದೇಶನ ಮಾಡಿದ್ದಾರೆ. ಡಾ. ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಮತ್ತು ಚೇತನ್ ಹಾಡುಗಳನ್ನು ಬರೆದಿದ್ದಾರೆ. ಈಗಾಗಲೇ ಈ ಚಿತ್ರದ ಶ್ಯಾನೇ ಟಾಪಗೌವ್ಳೆ ಅನ್ನೋ ಹಾಡಂತೂ ಟ್ರೆಂಡ್ ಸೆಟ್ ಮಾಡಿದೆ. 

click me!