ಕಿಚ್ಚನಿಗೆ ಸಲ್ಮಾನ್ ಅಮೂಲ್ಯ ಗಿಫ್ಟ್... ಕಾರಣ ಏನಂತೆ!

Published : Jan 07, 2020, 07:01 PM ISTUpdated : Jan 07, 2020, 07:12 PM IST
ಕಿಚ್ಚನಿಗೆ ಸಲ್ಮಾನ್ ಅಮೂಲ್ಯ ಗಿಫ್ಟ್... ಕಾರಣ ಏನಂತೆ!

ಸಾರಾಂಶ

ಸುದೀಪ್ ಗೆ ಸಲ್ಮಾನ್ ಖಾನ್ ಅಮೂಲ್ಯ ಕೊಡುಗೆ| ಬಿಎಂಡಬ್ಲ್ಯೂ ಎಂ5 ಕಾರಿನ ಉಡುಗೊರೆ| ದಬಾಂಗ್ 3 ನಂತರ ನೆಚ್ಚಿನ ಸ್ನೇಹಿತರು|  ಒಳ್ಳೆಯ ತನಕ್ಕೆ ಒಳ್ಳೆಯದೇ ಸಿಗುತ್ತೆ ಎಂದು ಟ್ವೀಟ್ ಮಾಡಿದ ಕಿಚ್ಚ

ಬೆಂಗಳೂರು(ಜ. 07)  ದಬಾಂಗ್ 3 ಚಿತ್ರದ ನಂತರ ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ಚಡ್ಡಿ ದೋಸ್ತ್ ಗಳಾಗಿದ್ದಾರೆ. ಸಿನಿಮಾ ಪ್ರಮೋಶನ್ ಗೆ ಒಟ್ಟೊಟ್ಟಿಗೆ ಓಡಾಡಿದ್ದ ನಾಯಕರಿಗೆ ಪ್ರಭುದೇವ್ ಸಹ ಸಾಥ್ ಕೊಟ್ಟಿದ್ದರು. ಇದೀಗ ಸಲ್ಮಾನ್ ಖಾನ್ ಕಿಚ್ಚ ಸುದೀಪ್ ಅವರಿಗೆ ಅಮೂಲ್ಯ ಗಿಫ್ಟ್ ಒಂದನ್ನು ನೀಡಿದ್ದಾರೆ.

ಸಲ್ಮಾನ್ ಖಾನ್ ಕಿಚ್ಚ ಸುದೀಪ್ ಗೆ ಬಿಎಂಡಬ್ಲ್ಯೂ ಎಂ5 ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಇದರಿಂದ ಖುಷಿಯಾಗಿರುವ ಕಿಚ್ಚ ತಮ್ಮ ಸಂತಸವನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

15 ವರ್ಷಗಳ ನಂತರ ಪ್ರಶಸ್ತಿ ಸ್ವೀಕರಿಸಿದ ಸುದೀಪ್

ನನ್ನ ಮತ್ತು ಕುಟುಂಬದ ಮೇಲೆ ಸಲ್ಮಾನ್ ಖಾನ್  ಪ್ರೀತಿ ತೋರಿರುವುದಕ್ಕೆ ಧನ್ಯವಾದ . ಇಷ್ಟು ದೊಡ್ಡ ಉಗುಗೊರೆ ನೀಡುತ್ತಾರೆ ಎಂದು ಭಾವಿಸಿರಲಿಲ್ಲ. ನಿಜಕ್ಕೂ ಈ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸವಾಗುತ್ತಿದೆ ಎಂದು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ನಿಮ್ಮ ಜತೆಗೆ ಕೆಲಸ ಮಾಡಿರುವುದು ನನಗೊಂದು ಗೌರವ ಹಾಗೂ ನೀವು ನನ್ನ ಮನೆಗೆ ಭೇಟಿ ನೀಡಿರುವುದು ನನ್ನ ಪಾಲಿಗೆ ದೊಡ್ಡ ಉಡುಗೊರೆ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

‘ದೃಷ್ಟಿ ಬೊಟ್ಟು’ ಧಾರಾವಾಹಿಯ ಕೃಷ್ಣಸುಂದರಿಯ ಈ ಲುಕ್ ಹೇಗಿದೆ?
Pawan Kalyan: ಪವನ್ ಕಲ್ಯಾಣ್ 100 ಬಾರಿ ನೋಡಿದ ಬಾಲಯ್ಯ ಸಿನಿಮಾ ಯಾವುದು? ಪವರ್‌ಸ್ಟಾರ್‌ಗೆ ಅಷ್ಟೊಂದು ಇಷ್ಟವೇ?