ಏನಾಯಿತೆಂದು ಅಮ್ಮ ಕೇಳುತ್ತಿದ್ದಾರೆ: ನಟ ಸಲ್ಮಾನ್ ಖಾನ್ ಪೋಸ್ಟ್‌ಗೆ ಆತಂಕಗೊಂಡ ಫ್ಯಾನ್ಸ್!

Published : May 19, 2026, 07:52 PM IST
Salman Khan

ಸಾರಾಂಶ

ತಮ್ಮ ಇತ್ತೀಚಿನ "ಒಂಟಿ ಮತ್ತು ಏಕಾಂಗಿ" ಪೋಸ್ಟ್‌ನಿಂದ ಆನ್‌ಲೈನ್‌ನಲ್ಲಿ ಶುರುವಾಗಿದ್ದ ಚರ್ಚೆಗಳಿಗೆ ನಟ ಸಲ್ಮಾನ್ ಖಾನ್ ತೆರೆ ಎಳೆದಿದ್ದಾರೆ. ಭಾನುವಾರ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

ತಮ್ಮ 'ಒಂಟಿ ಮತ್ತು ಏಕಾಂಗಿ' ಪೋಸ್ಟ್ ವೈರಲ್ ಆದ ನಂತರ ನಟ ಸಲ್ಮಾನ್ ಖಾನ್ ಸ್ಪಷ್ಟನೆ ನೀಡಿದ್ದಾರೆ. ಇದು ನನ್ನ ವೈಯಕ್ತಿಕ ಜೀವನದ ಬಗ್ಗೆ ಅಲ್ಲ, ಅಭಿಮಾನಿಗಳಿಗೆ 'ಚಿಲ್' ಮಾಡಲು ಹೇಳಿದ್ದಾರೆ. ನನಗೆ ಪ್ರೀತಿಯ ಕುಟುಂಬ ಮತ್ತು ನಿಮ್ಮಂತಹ ಅಭಿಮಾನಿಗಳಿರುವಾಗ ನಾನು ಒಂಟಿಯಾಗಿರಲು ಸಾಧ್ಯವಿಲ್ಲ, ಕೆಲವೊಮ್ಮೆ 'ಮೀ ಟೈಮ್' ಬೇಕಾಗುತ್ತದೆ ಅಷ್ಟೇ ಎಂದು ಹೇಳಿದ್ದಾರೆ.

ತಮ್ಮ ಇತ್ತೀಚಿನ "ಒಂಟಿ ಮತ್ತು ಏಕಾಂಗಿ" ಪೋಸ್ಟ್‌ನಿಂದ ಆನ್‌ಲೈನ್‌ನಲ್ಲಿ ಶುರುವಾಗಿದ್ದ ಚರ್ಚೆಗಳಿಗೆ ನಟ ಸಲ್ಮಾನ್ ಖಾನ್ ತೆರೆ ಎಳೆದಿದ್ದಾರೆ. ಭಾನುವಾರ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ಅಭಿಮಾನಿಗಳಿಗೆ "ಚಿಲ್" ಮಾಡುವಂತೆ ಹೇಳಿದ್ದು, ಆ ಪೋಸ್ಟ್ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಏನಿದು 'ಒಂಟಿ ಮತ್ತು ಏಕಾಂಗಿ' ಪೋಸ್ಟ್?

ಕೆಲ ದಿನಗಳ ಹಿಂದೆ ಸಲ್ಮಾನ್, ಸೋಫಾದ ಮೇಲೆ ಶರ್ಟ್‌ಲೆಸ್ ಆಗಿ ವಿಶ್ರಾಂತಿ ಪಡೆಯುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದರು. ಅದರ ಜೊತೆ, "ನಾನು, ನನ್ನಷ್ಟಕ್ಕೆ ನಾನು... ನಿಮ್ಮಷ್ಟಕ್ಕೆ ನೀವಿರಲು ಎರಡು ದಾರಿಗಳಿವೆ, ಒಂದು ಒಂಟಿಯಾಗಿರುವುದು, ಇನ್ನೊಂದು ಏಕಾಂಗಿಯಾಗಿರುವುದು. ಒಂಟಿಯಾಗಿರುವುದು ನಮ್ಮ ಆಯ್ಕೆ, ಆದರೆ ಯಾರೂ ನಮ್ಮ ಜೊತೆ ಇರಲು ಬಯಸದಿದ್ದಾಗ ಏಕಾಂಗಿತನ ಕಾಡುತ್ತದೆ... ಇದರ ಮುಂದಿನದ್ದನ್ನು ನೀವೇ ಯೋಚಿಸಿ" ಎಂದು ಬರೆದಿದ್ದರು. ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿ, ಸಲ್ಮಾನ್ ಖಾನ್ ಒಂಟಿತನದಿಂದ ಬಳಲುತ್ತಿದ್ದಾರೆಯೇ ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು.

ನಾನು ಹೇಗೆ ಒಂಟಿಯಾಗಿರಲು ಸಾಧ್ಯ?

ಆದರೆ, ನಂತರ ಮತ್ತೊಂದು ಸಂದೇಶ ಹಂಚಿಕೊಂಡ ಸಲ್ಮಾನ್, ಯಾರೂ ಚಿಂತಿಸುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ. ತಮ್ಮ ಪೋಸ್ಟ್ ಕುರಿತ ಚರ್ಚೆಗಳಿಗೆ ಪ್ರತಿಕ್ರಿಯಿಸಿದ ಅವರು, "ಅರೇ ಯಾರ್, ನಾನು ನನ್ನ ಬಗ್ಗೆ ಮಾತಾಡ್ತಿರಲಿಲ್ಲ. ಇಷ್ಟು ದೊಡ್ಡ ಅದ್ಭುತ ಕುಟುಂಬ, ಸ್ನೇಹಿತರಿರುವಾಗ ನಾನು ಹೇಗೆ ಒಂಟಿಯಾಗಿರಲು ಸಾಧ್ಯ? ನಿಮ್ಮಂತಹ ಅಭಿಮಾನಿಗಳ ಹಾರೈಕೆ, ದುವಾಗಳಿರುವಾಗ ನಾನು ಹೇಗೆ ಏಕಾಂಗಿಯಾಗಲು ಸಾಧ್ಯ? ಹಾಗೇನಾದರೂ ಆದರೆ ನಾನು ದೊಡ್ಡ ನಮಕ್ ಹರಾಮ್ ಆಗ್ತೀನಿ" ಎಂದು ಬರೆದಿದ್ದಾರೆ. ಕೆಲವೊಮ್ಮೆ ಜನರ ಜೊತೆ ಇದ್ದು ಸಾಕಾಗಿ, ಸ್ವಲ್ಪ ಸಮಯ ತನಗಾಗಿ ಬೇಕೆನಿಸುತ್ತದೆ ಎಂದು ಸಲ್ಮಾನ್ ತಮಾಷೆಯಾಗಿ ಹೇಳಿದ್ದಾರೆ. "ಕೆಲವೊಮ್ಮೆ ಜನರ ಜೊತೆ ಇದ್ದು ಸಾಕಾಗಿಬಿಡುತ್ತದೆ, ಅದಕ್ಕೆ ಸ್ವಲ್ಪ 'ಮೀ ಟೈಮ್' ಅಷ್ಟೇ... ಈ ಸಲ ಒಂದು ಫೋಟೋ ಹಾಕಿದ್ದಕ್ಕೆ ಬ್ರೇಕಿಂಗ್ ನ್ಯೂಸ್ ಮಾಡಿಬಿಟ್ರಿ. ಅಮ್ಮ ಕೂಡ 'ಏನಾಯ್ತು ಮಗನೇ?' ಅಂತ ಕೇಳ್ತಿದ್ದಾರೆ. ಚಿಲ್ ಮಾಡಿ ಯಾರ್," ಎಂದು ಅವರು ಸೇರಿಸಿದ್ದಾರೆ.
 

 

ಸಿನಿಮಾ ವಿಚಾರ

ಸಿನಿಮಾ ವಿಚಾರಕ್ಕೆ ಬಂದರೆ, ಸಲ್ಮಾನ್ ಖಾನ್ ಮುಂದೆ 'ಮಾತೃಭೂಮಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರೊಂದಿಗೆ ಚಿತ್ರಾಂಗದಾ ಸಿಂಗ್ ನಟಿಸಲಿದ್ದಾರೆ. ಈ ಹಿಂದೆ 'ಬ್ಯಾಟಲ್ ಆಫ್ ಗಲ್ವಾನ್' ಎಂದು ಹೆಸರಿಡಲಾಗಿದ್ದ ಈ ಸಿನಿಮಾ, 2020ರಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ಗಲ್ವಾನ್ ಕಣಿವೆ ಸಂಘರ್ಷವನ್ನು ಆಧರಿಸಿದೆ. ಸಲ್ಮಾನ್ ಖಾನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅಪೂರ್ವ ಲಖಿಯಾ ಆಕ್ಷನ್ ಕಟ್ ಹೇಳಿದ್ದು, 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Salman Khan-Aishwarya Rai Secret: ಸಲ್ಮಾನ್ ಖಾನ್-ಐಶ್ವರ್ಯಾ ರೈ ಲವ್ ಸೀಕ್ರೆಟ್ ಬಿಚ್ಚಿಟ್ಟ ಸಾದಿಯಾ ಸಿದ್ದಿಕಿ; ಇಲ್ಲಿರೋದು ಹೊಸ ವಿಷಯ!
Actress Krishi Thapanda: ತನ್ನ ಮನೆಯೊಳಗಡೆ ಪ್ರಾಣಬಿಟ್ಟ ಗೆಳೆಯ; ಫಸ್ಟ್‌ ರಿಯಾಕ್ಷನ್ ಕೊಟ್ಟ ಕೃಷಿ ತಾಪಂಡ