* ಸಾಯಿ ಧರಮ್ ತೇಜ್ ಬಗ್ಗೆ ಆಘಾತಕಾರಿ ವಿಚಾರ ಬಿಚ್ಚಿಟ್ಟ ಪವನ್ ಕಲ್ಯಾಣ್
* 16 ದಿನವಾದ್ರು ಸಾಯಿ ಇನ್ನೂ ಕೋಮಾದಲ್ಲಿದ್ದಾನೆ ಎಂದ ಪವನ್ ಕಲ್ಯಾಣ್
* ಸೆಪ್ಟೆಂಬರ್ 10ರಂದು ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಸಾಯಿ ಧರಮ್ ತೇಜ್
* ಸಾಯಿ ಧರಮ್ ತೇಜ್ ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ಸಹೋದರಿಯ ಪುತ್ರ
ಹೈದರಾಬಾದ್(ಸೆ. 26) ಅಪಘಾತದಲ್ಲಿ ಗಾಯಗೊಂಡಿದ್ದ ತೆಲುಗು ನಟ ಸಾಯಿ ಧರಮ್ ತೇಜ್ ಇನ್ನು ಕೋಮಾದಲ್ಲೇ ಇದ್ದಾರೆ ಎಂದು ಪವನ್ ಕಲ್ಯಾಣ್ ಆತಂಕಕಾರಿ ವಿಚಾರ ಬಿಚ್ಚಿಟ್ಟಿದ್ದಾರೆ.
16 ದಿನವಾದ್ರು ಸಾಯಿ ಇನ್ನೂ ಕೋಮಾದಲ್ಲಿದ್ದಾನೆ ಎಂದು ಪವನ್ ಕಲ್ಯಾಣ್ ತಿಳಿಸಿದ್ದಾರೆ. ಸೆಪ್ಟೆಂಬರ್ 10ರಂದು ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಸಾಯಿ ಧರಮ್ ತೇಜ್ ರಲ್ಲಿ ಚೇತರಿಕೆ ಕಂಡು ಬಂದಿಲ್ಲ.
ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ನಟ ಕೋಮಾದಲ್ಲಿ
ಸಾಯಿ ಧರಮ್ ತೇಜ್ ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ಸಹೋದರಿಯ ಪುತ್ರರಾಗಿದ್ದು ಟಾಲಿವುಡ್ ನಲ್ಲಿ ಹೆಸರು ಮಾಡುತ್ತಿರುವ ನಟ. ನಟ ಸಾಯಿ ಧರಮ್ ತೇಜ್ ಅಭಿನಯದ ರಿಪಬ್ಲಿಕ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ರಿಪಬ್ಲಿಕ್ ಚಿತ್ರದ ಪ್ರೀ-ರಿಲೀಸ್ ಈವೆಂಟ್‌ಗೆ ಪವನ್ ಕಲ್ಯಾಣ್ ಭಾಗಿಯಾಗಿದ್ದರು. ಇದೇ ಸಮಾರಂಭದಲ್ಲಿ ಸಾಯಿ ಧರಮ್ ತೇಜ್ ಅವರ ಆರೋಗ್ಯದ ಬಗ್ಗೆ ಪವನ್ ಕಲ್ಯಾಣ್ ಮಾತನಾಡಿದ್ದಾರೆ. ರಿಪಬ್ಲಿಕ್ ದೇವಕಟ್ಟ ನಿರ್ದೇಶನನದಲ್ಲಿ ಮೂಡಿ ಬಂದಿರುವ ಸಿನಿಮಾ.