ದೇಶದಲ್ಲೇ ಅತೀ ಹೆಚ್ಚು ಸಂಭಾವನೆ ಪಡಿಯುವ ಸಿರೀಯಲ್ ನಟಿ ಇವರು

Published : Jun 16, 2023, 10:39 AM IST
 ದೇಶದಲ್ಲೇ ಅತೀ ಹೆಚ್ಚು ಸಂಭಾವನೆ ಪಡಿಯುವ ಸಿರೀಯಲ್ ನಟಿ ಇವರು

ಸಾರಾಂಶ

ಹಿಂದಿಯ ಖ್ಯಾತ ಧಾರಾವಾಹಿ ಅನುಪಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ನಟಿ ರೂಪಾಲಿ ಗಂಗೂಲಿ (46) ಧಾರಾವಾಹಿಯ ಒಂದು ಸಂಚಿಕೆಗೆ ಬರೋಬ್ಬರಿ 30 ಲಕ್ಷ ರು. ಸಂಭಾವನೆ ಪಡೆಯುತ್ತಿದ್ದು ಈ ಮೂಲಕ ಇವರು ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಧಾರಾವಾಹಿ ನಟಿಯಾಗಿದ್ದಾರೆ ಎಂಬ ಹುಬ್ಬೇರಿಸುವ ಸಂಗತಿ ತಿಳಿದು ಬಂದಿದೆ.

ನವದೆಹಲಿ: ಹಿಂದಿಯ ಖ್ಯಾತ ಧಾರಾವಾಹಿ ಅನುಪಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ನಟಿ ರೂಪಾಲಿ ಗಂಗೂಲಿ (46) ಧಾರಾವಾಹಿಯ ಒಂದು ಸಂಚಿಕೆಗೆ ಬರೋಬ್ಬರಿ 30 ಲಕ್ಷ ರು. ಸಂಭಾವನೆ ಪಡೆಯುತ್ತಿದ್ದು ಈ ಮೂಲಕ ಇವರು ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಧಾರಾವಾಹಿ ನಟಿಯಾಗಿದ್ದಾರೆ ಎಂಬ ಹುಬ್ಬೇರಿಸುವ ಸಂಗತಿ ತಿಳಿದು ಬಂದಿದೆ. ಚಿತ್ರ ನಿರ್ದೇಶಕ ಅನೀಲ್‌ ಗಂಗೂಲಿ ಪುತ್ರಿಯಾಗಿರುವ ರೂಪಾಲಿ ಇವರು ಬಾಲನಟಿಯಾಗಿ ವೃತ್ತಿಗೆ ಪಾದಾರ್ಪಣೆ ಮಾಡಿದ್ದರು. ಈ ಹಿಂದೆ ನಟ ಸಲ್ಮಾನ್‌ ಖಾನ್‌ ಹಿಂದಿ ಬಿಗ್‌ ಬಾಸ್‌ ಸೀಸನ್‌ 16ಕ್ಕೆ 1,000 ಕೋಟಿ ರು. ಸಂಭಾವನೆ ಪಡೆದಿದ್ದರು ಎನ್ನಲಾಗಿದೆ.

ಹಿಂದಿ ಕಿರುತೆರೆಯ ಅತ್ಯಂತ ಜನಪ್ರಿಯ ಧಾರಾವಾಹಿ ಅನುಪಮಾದಲ್ಲಿ (Anupamaa) ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ರೂಪಾಲಿ (Rupali Ganguly) ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಅವರು ಜನಿಸಿದ್ದು ಕೋಲ್ಕತ್ತಾದಲ್ಲಿ. 5 ಏಪ್ರಿಲ್ 1977 ರಂದು  ಜನಿಸಿದ ರೂಪಾಲಿ 7 ವರ್ಷದವರಿದ್ದಾಗ  ನಟನಾ ಜಗತ್ತಿಗೆ ಪ್ರವೇಶಿಸಿದ್ದರು. ಆಕೆ ಮೊದಲು ಕಾಣಿಸಿಕೊಂಡಿದ್ದು ಅನಿಲ್ ಕಪೂರ್ ಮತ್ತು ಅಮೃತಾ ಸಿಂಗ್ ಅವರ ಸಾಹೇಬ್ ಚಿತ್ರದಲ್ಲಿ. ರೂಪಾಲಿ ಅವರ ತಂದೆ ಈ ಚಿತ್ರದ ನಿರ್ದೇಶಕರಾಗಿದ್ದರು. ರೂಪಾಲಿ ತನ್ನ ವೃತ್ತಿಜೀವನದಲ್ಲಿ ಅನೇಕ ಪ್ರಸಿದ್ಧ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಮದುವೆಯಾದ ನಂತರ ನಟನಾ ಲೋಕದಿಂದ ಕೊಂಚ ವಿರಾಮ ತೆಗೆದುಕೊಂಡಿದ್ದರು. ಅವರು ಉದ್ಯಮಿ ಅಶ್ವಿನ್ ವರ್ಮಾ ಅವರನ್ನು 10 ವರ್ಷಗಳ ಹಿಂದೆ ಮದುವೆಯಾಗಿದ್ದರು. 

ಮಕ್ಕಳನ್ನು ಬಿಟ್ಟು ಹೋಗುವಾಗೋ ಆಗೋ ನೋವು ಅಷ್ಟಿಷ್ಟಲ್ಲ: ನಟಿ Roopali Ganguly

ತಮ್ಮ ಮದುವೆಗೆ 12 ವರ್ಷಗಳ ಮೊದಲೇ ಉದ್ಯಮಿ ಅಶ್ವಿನ್ ವರ್ಮಾ  (Ashwin Verma) ಹಾಗೂ ರೂಪಾ ಗಂಗೂಲಿ (Rupa Ganguli) ಪರಸ್ಪರ ಪರಿಚಯಸ್ಥರಾಗಿದ್ದರು. ಇಬ್ಬರ ನಡುವೆ ಪ್ರೀತಿಯಿಲ್ಲದಿದ್ದರೂ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ನಮ್ಮ ನಡುವೆ ಸಾಕಷ್ಟು ಅಂಡರ್‌ಸ್ಟಾಂಡಿಗ್‌ ಇತ್ತು, ಹಾಗಾಗಿ ನಾವು ಒಬ್ಬರನ್ನೊಬ್ಬರು ಪ್ರಪೋಸ್‌ ಮಾಡಲಿಲ್ಲ. ಒಂದು ದಿನ ಮದುವೆಯಾಗಲು ನಿರ್ಧರಿಸಿದೆ ಎಂದು ಅಶ್ವಿನ್ ಜೊತೆಗಿನ ಸಂಬಂಧದ ಬಗ್ಗೆ ರೂಪಾಲಿ ಹೇಳಿದ್ದರು.

ಮದುವೆಯ ನಂತರ ಗರ್ಭಿಣಿಯಾಗಲು (Pregnancy) ರೂಪಾಲಿ ಗಂಗೂಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ಅವರಿಗೆ ಥೈರಾಯ್ಡ್ ಸಮಸ್ಯೆ ಇತ್ತು, ಇದರಿಂದಾಗಿ ಅವರು ಗರ್ಭಿಣಿಯಾಗಲು ಸಾಧ್ಯವಾಗಲಿಲ್ಲ. ಮತ್ತು ಈ ವಿಷಯದ ಬಗ್ಗೆ ಅವರು ಬಹಳ ಚಿಂತೆ ಮಾಡುತ್ತಿದ್ದರು. ಆದರೆ, ವೈದ್ಯರ ಸಲಹೆಯನ್ನು ಪಾಲಿಸಿ ತುಂಬಾ ಕಷ್ಟದಲ್ಲಿ ಗರ್ಭಿಣಿಯಾದೆ ಎಂದು ರೂಪಾಲಿ ಗಂಗೂಲಿ ಹೇಳಿಕೊಂಡಿದ್ದರು ಮದುವೆಯಾದ ಸುಮಾರು 2-3 ವರ್ಷಗಳ ನಂತರ ಅವಳು ರುದ್ರಾಂಶ್ ಎಂಬ ಮಗನಿಗೆ ಜನ್ಮ ನೀಡಿದ್ದರು. 

ಅನುಪಮ ಧಾರಾವಾಹಿಯ Rupali Ganguly ಜೀವನದ ಇಂಟರೆಸ್ಸಿಂಗ್‌ ಫ್ಯಾಕ್ಟ್ಸ್‌

ಮಗನ ಜನನದ ನಂತರ, ರೂಪಾಲಿ ಗಂಗೂಲಿ ನಟನೆಯಿಂದ ವಿರಾಮ ತೆಗೆದುಕೊಂಡು ತಮ್ಮ ಕುಟುಂಬಕ್ಕೆ ಆದ್ಯತೆ ನೀಡುತ್ತಾ, ಮಗನ ಪಾಲನೆಯಲ್ಲಿ ಸಮಯ ಕಳೆದಿದ್ದರು. ನಂತರ ಇದ್ದಕ್ಕಿದ್ದಂತೆ ಅನುಪಮಾ ಧಾರಾವಾಹಿಯ ಆಫರ್ ಬಂದಿದ್ದರಿಂದ ಆಕೆ ಮತ್ತೆ ಟಿವಿಗೆ ಬಂದರು. ಮೇರಾ ಯಾರ್ ಮೇರಾ ದುಷ್ಮನ್ ಚಿತ್ರದಲ್ಲಿ ರೂಪಾಲಿ ಗಂಗೂಲಿ ಬಾಲ ಕಲಾವಿದೆಯಾಗಿ ಕೆಲಸ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Salman Khan: 'ಸರ್ಕಾರದ ಕಡೆಯಿಂದ ಯಾವುದೇ ಒತ್ತಡ ಬಂದಿಲ್ಲ; 'ಮಾತೃಭೂಮಿ' ಸಿನಿಮಾ ಚೀನಾ ವಿರೋಧಿ ಅಲ್ಲ!
ಎರಡೇ ದಿನದಲ್ಲಿ 220 ಕೋಟಿ ಬಾಚಿದ ರಾಮಾಯಣ! ಅನಿಮಲ್‌ ರೆಕಾರ್ಡ್‌ ಬ್ರೇಕ್‌, RRR, ಬಾಹುಬಲಿ ಎಷ್ಟು ಗಳಿಸಿದ್ದವು?