
ಮುಂಬೈ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ವಿವಾಹವಾಗುತ್ತಿದ್ದಾರೆ ಎಂಬ ವದಂತಿಗಳಿಗೆ ಮತ್ತೆ ರೆಕ್ಕೆಪುಕ್ಕ ಬಂದಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ ಅವಾರ್ಡ್ 2025ರ ವೇಳೆ ರಶ್ಮಿಕಾ ಮಂದಣ್ಣ ಕಾರ್‌ನಲ್ಲಿ ಕುಳಿತು ಅಭಿಮಾನಿಗಳತ್ತ ಕೈಬೀಸಿದ್ದಾರೆ. ಈ ವೇಳೆ ಅವರು ತೊಟ್ಟಿದ್ದ ವಜ್ರದ ಉಂಗುರ ಗಮನ ಸೆಳೆದಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮತ್ತು ದೇವರಕೊಂಡ ಹಲವೆಡೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಪ್ರೀತಿಯಲ್ಲಿದ್ದಾರೆ ಎಂಬ ಗುಸುಗುಸು ಇದೆ.
ರಶ್ಮಿಕಾ-ವಿಜಯ್ ಹೊಸ ಸ್ಟೋರಿ ಶುರು
ರಶ್ಮಿಕಾ ಮಂದಣ್ಣ (Rashmika Mandanna) ವಿಜಯ್ ದೇವರಕೊಂಡ (Vijay Deverakonda) .. ಇವರಿಬ್ಬರನ್ನ ಈ ದಶಕದ ಬೆಸ್ಟ್ ಪೇರ್ ಅಂತ ಎಲ್ಲರು ಕರೀತಾರೆ. ರಿಯಲ್ ಲೈಫ್ನಲ್ಲೂ ಈ ಜೋಡಿ ಬೆಸ್ಟ್ ಲವರ್ಸ್ ಅನ್ನೋದೇನು ಗುಟ್ಟಾಗೇನು ಉಳಿದಿಲ್ಲ. ಕುದ್ದು ಮುಚ್ಚಿ ಸುತ್ತಾಟ ವಾಡಿದ್ದು ಜಗತ್ ಜಾಹೀರಾತಾಗಿದೆ. ಈಗ ಈ ಗೀತಾ ಗೋವಿಂದನ ಮತ್ತೊಂದು ಕಹಾನಿ ಟಾಲಿವುಡ್ ತುಂಬೆಲ್ಲಾ ಹರಿದಾಡ್ತಿದೆ.. ಅದೇನು ಅಂತ ನೋಡೋಣ ಬನ್ನಿ...
ಟಾಲಿವುಡ್ ಆವರಿಸಿದೆ ರಶ್ಮಿಕಾ-ವಿಜಯ್ ಮತ್ತೊಂದು ಕಹಾನಿ; ಮತ್ತೆ ಜೊತೆ ಆಗುತ್ತಿದ್ದಾರೆ ಗೀತಾ ಗೋವಿಂದ ಪ್ರೇಮಿಗಳು..!
ಈಗ ಪ್ರೇಮಿಗಳಿಗೆ ರೋಲ್ ಮಾಡೆಲ್ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ.. ಇವರಿಬ್ಬರು ನಮ್ಮ ಮಧ್ಯೆ ಏನು ಇಲ್ಲ ಎಲ್ಲಾ ಸ್ನೇಹ ಎನ್ನುತ್ತಲೇ. ಪ್ರೇಮಿಗಳ ಹಾಗೆ ಅಲ್ಲಲ್ಲಿ ಮರ ಸುತ್ತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಇವರಿಬ್ಬರದ್ದು ಪ್ರ್ಯೂರ್ ಲವ್ ಅನ್ನೋದು ಜಗತ್ತಿಗೇ ಗೊತ್ತಾಗಿದೆ.
ರಶ್ಮಿಕಾ ಮನೆ ಸೊಸೆಯಂತೆ ವಿಜಯ್ ದೇವರಕೊಂಡ ಮನೆಯಲ್ಲೇ ಹೆಚ್ಚು ಕಾಣಿಸ್ತಾರೆ. ಹೈದರಾಬಾದ್, ಮುಂಬೈ ಬೀದಿಗಳಲ್ಲಿ ಏರ್ ಪೋರ್ಟ್ನಲ್ಲಿ, ವಿದೇಶದಲ್ಲಿ ಇಬ್ಬರು ಒಂದೇ ಜಾಗದಲ್ಲಿದ್ದದ್ದು ಎಲ್ಲರಿಗೂ ಗೊತ್ತಿದೆ. ಈ ಈ ಜೋಡಿ ಬಗ್ಗೆ ಮತ್ತೊಂದು ಕತೆ ತೆಲುಗು ಚಿತ್ರರಂಗದಲ್ಲಿ ಹುಟ್ಟಿಕೊಂಡಿದೆ. ರಶ್ಮಿಕಾ ವಿಜಯ್ ದೇವರಕೊಂಡ ಮತ್ತೆ ಒಂದಾಗಿ ಸಿನಿಮಾ ಮಾಡುತ್ತಿದ್ದಾರೆ.
ವಿಜಯ್ ಸಕ್ಸಸ್ಗಾಗಿ ಮತ್ತೆ ಬಂದ ರಶ್ಮಿಕಾ ಮಂದಣ್ಣ..!
ವಿಜಯ್ ದೇವರಕೊಂಡ ಗೀತಾ ಗೋವಿಂದ ಸಿನಿಮಾ ಆದ ಮೇಲೆ ದೊಡ್ಡ ಹಿಟ್ ಸಿನಿಮಾ ಕೊಟ್ಟೇ ಇಲ್ಲ. ಡಿಯರ್ ಕಾಂಬ್ರೆಡ್ ಸಿನಿಮಾದಲ್ಲಿ ಮತ್ತೆ ಜೊತೆಯಾಗಿದ್ದ ಈ ಜೋಡಿಗೆ ದೊಡ್ಡ ಸಕ್ಸಸ್ ಏನೂ ಸಿಕ್ಕಿಲ್ಲ. ವಿಜಯ್ ನಿರೀಕ್ಷೆ ಇಟ್ಟಿದ್ದ ಸಿನಿಮಾಗಳೆಲ್ಲಾ ಮಕಾಡೆ ಮಾಲಗಿವೆ. ಈಗ ಸೋತು ಸುಣ್ಣವಾಗಿರೋ ಗೆಳಯನಿಗೆ ಗೆಲುವಿನ ಹಾರ ಹಾಕಿಸೋಕೆ ಗೆಳತಿ ರಶ್ಮಿಕಾ ಮಂದಣ್ಣ ರೆಡಿಯಾಗಿದ್ದಾರೆ. ಮೂರನೇ ಭಾರಿ ಇವರಿಬ್ಬರ ಕಾಂಬಿನೇಷನ್ನಲ್ಲಿ ಸಿನಿಮಾ ಒಂದು ಸಿದ್ಧವಾಗುತ್ತಿದೆ.
ಐತಿಹಾಸಿಕ ಸಿನಿಮಾದಲ್ಲಿ ರಶ್ಮಿಕಾ-ವಿಜಯ್ ನಟನೆ..?
ಯೆಸ್, ಈ ಜಗತ್ ವಿಖ್ಯಾತ ಜೋಡಿ ಈ ಭಾರಿ ಜೊತೆ ಆಗುತ್ತಿರೋದು ಐತಿಹಾಸಿಕ ಸಿನಿಮಾದಲ್ಲಿ. 1800ರ ದಶಕದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ನಡೆದ ಕಥೆಯಲ್ಲಿ ರಶ್ಮಿಕಾ ವಿಜಯ್ ಆರು ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ. ರಾಹುಲ್ ಸಂಕೃತ್ಯನ್ ನಿರ್ದೇಶನದಲ್ಲಿ ಈ ಐತಿಹಾಸಿಕ ಸಿನಿಮಾ ಮೂಡಿ ಬರಲಿದೆ. ಈಗಾಗ್ಲೆ ರೀಲ್ ಹಾಗು ರೀಯಲ್ನಲ್ಲಿ ಇವರಿಬ್ಬರ ಕೆಮಿಸ್ಟ್ರಿ ನೋಡಿರೋ ಜನ ಈಗ ಹಿಸ್ಟಾರಿಕಲ್ ಸಿನಿಮಾದಲ್ಲಿ ನೋಡಿ ಏನ್ ಹೇಳ್ತಾರೋ ಕಾದು ನೋಡ್ಬೇಕಿದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.