
ಪ್ರೀತಿಸಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ತಮಿಳು ನಟ ವಿಶಾಲ್ ಹಾಗೂ ಅನಿಶಾ ಅಕ್ಟೋಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದರು. ಇದೀಗ ಅವರಿಬ್ಬರ ನಡುವೆ ಮನಸ್ತಾಪ ಬಂದು ಮದುವೆ ಮುರಿದು ಬಿದ್ದಿರುವುದಾಗಿ ಸುದ್ದಿ ಹರಿದಾಡುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿ ಪ್ರೀತಿ ವಿಚಾರವನ್ನು ಮೊದಲು ಬಹಿರಂಗಪಡಿಸಿದ ಅನಿಶಾ ಈಗ ತಮ್ಮ ನಿಶ್ಚಿತಾರ್ಥದ ಫೋಟೋವನ್ನು ಡಿಲೀಟ್ ಮಾಡಿದ್ದಾರೆ. ಇದನ್ನು ಗಮನಿಸಿದ ಅಭಿಮಾನಿಗಳು ಮದುವೆ ಮುರಿದು ಬಿದ್ದಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ನಿಶ್ಚಿತಾರ್ಥದ ನಂತರ ಕೈ-ಕಾಲು ಮುರಿದುಕೊಂಡ ಖ್ಯಾತ ನಟ!
ಇನ್ನು ನಿಶ್ಚಿತಾರ್ಥ ಮಾಡಿಕೊಂಡು ಕೆಲ ದಿನಗಳಲ್ಲಿ ಶೂಟಿಂಗ್ ಆರಂಭಿಸಿದ ವಿಶಾಲ್ ಸಾಹಸ ದೃಶ್ಯ ಮಾಡಲು ಹೋಗಿ ಕೈ-ಕಾಲು ಪೆಟ್ಟು ಮಾಡಿಕೊಂಡಿದ್ದರು.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.