ಯಶ್ ಕುರಿತ ಹೇಳಿಕೆಗೆ ನಟಿ ರಶ್ಮಿಕಾ ಕ್ಷಮೆಯಾಚನೆ: ಯಶ್ ಅಭಿಮಾನಿಗಳ ಟ್ರಾಲ್' ಗೆ ರಶ್ಮಿಕಾ ಸುಸ್ತು

Published : Jun 27, 2017, 11:14 AM ISTUpdated : Apr 11, 2018, 12:56 PM IST
ಯಶ್ ಕುರಿತ ಹೇಳಿಕೆಗೆ ನಟಿ ರಶ್ಮಿಕಾ ಕ್ಷಮೆಯಾಚನೆ: ಯಶ್ ಅಭಿಮಾನಿಗಳ ಟ್ರಾಲ್' ಗೆ ರಶ್ಮಿಕಾ ಸುಸ್ತು

ಸಾರಾಂಶ

ಖಾಸಗಿ ಮನರಂಜನಾ ವಾಹಿನಿಯೊಂದರ ರಿಯಾಲಿಟಿ ಶೋನಲ್ಲಿ ನಟ ರಾಕಿಂಗ್‌ ಸ್ಟಾರ್‌ ಯಶ್‌ ಕುರಿತು ನೀಡಿದ್ದಾರೆನ್ನಲಾದ ಹೇಳಿಕೆಗೆ ‘ಕಿರಿಕ್‌ ಪಾರ್ಟಿ'ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಕ್ಷಮೆ ಯಾಚಿಸಿದ್ದಾರೆ. ಆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೊತ್ತಿ ಉರಿದ ನಟ ಯಶ್‌ ಅಭಿಮಾನಿಗಳ ಆಕ್ರೋಶ ತಣ್ಣಗಾಗಿದೆ. 

ಖಾಸಗಿ ಮನರಂಜನಾ ವಾಹಿನಿಯೊಂದರ ರಿಯಾಲಿಟಿ ಶೋನಲ್ಲಿ ನಟ ರಾಕಿಂಗ್‌ ಸ್ಟಾರ್‌ ಯಶ್‌ ಕುರಿತು ನೀಡಿದ್ದಾರೆನ್ನಲಾದ ಹೇಳಿಕೆಗೆ ‘ಕಿರಿಕ್‌ ಪಾರ್ಟಿ'ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಕ್ಷಮೆ ಯಾಚಿಸಿದ್ದಾರೆ. ಆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೊತ್ತಿ ಉರಿದ ನಟ ಯಶ್‌ ಅಭಿಮಾನಿಗಳ ಆಕ್ರೋಶ ತಣ್ಣಗಾಗಿದೆ. 

ಹಲವು ತಿಂಗಳ ಹಿಂದೆ ಪ್ರಸಾರವಾದ ‘ಮಾತುಕತೆ ವಿನಯ್‌ ಜೊತೆ' ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ರಕ್ಷಿತ್‌ ಶೆಟ್ಟಿಭಾಗವಹಿಸಿದ್ದರು. ಅಲ್ಲಿ ಮಾತನಾಡುವಾಗ ‘ಮಿಸ್ಟರ್‌ ಶೋ ಆಫ್‌ ನಟ' ಟೈಟಲ್‌ ಯಾರಿಗೆ ನೀಡಲು ಬಯಸುತ್ತೀರಾ ಎನ್ನುವ ನಿರೂಪಕನ ಪ್ರಶ್ನೆಗೆ ರಶ್ಮಿಕಾ ಮಂದಣ್ಣ ‘ರಾಕಿಂಗ್‌ ಸ್ಟಾರ್‌ ಯಶ್‌' ಎಂದು ಹೇಳಿದ್ದರು. ಆಗ ಏನೂ ಆಗಿರಲಿಲ್ಲ. ಆದರೆ, ಮೊನ್ನೆ ಈ ಶೋ ಮರು ಪ್ರಸಾರವಾದ ನಂತರ ರಶ್ಮಿಕಾ ಉತ್ತರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಯಿತು. ಅದು ಯಶ್‌ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿ, ದೊಡ್ಡ ವಿವಾದ ಸೃಷ್ಟಿಸಿತು. ಸೋಷಿಯಲ್‌ ಮೀಡಿಯಾದಲ್ಲಿ ರಶ್ಮಿಕಾ ಮೇಲೆ ಟ್ರಾಲ್‌ ಶುರುವಾಯಿತು. ರಶ್ಮಿಕಾ ಫೇಸ್‌ಬುಕ್‌ ರೇಟಿಂಗ್‌ ಗಣನೀಯವಾಗಿ ಕುಸಿಯಿತು. ಕ್ಷಮೆ ಕೇಳುವಂತೆ ಯಶ್‌ ಅಭಿಮಾನಿಗಳು ಒತ್ತಾಯಿಸಿದರು.

ರಶ್ಮಿಕಾ ಹೇಳಿಕೆಗೆ ಯಶ್‌ ಪ್ರತಿಕ್ರಿಯೆ:

ಇದಕ್ಕೆ ಸ್ವತಃ ನಟ ಯಶ್‌ ಸೋಮವಾರ ತಮ್ಮ ಫೇಸ್‌ಬುಕ್‌ನ ಅಕೌಂಟ್‌ನಲ್ಲಿ ಪ್ರತಿಕ್ರಿಯೆ ನೀಡಿದರು.‘ ಒಬ್ಬ ನಟನಾಗಿ ನಿಮ್ಮೆಲ್ಲರ ಪ್ರೀತಿ ಮತ್ತು ಅಭಿಮಾನ ಸಂಪಾದನೆ ಗುರಿಯಾಗಿ ಟ್ಟುಕೊಂಡು ಕೆಲಸ ಮಾಡುವ ನಾನು, ಕೆಲವೊಮ್ಮೆ ಎದುರಾಗುವ ಅನಗತ್ಯ ವಿಷಯಗಳನ್ನು ನಿರ್ಲಕ್ಷಿಸುವ ಸ್ವಭಾವ ರೂಢಿಸಿಕೊಂಡಿದ್ದೇನೆ. ಆದರೆ ನನ್ನನ್ನು ಪ್ರೀತಿಸುವ ನಿಮ್ಮ ಮನಸ್ಸಿಗೆ ನೋವಾದಾಗ ಪ್ರತಿಕ್ರಿಯೆ ನೀಡದೆ ಇರುವುದು ನನ್ನಿಂದ ಸಾಧ್ಯವಿಲ್ಲ. ನಿಮ್ಮ ಅಭಿಮಾನ ಪ್ರೀತಿಗೆ ಬೆಲೆಕಟ್ಟಲಾಗುವುದಿಲ್ಲ, ಅದಕ್ಕೆ ನಾನೆಂದಿಗೂ ಚಿರಋುಣಿ. ರಶ್ಮಿಕಾ ಅವರು ವೈಯಕ್ತಿಕವಾಗಿ ನನಗೆ ಪರಿಚಿತವಿಲ್ಲ. ಇದುವರೆಗೂ ಭೇಟಿ ಮಾಡಿಲ್ಲ. ಮಾತು ಸಹ ಆಡಿಲ್ಲ. ಹಾಗೆಂದು ಅವರಿಗೆ ನನ್ನ ಬಗ್ಗೆ ಯಾವುದೇ ರೀತಿಯ ಅಭಿಪ್ರಾಯ ಇರಬಾರದೆಂದೇನಿಲ್ಲ. ಅವರ ಅಭಿಪ್ರಾಯ ಅವರದು. ಅದನ್ನು ಹೀಗಳೆಯುವ ಕೆಲಸ ಯಾರೂ ಮಾಡಬಾರದು. ಎಲ್ಲರ ಅಭಿಪ್ರಾಯವನ್ನು ಗೌರವಿಸೋಣ. ಒಬ್ಬರ ಅಭಿಪ್ರಾಯ ಇನ್ನೊಬ್ಬರ ವ್ಯಕ್ತಿತ್ವ ಇಲ್ಲಿಗೇ ಬಿಟ್ಟುಬಿಡಿ. ಇಲ್ಲಿ ಚರ್ಚಿಸುವಂಥದ್ದು ಏನೂ ಇಲ್ಲ! ಕೆಲವೇ ದಿನಗಳಲ್ಲಿ ‘ ಕೆಜಿಎಫ್‌' ಮತ್ತೊಂದು ಸ್ಟಿಲ… ಬರಲಿದೆ. ಅಲ್ಲಿಯವರೆಗೆ ಈದ್‌ ಮುಬಾರಕ್‌' ಎಂದಿದ್ದರು.

ಕ್ಷಮೆ ಕೇಳಿದರು ರಶ್ಮಿಕಾ:

ನಂತರ ಸೋಮವಾರ ತಮ್ಮ ಫೇಸ್‌ಬುಕ್‌ ಅಕೌಂಟ್‌ನಲ್ಲಿ ಸ್ಪಷ್ಟನೆ ನೀಡಿದ ರಶ್ಮಿಕಾ, ‘ಈ ಕಾರ್ಯಕ್ರಮ ಪ್ರಸಾರವಾಗಿದ್ದು 7 ತಿಂಗಳ ಹಿಂದೆ. ‘ ಕಿರಿಕ್‌ ಪಾರ್ಟಿ' ಚಿತ್ರದ ಬಿಡುಗಡೆ ಸಂದರ್ಭದಲ್ಲಿ. ಆ ದಿನ ನಾನು ಸಾಕಷ್ಟುಮಾತನಾಡಿದ್ದೇನೆ. ನಟ ಯಶ್‌ ಅವರ ‘ ಸಂತು ಸ್ಟೆ್ರೖಟ್‌ ಫಾರ್ವರ್ಡ್‌' ಚಿತ್ರ ಮೆಚ್ಚಿ ಮಾತನಾಡಿದ್ದೇನೆ. ಅವರು ನನ್ನ ನೆಚ್ಚಿನ ನಟ ಅಂತಲೂ ಹೇಳಿದ್ದೇನೆ. ಕೆಲವರು ಇದ್ಯಾವು ದನ್ನೂ ಪರಿಗಣಿಸದೆ, ನಾನು ಆಡಿದ ಒಂದು ಮಾತನ್ನು ತೆಗೆದುಕೊಂಡು ವಿವಾದ ಎಬ್ಬಿಸಿದ್ದು ನೋವು ತಂದಿದೆ. ಯಶ್‌ಗೆ ನೋವಾಗಿದ್ರೆ ಕ್ಷಮೆ ಕೇಳುವೆ ಎಂದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಈ ವಾರ ಮಾತ್ರ ಕಿಚ್ಚ ಸುದೀಪ್‌ ಈ ವಿಷ್ಯ ಮಾತಾಡ್ಬೇಕು; ಇಲ್ಲ ಅಂದ್ರೆ ಸಮಸ್ಯೆ ತಪ್ಪಿದ್ದಲ್ಲ!
ಡಾ ರಾಜ್‌ಕುಮಾರ್‌, ಸರಿತಾ ಯುಗವನ್ನು ನೆನಪಿಸಿದ ಶಿವರಾಜ್‌ಕುಮಾರ್‌, ಸರಿತಾ! ವೀಕ್ಷಕರಿಂದ ಮೆಚ್ಚುಗೆ