
ನಟಿ ರಮ್ಯಾ ಸಿನಿಮಾ ಮಾಡಿ ಬಹಳ ದಿನಗಳೇ ಆಯ್ತು. ನಾಗರಹಾವು ಸಿನಿಮಾ ನಂತ್ರ ಅವ್ರ ಯಾವ ಸಿನಿಮಾನು ರಿಲೀಸ್ ಆಗಿಲ್ಲ. ಸಿನಿಮಾ ಮಾಡೋದು ಇಲ್ಲ ಅಂತ ಹೇಳಾಯ್ತು. ಆದ್ರೂ ಸ್ಯಾಂಡಲ್ವುಡ್ನಲ್ಲಿ ರಮ್ಯಾನೆ ನಂ.1 . ಹೇಗೆ ಅಂತೀರಾ ?
ಸಿನಿಮಾ ಮಾಡ್ದೆ ಸ್ಪರ್ದೆಯಲ್ಲೆ ಇಲ್ಲದೆ ಅದು ಹೇಗೆ ರಮ್ಯಾ ಈಗಲೂ ನಂ.1 ಆಗೋಕೆ ಸಾದ್ಯ ಮಾರಾಯ್ರೆ ಅನ್ನೊದು ನಿಮ್ಮ ಪ್ರಶ್ನೆ. ಆದ್ರೆ ಇದು ನಿಜ ನೋಡಿ ರಮ್ಯ ಸಿನಿಮಾ ಬೇಡ ಎಂದು ರಾಜಕೀಯದಲ್ಲಿ ಬಹಳ ಬಿಜಿಯಾಗಿದ್ದಾರೆ. ಆದರೂ ಇಲ್ಲೊಂದು ಹೊಸ ದಾಖಲೆ ಮಾಡೊ ಮೂಲಕ ರಮ್ಯಾ ಮತ್ತೆ ನಂ.1 ನಟಿ ಆಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ರಮ್ಯಾನೆ ನಂ.1
ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ನಂ.1 ಸ್ಥಾನದಲ್ಲಿದ್ದಾರೆ. ಟ್ಟಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಸದಾ ಆಕ್ಟೀವ್ ಆಗಿರೋ ರಮ್ಯಾ, ಫೇಸ್ ಬುಕ್'ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಕನ್ನಡದ ಏಕೈಕ ನಟಿ ಅಂತಾ ಕರೆಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 10 ವರ್ಷ ಸ್ಯಾಂಡಲ್ ವುಡ್ ಕ್ವೀನ್ ಆಗಿ ಮೆರೆದ ರಮ್ಯಾ ರಾಜಕೀಯಕ್ಕೆ ಬಂದ ಮೇಲೆ ಮತ್ತಷ್ಟು ಅಭಿಮಾನಿ ಬಳಗ ಬೆಳೆದಿದೆ. ಅದಕ್ಕೆ ಸಾಕ್ಷಿ ಎಂಬಂತೆ ಫೇಸ್ ಬುಕ್ ನಲ್ಲಿ ರಮ್ಯಾಗೆ 1 ಮಿಲಿಯನ್ ಜನ ಪೋಲೋ ಮಾಡ್ತಾ ಇರೋದು. ಹಾಗೇ ರಮ್ಯಾ ಅಭಿಮಾನಿಗಳು ಕೇಳುವ ಪ್ರಶ್ನೆಗೆ ಉತ್ತರಿಸುವ ಮೂಲ್ಕ ಮತ್ತಷ್ಟು ಫ್ಯಾನ್ಸ್'ಗಳಿಗೆ ಹತ್ತಿರವಾಗಿದ್ದಾರೆ. ಹೀಗಾಗಿ ಸ್ಯಾಂಡಲ್ ವುಡ್ ನಟಿಮಣಿಯರ ಸಾಲಿನಲ್ಲಿ ರಮ್ಯಾ ಅತೀ ಹೆಚ್ಚು ಪಾಲೋವರ್ಸ್ ಹೊಂದಿರುವ ನಂ.1ನಟಿಯಾಗಿ ಹೊರಹೊಮ್ಮಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.