ಒಂದು ಕಾಲದಲ್ಲಿ ಕೆಲಸವೂ ಇರಲಿಲ್ಲ, ಕೈಯಲ್ಲಿ ಹಣವೂ ಇರಲಿಲ್ಲ, ಈಗ ₹270 ಕೋಟಿ ಹಿಟ್ ಸಿನಿಮಾ ನೀಡಿದ ನಟ ಯಾರು?

Published : Sep 15, 2026, 05:45 PM IST
Jitendra Kumar stars in Mirapur The Movie

ಸಾರಾಂಶ

ಐಐಟಿ ಪದವೀಧರ ಜಿತೇಂದ್ರ ಕುಮಾರ್, ನಟನೆಗಾಗಿ ಕಾರ್ಪೊರೇಟ್ ಉದ್ಯೋಗವನ್ನು ತೊರೆದರು. ಆರಂಭಿಕ ವೈಫಲ್ಯಗಳ ನಂತರ, TVF ವೆಬ್ ಸಿರೀಸ್‌ಗಳ ಮೂಲಕ 'ಜೀತು ಭಯ್ಯಾ' ಆಗಿ ಜನಪ್ರಿಯತೆ ಗಳಿಸಿ, ಇದೀಗ ₹270 ಕೋಟಿ ಗಳಿಸಿದ 'ಮಿರ್ಜಾಪುರ' ಸಿನಿಮಾದ ಭಾಗವಾಗಿದ್ದಾರೆ.

ಚಿತ್ರರಂಗದಲ್ಲಿ ನೆಪೋಟಿಸಂ ತುಂಬಾನೇ ಇದೆ. ಅದರಲ್ಲೂ ಬಾಲಿವುಡ್‌ನಲ್ಲಿ ಕೇಳೋದೇ ಬೇಡ. ಆದರೆ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ, ಪ್ರತಿಭೆ ಮತ್ತು ಪರಿಶ್ರಮದಿಂದಲೇ ಚಿತ್ರರಂಗದಲ್ಲಿ ಸ್ಥಾನ ಗಳಿಸಿದ ಹಲವು ನಟರಿದ್ದಾರೆ. ಅಂತವರ ಪೈಕಿ ಜಿತೇಂದ್ರ ಕುಮಾರ್ ಒಬ್ಬರು!

ಜೀತು ಭಯ್ಯಾ ಎಂದೇ ಪ್ರೇಕ್ಷಕರಿಗೆ ಪರಿಚಿತರಾಗಿರುವ ಜಿತೇಂದ್ರ ಕುಮಾರ್ ಇತ್ತೀಚೆಗೆ 'ಮಿರ್ಜಾಪುರ: ದಿ ಮೂವಿ'ಯಲ್ಲಿ ಬಬ್ಲು ಪಂಡಿತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಿತೇಂದ್ರ ಕುಮಾರ್, ನಟನೆಯ ಕ್ಷೇತ್ರಕ್ಕೆ ಬರುವ ಮೊದಲು ಐಐಟಿ ಖರಗ್‌ಪುರದಲ್ಲಿ ವಿದ್ಯಾಭ್ಯಾಸ ಮಾಡಿದರು. ಕಾಲೇಜು ಶಿಕ್ಷಣ ಮುಗಿಸಿದ ಬಳಿಕ ಕಾಪೊರೇಟ್‌ನಲ್ಲಿ ಒಳ್ಳೆಯ ಉದ್ಯೋಗವನ್ನೂ ಪಡೆದಿದ್ದರು. ಆದರೆ ನಟನೆಯಲ್ಲಿ ಗುರುತಿಸಿಕೊಳ್ಳಬೇಕು ಎಂಬ ಹಂಬಲ, ಕೈತುಂಬಾ ಸಂಬಳ ತಂದುಕೊಡುತ್ತಿದ್ದ ಕೆಲಸವನ್ನು ಬಿಟ್ಟರು.

ಐಐಟಿಯಲ್ಲಿ ಇದ್ದಾಗಲೇ ನಟನೆಯ ಮೇಲೆ ಆಸಕ್ತಿ

ಅಂದ್ಹಾಗೆ ಜಿತೇಂದ್ರ ಕುಮಾರ್ ರಾಜಸ್ಥಾನದ ಖೈರ್ತಲ್ ಎಂಬ ಸಣ್ಣ ಪಟ್ಟಣದವರು. ಓದಿನಲ್ಲಿ ಮುಂದಿದ್ದ ಕಾರಣ ಪೋಷಕರು ಐಐಟಿ ಕೋಚಿಂಗ್‌ಗಾಗಿ ಅವರನ್ನು ಕೋಟಾಗೆ ಕಳುಹಿಸಿದ್ದರು. ತಮ್ಮ ಶಾಲಾ ದಿನಗಳಲ್ಲೇ ನಾಟಕಗಳಲ್ಲಿ ಭಾಗವಹಿಸುತ್ತಿದ್ದ ಜಿತೇಂದ್ರಗೆ ಐಐಟಿ ಖರಗ್‌ಪುರಕ್ಕೆ ಸೇರಿದ ಬಳಿಕ ರಂಗಭೂಮಿಯ ಮೇಲಿನ ಆಸಕ್ತಿ ಮತ್ತಷ್ಟು ಗಟ್ಟಿಯಾಯಿತು. ಹಿಂದಿ ಟೆಕ್ನಾಲಜಿ ಡ್ರಾಮ್ಯಾಟಿಕ್ಸ್ ಸೊಸೈಟಿ ಜೊತೆ ಸೇರಿ ಸಕ್ರಿಯವಾಗಿ ಕೆಲಸ ಮಾಡತೊಡಗಿದರು.

ಈ ವೇಳೆ ಜಿತೇಂದ್ರ ಕುಮಾರ್‍‌ಗೆ ಬಿಸ್ವಪತಿ ಸರ್ಕಾರ್ ಪರಿಚಯವಾದರು. ನಂತರ ಅವರು ದಿ ವೈರಲ್ ಫೀವರ್‌ (TVF)ನ ಪ್ರಮುಖ ಕ್ರಿಯೇಟಿವ್ ವ್ಯಕ್ತಿಯಾಗಿ ಗುರುತಿಸಿಕೊಂಡರು. 2012ರಲ್ಲಿ ಬಿಸ್ವಪತಿ ಸರ್ಕಾರ್, ಜಿತೇಂದ್ರ ಅವರ ನಟನಾ ಪ್ರತಿಭೆಯನ್ನು ಗುರುತಿಸಿ TVFಗೆ ಸೇರಲು ಆಹ್ವಾನಿಸಿದರು. ಕಾಲೇಜು ಮುಗಿಸಿದ ಬಳಿಕ ಜಿತೇಂದ್ರ ಮುಂಬೈಗೆ ತೆರಳಿ TVFಗಾಗಿ ತಮ್ಮ ಮೊದಲ ವಿಡಿಯೋದಲ್ಲಿ ನಟಿಸಿದರು. ಆದರೆ ಇವರ ಆರಂಭ ಅಷ್ಟೊಂದು ಚೆನ್ನಾಗಿ ಇರಲಿಲ್ಲ. ಮೊದಲ ಬಾರಿಗೆ ಮಾಡಿದ್ದ ವಿಡಿಯೋ ಯೂಟ್ಯೂಬ್‌ನಲ್ಲಿ 10 ಸಾವಿರ ವೀಕ್ಷಣೆ ಕೂಡ ಪಡೆಯಲಿಲ್ಲ.

ಮುಂಬೈ ಬಿಟ್ಟು ಬೆಂಗಳೂರಿಗೆ ಬಂದರು..

TVFನಲ್ಲಿ ಆರಂಭಿಕ ದಿನಗಳಲ್ಲಿ ಜಿತೇಂದ್ರ ಹಲವು ಕಷ್ಟಗಳನ್ನು ಎದುರಿಸಿದರು. ಅಸಿಸ್ಟೆಂಟ್ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದ್ದರು. ಎರಡನೇ ವಿಡಿಯೋ ಕೂಡ ನಿರೀಕ್ಷಿತ ಮಟ್ಟದಲ್ಲಿ ಜನರನ್ನು ತಲುಪದಿದ್ದರಿಂದ ನಟನೆಯಿಂದಲೇ ದೂರವಾಗುವ ನಿರ್ಧಾರಕ್ಕೆ ಬಂದರು. ಕೊನೆಗೆ ಸ್ನೇಹಿತರ ಸಹಾಯ ಪಡೆದು ಬೆಂಗಳೂರಿಗೆ ಬಂದರು, ಸುಮಾರ ಒಂಬತ್ತು ತಿಂಗಳು ಕಾಲ ಕಾಪೊರೇಟ್ ಉದ್ಯೋಗ ಮಾಡಿದರು. ಆದರೆ ಕೆಲಸದಲ್ಲಿ ತೃಪ್ತಿ ಸಿಕ್ಕಿರಲಿಲ್ಲ.

ಹೀಗೆ ದಿನಗಳು ಉರುಳುತ್ತಿರುವಾಗ ಬಿಸ್ವಪತಿ ಸರ್ಕಾರ್ ಮತ್ತೆ ಜೀತೆಂದ್ರ ಕುಮಾರ್‍‌ಗೆ ಕರೆ ಮಾಡಿದರು. ನಂತರ ಅವರ ಬದುಕಿನ ದಿಕ್ಕೇ ಬದಲಾಗಿ ಹೋಯಿತು. Munna Jazbaati: The Q-tiya Intern ಎಂಬ ವಿಡಿಯೋ 2013ರಲ್ಲಿ ಭಾರೀ ಜನಪ್ರಿಯತೆ ಗಳಿಸಿತು. ವರದಿಗಳ ಪ್ರಕಾರ.. ಅದು 30 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆಯಿತು.

ವೆಬ್‌ ಸಿರೀಸ್‌ಗೆ ಎಂಟ್ರಿ

ಟಿವಿಎಫ್‌ನ ಹಲವು ಜನಪ್ರಿಯ ವಿಡಿಯೋಗಳು ಸ್ಕೆಚ್‌ಗಳಲ್ಲಿ ಕಾಣಿಸಿಕೊಂಡರು. Tech Conversations With Dad, A Day With ಮತ್ತು TVF Bachelors ಹಲವು ಕಾರ್ಯಕ್ರಮಗಳು ಅವರಿಗೆ ದೊಡ್ಡ ಮೊಟ್ಟದಲ್ಲಿ ಗುರುತನ್ನ ತಂದುಕೊಟ್ಟವು. ನಂತರ ವೆಬ್ ಸಿರೀಲ್‌ ಲೋಕಕ್ಕೂ ಕಾಲಿಟ್ಟರು. 20215ರಲ್ಲಿ ಬಂದ ‘TVF Pitchers ಜಿತೇಂದ್ರ ಅವರ ವೃತ್ತಿಜೀವನಕ್ಕೆ ಮತ್ತೊಂದು ದೊಡ್ಡ ತಿರುವು ನೀಡಿತು. ಜಿತೇಂದ್ರ ಜೀತು ಮಹೇಶ್ವರಿ ಪಾತ್ರದಲ್ಲಿ ಕಾಣಿಸಿಕೊಂಡರು. ಇದೇ ಪಾತ್ರದಿಂದ ಜೀತು ಎಂಬ ಹೆಸರು ಅವರೊಂದಿಗೆ ಗಟ್ಟಿಯಾಗಿ ಬೆಸೆದುಕೊಂಡಿತು. ನಂತರ ಕೋಟಾ ಫ್ಯಾಕ್ಟರಿ ಜಿತೇಂದ್ರ ಕುಮಾರ್ ಅವರ ವೃತ್ತಿಜೀವನದ ಮತ್ತೊಂದು ಮಹತ್ವದ ಮೈಲಿಗಲ್ಲು. ಇದರಲ್ಲಿ ಅವರು ಜೀತು ಭಯ್ಯಾ ಪಾತ್ರದಲ್ಲಿ ಕಾಣಿಸಿಕೊಂಡರು.ಅಲ್ಲಿಂದ ಅವರು ಜೀತು ಭಯ್ಯಾ ಆಗಿ ಗುರುತಿಸಿಕೊಂಡರು.

ಈಗ ₹270 ಕೋಟಿಗೂ ಹೆಚ್ಚು ಗಳಿಸಿದ ಸಿನಿಮಾದ ಭಾಗ

ಹಲವು ವರ್ಷಗಳ ಹೋರಾಟದ ಬಳಿಕ ಜಿತೇಂದ್ರ ಕುಮಾರ್ ಅವರಿಗೆ ದೊಡ್ಡ ಕಮರ್ಷಿಯಲ್ ಪ್ರಾಜೆಕ್ಟ್‌ನಲ್ಲಿ ಅವಕಾಶ ಸಿಕ್ಕಿದೆ. ಜನಪ್ರಿಯ ವೆಬ್ ಸೀರಿಸ್ ‘ಮಿರ್ಜಾಪುರ’ ಆಧಾರಿತ ‘ಮಿರ್ಜಾಪುರ: ದಿ ಮೂವಿ’ಯಲ್ಲಿ ಅವರು ಬಬ್ಲು ಪಂಡಿತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು ವಿಶ್ವಾದ್ಯಂತ ₹270 ಕೋಟಿಗೂ ಹೆಚ್ಚು ಗಳಿಸಿದೆ ಎಂದು ವರದಿಗಳು ತಿಳಿಸಿವೆ.

ಅಂದು ಯೂಟ್ಯೂಬ್ ವಿಡಿಯೋಗೆ 10 ಸಾವಿರ ವೀಕ್ಷಣೆಗಳನ್ನ ಪಡೆಯಲಾಗದೇ ಮುಂಬೈ ತೊರೆದಿದ್ದ ಜಿತೇಂದ್ರ ಕುಮಾರ್, ಬಳಿಕ ಬೆಂಗಳೂರಿನಲ್ಲಿ ಕಾರ್ಪೊರೇಟ್ ಉದ್ಯೋಗಕ್ಕೆ ಸೇರಿದ್ದರು. ಆದರೆ ನಟನೆಯ ಮೇಲಿನ ತಮ್ಮ ಕನಸನ್ನು ಬಿಟ್ಟುಕೊಡದೆ ಮತ್ತೆ ಮುಂಬೈಗೆ ಮರಳಿದರು. TVF ವಿಡಿಯೋಗಳಿಂದ ಆರಂಭವಾದ ಅವರ ಪಯಣ ‘ಪರ್ಮನೆಂಟ್ ರೂಮ್‌ಮೇಟ್ಸ್’, ‘ಪಿಚರ್ಸ್’, ‘ಕೋಟಾ ಫ್ಯಾಕ್ಟರಿ’, ‘ಪಂಚಾಯತ್’ ಮೂಲಕ ಮುಂದುವರಿದು, ಇದೀಗ ₹270 ಕೋಟಿಗೂ ಹೆಚ್ಚು ಗಳಿಸಿದ ಸಿನಿಮಾದವರೆಗೆ ತಲುಪಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಾಸ್ ಮನೆಯಲ್ಲಿ ಕೈಬಳೆ ಸದ್ದು ಬೆನ್ನಲ್ಲೇ 'ಗಂಡಸ್ತನ ಪ್ರಶ್ನೆ'! ಮಂಜು ನೀನು ಗಂಡಸೇ ಅಲ್ಲವೆಂದ ಕಾವ್ಯ!
ಗಣೇಶನ ಭಕ್ತಿಯಲ್ಲಿ ರಾಧಿಕಾ ಪರವಶ: ಅಂಬಾನಿ ಕಿರಿಯ ಸೊಸೆಯ ಡ್ಯಾನ್ಸ್ ಗೆ ಜನ ಫಿದಾ