ನಾಟಕ ಕುಲಗೆಡಿಸಿದ ಆ ಒಂದು ಲಿಪ್ ಲಾಕ್..! ಮುಂದೆ ಆಗಿದ್ದೆಲ್ಲ ?

By Web Desk  |  First Published May 1, 2019, 5:06 PM IST

ಹಾಲಿವುಡ್ ಮತ್ತು ಬಾಲಿವುಡ್ ಅಷ್ಟೆ ಏಕೆ ಸ್ಯಾಂಡಲ್ ವುಡ್ ಸಿನಿಮಾದಲ್ಲಿ ಲಿಪ್ ಲಾಕ್ ಸೀನ್ ಗಳು  ಸಾಮಾನ್ಯ ಎನ್ನುವ ಹಾಗಾಗಿದೆ. ಆದರೆ  ನಾಟಕದಲ್ಲಿಯೂ! ಹೌದು ಅಂಥದ್ದೊಂದು ಉದಾಹರಣೆಯೂ ನಡೆದುಹೋಗಿ ಬಿಟ್ಟಿದೆ.


ಭೋಪಾಲ್ [ಮಾ. 01]  ನಾಟಕದಲ್ಲಿ ಲಿಪ್ ಲಾಕ್ ಮಾಡುವ ದೃಶ್ಯ ಇರಲೇ ಇಲ್ಲ. ಆದರೆ ಈ ಜೋಡಿಗೆ ಅದೇನಾಯಿತೋ ಗೊತ್ತಿಲ್ಲ.  ವೇದಿಕೆ ಮೇಲೆ ಲಿಪ್ ಲಾಕ್ ಮಾಡಿಕೊಂಡಿದ್ದಾರೆ. ಅವರಿಗೇ ಏನಾಯಿತೋ ಗೊತ್ತಿಲ್ಲ.. ಆದರೆ ನಾಟಕ ಮಾತ್ರ ಹಾದಿ ತಪ್ಪಿ ಹೋಯಿತು.

ಭೋಪಾಲ್ ನ ರವೀಂದ್ರ ರಂಗಮಂದಿರದ ರೋಮಿಯೋ-ಜೂಲಿಯಟ್ ನಾಟಕದ ದೃಶ್ಯದ ವೇಳೆ ಲಿಪ್ ಲಾಕ್ ಆಗಿ ಹೋಗಿದೆ. ನಿಶಾಂತ್ ರಘವಂಶಿ ರೋಮಿಯೋ ಪಾತ್ರವನ್ನು, ಮೃಣಾಲಿ ಪಾಂಡೆ ಜೂಲಿಯಟ್ ಪಾತ್ರ ನಿರ್ವಹಣೆ ಮಾಡುತ್ತಿದ್ದರು.

Tap to resize

Latest Videos

undefined

ದಂಪತಿಯ 'ಡೇಂಜರಸ್ ಕಿಸ್' ವೈರಲ್ : ಟ್ರೋಲ್ ಆಗುತ್ತಿದ್ದಂತೆ ಬಯಲಾಯ್ತು ಸತ್ಯ!

ಜೂಲಿಯಟ್ ವಿಷ ಸೇವಿಸಿ ಸಾಯುವ ನಾಟಕ ಮಾಡುತ್ತಾಳೆ. ಆದರೆ ರೋಮಿಯೋ ನಿಜವಾಗಿಯೂ ಜೂಲಿಯಟ್ ಮೃತಪಟ್ಟಿದ್ದಾಳೆ ಎಂದು ದುಃಖಿತನಾಗಿ ತಾನೂ ಸಾಯಲು ಮುಂದಾಗುತ್ತಾನೆ. ಈ ವೇಳೆ ರೋಮಿಯೋ ಪಾತ್ರಧಾರಿ ನಿಶಾಂತ್ ರಘವಂಶಿ ವೇದಿಕೆ ಮೇಲೆಯೇ ಜೂಲಿಯಟ್ ಪಾತ್ರಧಾರಿ ಮೃಣಾಲಿ ಪಾಂಡೆಗೆ ಕಿಸ್ ಕೊಟ್ಟಿದ್ದಾನೆ. ಇತ್ತ ಸಾಯುವಂತೆ ನಟಿಸಿದ್ದ ಜೂಲಿಯಟ್ ಎದ್ದು ಆಕೆಯೂ ನಿಶಾಂತ್ ರಘವಂಶಿಗೆ ಲಿಪ್‍ಲಾಕ್ ಕಿಸ್ ಮಾಡಿದ್ದಾಳೆ. ಈ ಎಲ್ಲ ಅವಘಡ ನಡೆಯುತ್ತಿದ್ದಂತೆ ಪ್ರೇಕ್ಷಕರು ಗಲಾಟೆ ಆರಂಭಿಸಿದ್ದಾರೆ.

ಒಟ್ಟಿನಲ್ಲಿ ಒಂದು ಲಿಪ್ ಲಾಕ್ ದೃಶ್ಯ  ಇಡಿ ನಾಟಕವನ್ನೇ ಕುಲಗೆಡಿಸಿದ್ದು ಸುಳ್ಳಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಹ ತಕ್ಕ ರೀತಿಯಲ್ಲಿ ಪ್ರತಿಕ್ರಿಯೆ ಎದುರಾಗಿದೆ.

click me!