ಬೆಲ್‌ಬಾಟಂ 2 ಚಿತ್ರಕ್ಕೆ ರಿಷಬ್ ಶೆಟ್ಟಿ ನಿರ್ದೇಶಕ!

Published : Mar 14, 2019, 09:27 AM IST
ಬೆಲ್‌ಬಾಟಂ 2 ಚಿತ್ರಕ್ಕೆ ರಿಷಬ್ ಶೆಟ್ಟಿ ನಿರ್ದೇಶಕ!

ಸಾರಾಂಶ

ಜಯತೀರ್ಥ, ರಿಷಬ್ ಶೆಟ್ಟಿ ಹಾಗೂ ಟಿಕೆ ದಯಾನಂದ ಕಾಂಬಿನೇಷನ್‌ನಲ್ಲಿ ಬಂದ ‘ಬೆಲ್ ಬಾಟಂ’ ಚಿತ್ರದ ಮುಂದುವರಿದ ಭಾಗ ಬರುವುದು ಖಚಿತವಾಗಿದ್ದು, ಈ ಬಾರಿ ಡಿಟೆಕ್ಟಿವ್ ದಿವಾಕರ ಪಾತ್ರದಾರಿ ರಿಷಬ್ ಶೆಟ್ಟಿ ಅವರೇ ನಿರ್ದೇಶಕರಾಗುವ ಸಾಧ್ಯತೆಗಳು ಇವೆ.

ನಾಯಕ ಕಂ ನಿರ್ದೇಶಕ ಒಬ್ಬರೇ ಆಗುತ್ತಿರುವ ಈ ಪಾರ್ಟ್ 2 ಚಿತ್ರ ಈ ವರ್ಷದ ಕೊನೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಸೆಟ್ಟೇರಲಿದೆ.

ಇಬ್ಬರು ಸಿಎಂಗಳ ಹಿಂದೆ ದಿವಾಕರ: ಈ ಬಾರಿ ಕತೆಗಾರ ಟಿ ಕೆ ದಯಾನಂದ ಅವರು ಒಂದು ರಿಯಲ್ ಘಟನೆಯನ್ನು ಆಧರಿಸಿ ಕತೆ ಮಾಡಿದ್ದಾರೆ. 1980-1986ರ ನಡುವೆ ರಾಜ್ಯದಲ್ಲಿ ನಡೆದ ಒಂದು ಸಂಚಲನಾತ್ಮಕ ಘಟನೆಯೇ ಈ ಕತೆಯ ತಳಹದಿ. ಅಲ್ಲದೆ ರಾಜ್ಯ ಸರ್ಕಾರದ ಬಜೆಟ್‌ಗೆ ಸಂಬಂಧಿಸಿದ ಈ ಘಟನೆಯಲ್ಲಿ ರಾಜ್ಯದ ಇಬ್ಬರು ಮುಖ್ಯ ಮಂತ್ರಿಗಳ ಕೈವಾಡವೂ ಇದೆ. ಇಬ್ಬರು ಪವರ್ ಫುಲ್ ಸಿಎಂಗಳ ಹಿಂದೆ ಬೀಳುವ ಡಿಟೆಕ್ಟಿವ್ ದಿವಾಕರನ ಕತೆ ಇದು.

ಅದೇ ಪಾತ್ರಗಳು- ಬಾಂಡ್ ಶೈಲಿ: ಬೆಲ್‌ಬಾಟಂ ಮುಂದುವರಿದ ಭಾಗವನ್ನು ಜೇಮ್ಸ್ ಬಾಂಡ್ ಶೈಲಿಯಲ್ಲಿ ರೂಪಿಸುವುದಕ್ಕೆ ಹೊರಟಿದ್ದಾರೆ. ಅದರೆ ದಿವಾಕರನ ಕೈಗೆ ಪುಟ್ಟ ಪಿಸ್ತೂಲು ಬರಲಿದೆ. ಪಾರ್ಟ್ 2ನಲ್ಲಿ ಹಿಂದಿನ ಭಾಗದಲ್ಲಿ ಕಾಣಿಸಿಕೊಂಡ ಕಲಾವಿದರೂ ಮುಂದುವರಿಯಲಿದ್ದಾರೆ.

ದಿವಾಕರನೇ ನಾಯಕ,ನಿರ್ದೇಶಕ

ಬೆಲ್‌ಬಾಟಂ-2 ಚಿತ್ರಕ್ಕೆ ನಾಯಕಿ, ತಂತ್ರಜ್ಞರ ತಂಡವನ್ನು ಇನ್ನಷ್ಟೆ ಆಯ್ಕೆ ಮಾಡಬೇಕಿದೆ. ಸಂತೋಷ್ ಅವರೇ ಪಾರ್ಟ್ 2ಗೂ ನಿರ್ಮಾಪಕರು. ಆದರೆ, ಈ ಚಿತ್ರಕ್ಕೆ ರಿಷಬ್ ಶೆಟ್ಟಿ ಅವರೇ ನಾಯಕನಾಗುವ ಜತೆಗೆ ನಿರ್ದೇಶಕರೂ ಆಗಲಿದ್ದಾರೆಂಬ ಸುದ್ದಿ ಇದೆ. ಆದರೆ, ಇದನ್ನು ಚಿತ್ರತಂಡ ಖಚಿತಪಡಿಸಿಲ್ಲ. ‘ಕತೆ ಸಿದ್ಧವಾಗಿದೆ. ಬೆಲ್‌ಬಾಟಂನಲ್ಲಿ ಕೆಲಸ ಮಾಡಿದ ಎಲ್ಲರು ಬೇರೆ ಬೇರೆ ಚಿತ್ರಗಳಲ್ಲಿ ಬ್ಯುಸಿಯಾಗಿದ್ದೇವೆ. ಅದನ್ನು ಮುಗಿಸಿಕೊಂಡು ಪಾರ್ಟ್ 2 ಶುರು ಮಾಡುತ್ತೇವೆ ಎನ್ನುತ್ತಾರೆ ರಿಷಬ್ ಶೆಟ್ಟಿ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಕಿಚ್ಚ ಸುದೀಪ್‌ ಇದ್ರೂ ಕ್ಯಾರೆ ಎನ್ನಲಿಲ್ಲ. ಅಸಭ್ಯ ಎಂದು ಕಿತ್ತಾಡ್ಕೊಂಡ ರಜತ್‌, ಧ್ರುವಂತ್!
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ