ಬುದ್ಧಿಜೀವಿಗಳನ್ನು ದೇಶದಿಂದ ಓಡಿಸಿ: ಸದ್ದು ಮಾಡುತ್ತಿದೆ ರಿಷಬ್ ಹೇಳಿಕೆ

Published : Feb 18, 2019, 02:59 PM ISTUpdated : Feb 18, 2019, 03:02 PM IST
ಬುದ್ಧಿಜೀವಿಗಳನ್ನು ದೇಶದಿಂದ ಓಡಿಸಿ:  ಸದ್ದು ಮಾಡುತ್ತಿದೆ ರಿಷಬ್ ಹೇಳಿಕೆ

ಸಾರಾಂಶ

ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ರಿಷಬ್ ಶೆಟ್ಟಿ ಹೇಳಿಕೆ | ಬುದ್ಧಿಜೀವಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ ರಿಷಬ್ ಶೆಟ್ಟಿ | ಜೋರಾಗಿದೆ ಪರ-ವಿರೋಧ ಚರ್ಚೆ 

ಬೆಂಗಳೂರು (ಫೆ. 18): ಬುದ್ಧಿಜೀವಿಗಳನ್ನು ನಾನ್ ಸೆನ್ಸ್ ಮಾತಾಡ್ತಿದ್ದಾರೆ. ಅವರನ್ನು ದೇಶಬಿಟ್ಟು ಓಡಿಸಬೇಕು ಆಗ ದೇಶ ಚೆನ್ನಾಗಿರುತ್ತದೆ ’ ಎಂದು ರಿಷಬ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹುತಾತ್ಮ ಯೋಧ ಗುರು ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಬುದ್ಧಿ ಜೀವಿಗಳಿಗೆ ತಿವಿದಿದ್ದಾರೆ. ಬುದ್ಧಿಜೀವಿಗಳು ಮಾತುಕತೆ ಬಗ್ಗೆ ಮಾತನಾಡುತ್ತಿದ್ದಾರೆ. ನಾನ್ ಸೆನ್ಸ್ ಆಗಿ ಮಾತನಾಡುತ್ತಿದ್ದಾರೆ. ಇವರನ್ನು ದೇಶದಿಂದ ಓಡಿಸಿದ್ರೆ ದೇಶ ಚೆನ್ನಾಗಿರುತ್ತದೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. 

ಕೆಲವರು ಐಡೆಂಟಿಟಿ ಕ್ರೈಸಿಸ್ ನಿಂದ ಬಳಲುತ್ತಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕುತ್ತಾರೆ. ಇವರಿಗೆ ಹುಚ್ಚು ಹಿಡಿದಿದೆ. ಈ ರೀತಿ ಕೂಗಿದ್ರೆ ಗುರುತಿಸಿಕೊಳ್ಳಬಹುದು ಎಂದುಕೊಂಡಿದ್ದಾರೆ. ಅವರನ್ನು ಮಟ್ಟ ಹಾಕಬೇಕು ಎಂದು ವಾಗ್ದಾಳಿ ನಡೆಸಿದರು. 

ರಿಷಬ್ ಶೆಟ್ಟಿಯವರ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌