
‘ಕಥಾ ಸಂಗಮ’ ಚಿತ್ರದ ಫಸ್ಟ್ ಲುಕ್ ಬೆರಗುಗೊಳಿಸುವಂತಿದೆ. ರಿಷಬ್ ಶೆಟ್ಟಿ ಚಿಂದಿ ಬಟ್ಟೆ ತೊಟ್ಟು, ಬಲಗಾಲಿಗೊಂದು ಎಡಗಾಲಿಗೊಂದು ಬೇರೆ ಬೇರೆ ಥರದ ಶೂ ಹಾಕಿ ಬೀದಿನಾಯಿ ಜೊತೆ ಕೂತಿದ್ದಾರೆ. ಇದೇನಿದು, ಯಾವ ಪಾತ್ರ ಅಂತ ಕೇಳಿದರೆ ರಿಷಬ್ ‘ಕಥಾ ಸಂಗಮ’ ಚಿತ್ರದ ಮೊದಲ ಕಿರುಚಿತ್ರ ನಿರ್ದೇಶಿಸಿದ ಕಿರಣ್‌ರಾಜ್ ಕಡೆಗೆ ಕೈ ತೋರಿಸುತ್ತಾರೆ. ‘ಕಿರಣ್ ಕತೆ ಹೇಳಿದಾಗ ಎಕ್ಸೈಟ್ ಆದೆ. ಆದರೆ ಎದುರಿಗೆ ಹರಿಪ್ರಿಯಾ ಇದ್ದಿದ್ದರಿಂದ ನಟನಾಗಿ ಹೆಚ್ಚಿನ ಜವಾಬ್ದಾರಿ ಇತ್ತು. ಇನ್ನೇನಿದ್ದರೂ ನೀವು ಕಿರಣ್‌ನೇ ಕೇಳಬೇಕು’ ಎಂದರು.
ನಿರ್ದೇಶಕ ಕೆ. ಕಿರಣ್‌ರಾಜ್ ಹೇಳಿದ್ದಿಷ್ಟು- ಇದು ಮೂಕಿಚಿತ್ರ. ಕಥಾಸಂಗಮದಲ್ಲಿರುವ ಏಳು ಕಿರುಚಿತ್ರಗಳಲ್ಲಿ ಮೊದಲನೆಯದು. ನಾನೇ ಬರೆದು ನಿರ್ದೇಶಿದ್ದೇನೆ.
ಈ ಚಿತ್ರದಲ್ಲಿ ಇಬ್ಬರೇ ಕಲಾವಿದರು. ರಿಷಬ್ ಮತ್ತು ಹರಿಪ್ರಿಯಾ. ಅವರ ಜೊತೆ ಬೀದಿ ನಾಯಿ ರೂಮಿ ಇದೆ.
ರಿಷಬ್‌ಗೆ ಭಿಕ್ಷುಕನ ಪಾತ್ರ. ಹರಿಪ್ರಿಯಾ ಪಿಎಚ್‌ಡಿ ವಿದ್ಯಾರ್ಥಿನಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇಬ್ಬರೂ ಅಪರಿಚಿತರು ಅಚಾನಕ್ ಆಗಿ ಒಂದು ಸ್ಥಳದಲ್ಲಿ ಭೇಟಿಯಾದಾಗ ನಡೆಯುವ ಕತೆ ಇದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.