Irumudi OTT Release: 'ಇರುಮುಡಿ' ಒಟಿಟಿ ಬಿಡುಗಡೆ ಡೇಟ್ ಫಿಕ್ಸ್, ಎಲ್ಲಿ ನೋಡಬಹುದು?

Published : Sep 01, 2026, 04:44 PM IST
Ravi Teja Irmudi

ಸಾರಾಂಶ

ನಟ ರವಿತೇಜ ಅಭಿನಯದ 'ಇರುಮುಡಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದು, 150 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿರುವ ಈ ಸಿನಿಮಾದ ಓಟಿಟಿ ಬಿಡುಗಡೆ ದಿನಾಂಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.

ನಟ ರವಿತೇಜ ನಟನೆಯ ಇರುಮುಡಿ ಸಿನಿಮಾ ಚಿತ್ರಮಂದಿರಗಳಲ್ಲಿ ಎರಡನೇ ವಾರವೂ ತಮ್ಮ ಓಟವನ್ನು ಮುಂದುವರಿಸಿದೆ. ಇಂದಿಗೂ ಬಹುತೇಕ ಶೋಗಳು ಹೌಸ್‌ಫುಲ್ ಆಗುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಬೆಂಬಲ ಪಡೆದುಕೊಂಡಿದೆ.

ಸಿನಿಮಾ ನಟ, ನಿರ್ದೇಶಕನಿಂದ ಹಿಡಿದು ಪ್ರೇಕ್ಷಕರವರೆಗೂ ಯಾರು ಊಹೆ ಮಾಡದ ಗೆಲುವು ಪಡೆದುಕೊಂಡಿದ್ದು, ಫ್ಯಾಮಿಲಿ ಪ್ರೇಕ್ಷಕರನ್ನು ಕೈಹಿಡಿದು ಥಿಯೇಟರ್‌ಗೆ ಕರೆದುಕೊಂಡು ಬಂದಿದೆ. ಇದರ ನಡುವೆಯೇ ಸಿನಿಮಾದ ಓಟಿಟಿ ಬಿಡುಗಡೆ ದಿನಾಂಕದ ಕುರಿತ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇರುಮುಡಿ: ಥಿಯೇಟರ್‌ ಓಟದ ನಡುವೆ ಓಟಿಟಿ ಗೊಂದಲ?

ಹಲವು ವರ್ಷಗಳಿಂದ ನಟ ರವಿತೇಜ ಬಿಗ್ ಹಿಟ್ ಸಿನಿಮಾಗಾಗಿ ಕಾಯುತ್ತಿದ್ದರು. 'ಇರುಮುಡಿ' ಸಿನಿಮಾ ಆರಂಭದಿಂದಲೂ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಅಯ್ಯಪ್ಪ ಸ್ವಾಮಿ ದೀಕ್ಷೆ ಸ್ವೀಕರಿಸುವ ತಂದೆಯ ಪಾತ್ರ ಎಲ್ಲರ ಗಮನ ಸೆಳೆದಿತ್ತು. ಇದರೊಂದಿಗೆ ರವಿತೇಜ ಕಾಮ್‌ಬ್ಯಾಕ್ ಸಿನಿಮಾ ಅಂತಲೇ ಹಲವು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸದ್ಯ 150 ಪ್ಲಸ್ ಕೋಟಿ ಗಳಿಕೆಯೊಂದಿಗೆ ಮುನ್ನುಗುತ್ತಿರುವ ಈ ಸಿನಿಮಾ ಭರ್ಜರಿ ಪ್ರದರ್ಶನ ಮುಂದುವರಿಸಿದೆ.

ಇನ್ನು, ಈ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ನೆಟ್ಫ್ಲಿಕ್ಸ್ ಪಡೆದುಕೊಂಡಿದೆ. ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ನಾಲ್ಕು ವಾರಗಳ ಬಳಿಕ ಈ ಸಿನಿಮಾ ಓಟಿಟಿಗೆ ಎಂಟ್ರಿ ಕೊಡುವಂತೆ ಸಿನಿಮಾ ತಂಡ ಒಪ್ಪಂದ ಮಾಡಿಕೊಂಡಿದೆ. ಇದರ ಅನ್ವಯ 'ಇರುಮುಡಿ' ಸಿನಿಮಾ ಸೆಪ್ಟೆಂಬರ್ 18ರಿಂದ ಓಟಿಟಿಯಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ. ಆದರೆ ಥಿಯೇಟರ್‌ಗಳಲ್ಲಿ ಉತ್ತಮ ಕಲೆಕ್ಷನ್ಸ್ ಇರುವ ಕಾರಣ ಸಿನಿಮಾ ನಿರ್ಮಾಪಕರು, ಓಟಿಟಿ ಸಂಸ್ಥೆಯೊಂದಿಗೆ ಮಾತನಾಡಿ ಇನ್ನು ಕೆಲವು ದಿನಗಳ ಕಾಳ ಓಟಿಟಿ ಬಿಡುಗಡೆಯನ್ನು ತಡೆಹಿಡಿಯವ ಅವಕಾಶವಿದೆ ಎಂದು ಸಿನಿಮಾ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯದ ಪರಿಸ್ಥಿತಿಗಳನ್ನು ಗಮನಿಸಿದರೆ ಸಿನಿಮಾ ಥಿಯೇಟರ್‌ನಲ್ಲಿರುವ ಸಂದರ್ಭದಲ್ಲಿಯೇ ಓಟಿಟಿಯಲ್ಲೂ ಬಿಡುಗಡೆಯಾಗುತ್ತಾ ಎಂಬ ಸಂದೇಹವನ್ನು ಮೂಡಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಕ್ ಪ್ರಶಾಂತ್ ನೀಲ್‌ಗೆ ಕಲರ್‌ಫುಲ್ ಟಚ್: ಜೂ.ಎನ್‌ಟಿಆರ್ ‘ಡ್ರ್ಯಾಗನ್’ನಲ್ಲಿ ಬಿಗ್ ಸರ್ಪ್ರೈಸ್!
ಚಂದದ ಗೊಂಬೆ ಅಲ್ಲ, ರಗಡ್ ವಾರಿಯರ್: ‘ಮೈಸಾ’ ಪೋಸ್ಟರ್‌ನಲ್ಲಿ ರಶ್ಮಿಕಾ ಮಂದಣ್ಣ ಅಬ್ಬರ