ಸುದೀಪ್ ಮಧ್ಯರಾತ್ರಿ ಈ ರೀತಿ ಮೆಸೇಜ್ ಮಾಡಿದ್ದು ಯಾರಿಗೆ..?

Published : Apr 05, 2019, 12:00 PM IST
ಸುದೀಪ್ ಮಧ್ಯರಾತ್ರಿ ಈ ರೀತಿ ಮೆಸೇಜ್ ಮಾಡಿದ್ದು ಯಾರಿಗೆ..?

ಸಾರಾಂಶ

ಪಡ್ಡೆಹುಲಿ ಚಿತ್ರದ ಆಡಿಯೋ ಲಾಂಚ್‌ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಮಧ್ಯರಾತ್ರಿ ಯಾರಿಗೆ ಮೆಸೇಜ್‌ ಮಾಡುತ್ತಾರೆ ಎಂದು ರವಿಚಂದ್ರನ್ ರಿವೀಲ್ ಮಾಡಿದ್ದಾರೆ. ಯಾರದು ಇಲ್ಲಿದೆ ನೋಡಿ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ರೊಮ್ಯಾಂಟಿಕ್ ಮ್ಯಾನ್ ರವಿಚಂದ್ರನ್ ಪಡ್ಡೆಹುಲಿ ಚಿತ್ರ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಒಂದು ವೇದಿಕೆ ಮೇಲೆ ಕಾಣಿಸಿಕೊಂಡರು.

ವೇದಿಕೆ ಮೇಲೆ ರವಿಚಂದ್ರನ್ ಎದುರು ಹಾಡು ಹೇಳಲು ಕಿಚ್ಚನಿಗೆ ಕೊಂಚ ನಾಚಿಕೆಯಾಯ್ತು. ಯಾಕೆ ಗೊತ್ತಾ?

ಕಿಚ್ಚ ಯಾವ ಹಾಡು ಹೇಳಲಿ ಎಂದು ಯೋಚನೆ ಮಾಡುತ್ತಿರುವಾಗ ರವಿಚಂದ್ರನ್ 'ಮೊನ್ನೆ ಮಧ್ಯ ರಾತ್ರಿ ಯಾವ್ದೋ ಹಾಡು ಹೇಳಿ ಕಳುಹಿಸಿದೆಯಲ್ಲಾ ಅದನ್ನು ಹಾಡು ' ಎಂದು ತಮಾಷೆ ಮಾಡಿದರು. ಯಾವ ಹಾಡು ಯಾವ ಮೆಸೇಜ್ ಎಂದು ಕನ್ಫ್ಯೂಸ್ ಆದ ಕಿಚ್ಚ ರವಿಚಂದ್ರನ್ ಮುಖ ನೋಡಿಕೊಂಡು ನಿಂತರು.

 

ಆಗ ಮತ್ತೊಮ್ಮೆ 'ನೀನು ಯಾವ ಸುಂದರ ಗೊಂಬೆಗೆ ಕಳುಹಿಸಲು ಹೋಗಿ ನನಗೆ ಕಳುಹಿಸಿದ್ಯೋ ಅದನ್ನೇ ಹಾಡು ' ಎಂದು ಕಾಮಿಡಿ ಮಾಡಿದರು. ಅದಕ್ಕೆ ಸುದೀಪ್ ರವಿಚಂದ್ರನ್ ಚಿತ್ರದ 'ಪ್ರೇಮಾ.... ಪ್ರೇಮಾ ' ಹಾಡು ಹೇಳಿದರು.

’ಪಡ್ಡೆಹುಲಿ’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಕರ್ಲಸ್ ಕನ್ನಡ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 9.30 ಕ್ಕೆ ಪ್ರಸಾರವಾಗುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ವಾರಣಾಸಿ' ಶೂಟಿಂಗ್ ಶೇ.90ರಷ್ಟು ಕಂಪ್ಲೀಟ್? ರಾಜಮೌಳಿ ಸಿನಿಮಾದಿಂದ ಬಂತು ಇಂಟರೆಸ್ಟಿಂಗ್ ಅಪ್‌ಡೇಟ್!
ಭುಜದ ಗಾಯದಿಂದ ಚೇತರಿಸಿಕೊಂಡ ತಾರಕ್: ನೀಲ್ ಡ್ರ್ಯಾಗನ್ ಲೋಕಕ್ಕೆ ಯಾವಾಗ ಎಂಟ್ರಿ ಕೊಡ್ತಾರೆ ಜೂ. ಎನ್‌ಟಿಆರ್?