
ಮಾಸ್ ಮಹಾರಾಜ ರವಿತೇಜ ನಟನೆಯ ಬಹುನಿರೀಕ್ಷಿತ ಭಕ್ತಿಪ್ರಧಾನ ಸಿನಿಮಾ 'ಇರುಮುಡಿ'ಯ ಮೊದಲ ಹಾಡು ಬಿಡುಗಡೆಯಾಗಿದೆ. ಅಯ್ಯಪ್ಪ ಸ್ವಾಮಿಯ ಹಿನ್ನೆಲೆಯಲ್ಲಿ ತಂದೆ-ಮಗಳ ಬಾಂಧವ್ಯದ ಕಥೆ ಹೇಳುವ ಈ ಚಿತ್ರದ 'ಇರುಮುಡಿ ಕಟ್ಟು' ಎಂಬ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿದೆ. ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮಾಸ್ ಮಹಾರಾಜ ರವಿತೇಜ, ಈ ಬಾರಿ ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಬ್ಲಾಕ್‌ಬಸ್ಟರ್ ನಿರ್ದೇಶಕ ಶಿವ ನಿರ್ವಾಣ ನಿರ್ದೇಶನದಲ್ಲಿ ರವಿತೇಜ ಹಾಗೂ ಪ್ರಿಯಾ ಭವಾನಿ ಶಂಕರ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ 'ಇರುಮುಡಿ' ಚಿತ್ರದ ಮೊದಲ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. 'ಇರುಮುಡಿ ಕಟ್ಟು ಶಬರಿಮಲೆ ಎಕ್ಕು' ಎಂದು ಸಾಗುವ ಈ ಹಾಡು ಅಯ್ಯಪ್ಪ ಭಕ್ತರನ್ನು ಬಹಳವಾಗಿ ಸೆಳೆಯುತ್ತಿದೆ. ರವಿತೇಜ ಸಿನಿಮಾಗಳಲ್ಲಿ ಸಾಮಾನ್ಯವಾಗಿರುವ ಮಾಸ್ ಮತ್ತು ಎನರ್ಜಿಟಿಕ್ ಹಾಡುಗಳಿಗಿಂತ ಭಿನ್ನವಾಗಿ, ಸಂಪೂರ್ಣ ಭಕ್ತಿ ಪ್ರಧಾನವಾಗಿ ಈ ಗೀತೆಯನ್ನು ಸಂಯೋಜಿಸಲಾಗಿದೆ.
ಜಿ.ವಿ. ಪ್ರಕಾಶ್ ಕುಮಾರ್ ಅವರ ಸಂಗೀತ ಹಾಗೂ ಸಾಹಿತ್ಯ ಈ ಹಾಡಿಗೆ ಜೀವ ತುಂಬಿದೆ. ಅಯ್ಯಪ್ಪ ಭಕ್ತರಿಗೆ ಈ ಹಾಡು ವಿಶೇಷ ಅನುಭೂತಿ ನೀಡುತ್ತಿದೆ. ಈ ಹಾಡಿನಲ್ಲಿ ರವಿತೇಜ ಅಯ್ಯಪ್ಪ ಮಾಲೆ ಧರಿಸಿ, ಕಪ್ಪು ಬಟ್ಟೆಯಲ್ಲಿ ಹಿಂದೆಂದೂ ಕಾಣದ ದೈವಿಕ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸ್ಕ್ರೀನ್ ಪ್ರೆಸೆನ್ಸ್ ಭಕ್ತರಲ್ಲಿ ಹೊಸ ಉತ್ಸಾಹ ತುಂಬುತ್ತಿದೆ. ಶಬರಿಮಲೆ ಯಾತ್ರೆಯ ದೃಶ್ಯಗಳು, ಸಾಂಪ್ರದಾಯಿಕ ನೃತ್ಯಗಳು ಹಾಗೂ ಪ್ರಿಯಾ ಭವಾನಿ ಶಂಕರ್ ಅವರ ಹೋಮ್ಲಿ ಲುಕ್ ಹಾಡಿನ ದೃಶ್ಯ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ.
ಶಿವ ನಿರ್ವಾಣ ಅವರ ಭಾವನಾತ್ಮಕ ಸ್ಪರ್ಶ ಹಾಗೂ ರವಿತೇಜ ನಟನೆ ಒಟ್ಟಿಗೆ ಸೇರಿರುವ ಈ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಈಗಾಗಲೇ ಬಿಡುಗಡೆಯಾದ ಗ್ಲಿಂಪ್ಸ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೀಗ ಮೊದಲ ಹಾಡು ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಚಿತ್ರವನ್ನು ಆಗಸ್ಟ್ 21 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. 'ಇರುಮುಡಿ' ಸಿನಿಮಾ ಘೋಷಣೆಯಾದಾಗಿನಿಂದಲೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈಗ ಶಬರಿಮಲೆ ಸೀಸನ್ ಅಲ್ಲದಿದ್ದರೂ, ಈ ಹಾಡು ಕೇಳುತ್ತಿದ್ದರೆ ಅಯ್ಯಪ್ಪ ಭಕ್ತರಿಗೆ ಈಗಲೇ ಮಾಲೆ ಧರಿಸಿದಷ್ಟು ಭಕ್ತಿಭಾವ ಮೂಡುತ್ತದೆ ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.