ರಾಹುಲ್ ಸಾಂಕ್ರಿತ್ಯನ್ ನಿರ್ದೇಶನದ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ರಣಬಾಲಿ' ಚಿತ್ರವು ಅಕ್ಟೋಬರ್ 16 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಏತನ್ಮಧ್ಯೆ ಹೈದರಾಬಾದ್ ಏರ್ಪೋರ್ಟ್ನ ಡಿಪಾರ್ಚರ್ ಗೇಟ್ ಬಳಿ ನಟ ವಿಜಯ್ ದೇವರಕೊಂಡ ಅತ್ಯಂತ ವೇಗವಾಗಿ ಮುಂದೆ ಹೆಜ್ಜೆ ಹಾಕುತ್ತಿದ್ದರೆ, ಅವರ ಹಿಂದೆಯೇ ಸುಂದರವಾದ ಹಳದಿ ಬಣ್ಣದ ಸಾಂಪ್ರದಾಯಿಕ ಉಡುಪಿನಲ್ಲಿ ರಶ್ಮಿಕಾ ನಡೆದು ಬರುತ್ತಿದ್ದರು.
ಆ ಸಮಯದಲ್ಲಿ ಅಲ್ಲಿಗೆ ಓಡಿಬಂದ ಅಭಿಮಾನಿಯೊಬ್ಬ, ವಿಜಯ್ ಅವರನ್ನು ಬಿಟ್ಟು ನೇರವಾಗಿ ರಶ್ಮಿಕಾ ಅವರತ್ತ ಮುಖಮಾಡಿ ಅತ್ಯಂತ ಗೌರವದಿಂದ ಕೈ ಮುಗಿದಿದ್ದಾನೆ. ತಕ್ಷಣವೇ ರಶ್ಮಿಕಾ ಯಾವುದೇ ಅಹಂ ತೋರದೆ, ಮುಗುಳ್ನಗುತ್ತಾ ಕ್ಯೂಟ್ ಆಗಿ ಆತನಿಗೆ ಸ್ಮೈಲ್ ನೀಡಿ ಮುಂದೆ ಸಾಗಿದ್ದಾರೆ. ನಟಿಯ ಈ ನಮ್ರತೆಯ ನಡೆ ಮತ್ತು ಮುದ್ದಾದ ಸ್ಮೈಲ್ ಕ್ಷಣಾರ್ಧದಲ್ಲೇ ನೆಟ್ಟಿಗರ ಮನಸ್ಸನ್ನು ಗೆದ್ದಿದೆ.
ಇನ್ನು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಬಾಕ್ಸ್ನಲ್ಲಿ ಹಾರ್ಟ್ ಇಮೋಜಿಗಳ ಸುರಿಮಳೆಯನ್ನೇ ಹರಿಸಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಒಟ್ಟಿಗೆ ಇರುವುದನ್ನು ನೋಡಿ ತೆಲುಗು ಅಭಿಮಾನಿಯೊಬ್ಬ, "ಹೇಗಿದ್ದವನು ಹೇಗಾಗಿಬಿಟ್ಟ, ನಿಜವಾದ ಅದೃಷ್ಟ ಅಂದ್ರೆ ನಿಂದೇ ಬ್ರೋ" ಎಂದು ವಿಜಯ್ ಕಾಲೆಳೆದಿದ್ದಾನೆ. ರಶ್ಮಿಕಾ ಹಿಂದೆ ಉಳಿದಿದ್ದಕ್ಕೆ ಮತ್ತೊಬ್ಬ ನೆಟ್ಟಿಗ, "ಅಣ್ಣಾ, ವದಿನಾ (ಅತ್ತಿಗೆ) ಹಾಗೆ ಹಿಂದೆ ಬಿಟ್ಟು ಹೋಗಬೇಡ, ಕೈ ಹಿಡ್ಕೊಂಡು ನಡಿ" ಎಂದು ಕಿವಿಮಾತು ಹೇಳಿದ್ದಾನೆ.
ಮತ್ತೊಂದೆಡೆ, "ಸಿನಿಮಾ ರಂಗದ ಎವರ್ಗ್ರೀನ್ ಐಕಾನಿಕ್ ಕಪಲ್", "ಹಳದಿ ಉಡುಪಿನಲ್ಲಿ ರಶ್ಮಿಕಾ ಅದ್ಭುತವಾಗಿದ್ದರೆ, ಅವರ ಹಬ್ಬಿ ವಿಜಯ್ ಕ್ಲಾಸಿಯಾಗಿ ಕಾಣ್ತಿದ್ದಾರೆ" ಎಂದು ಕಮೆಂಟ್ ಮಾಡಿದ್ದಾರೆ.
ಸದ್ಯ ವೈರಲ್ ಆಗಿರುವ ಈ ವಿಡಿಯೋದಲ್ಲಿ ವಿಶೇಷವಾಗಿ ರಶ್ಮಿಕಾ ಮಂದಣ್ಣ ಅವರ ಸಾಂಪ್ರದಾಯಿಕ ಲುಕ್ ಎಲ್ಲರ ಕಣ್ಮನ ಸೆಳೆದಿದೆ. ಹಳದಿ ಬಣ್ಣದ ಸರಳ ಹಾಗೂ ಆಕರ್ಷಕ ಸಲ್ವಾರ್ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದ ರಶ್ಮಿಕಾ ಅವರ ಸೌಂದರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದು, 'ಅಪ್ಪಟ ಭಾರತೀಯ ನಾರಿ' ಎಂದು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಆದರೆ ಮತ್ತೊಂದೆಡೆ, ವಿಜಯ್ ದೇವರಕೊಂಡ ಅವರ ಡ್ರೆಸ್ಸಿಂಗ್ ಸೆನ್ಸ್ ನೋಡಿದ ನೆಟ್ಟಿಗರು ಸಿಕ್ಕಾಪಟ್ಟೆ ತಮಾಷೆ ಮಾಡಿದ್ದಾರೆ. ವಿಜಯ್ ಧರಿಸಿದ್ದ ಅತಿಯಾದ ಸಡಿಲವಾದ (ಓವರ್ಸೈಜ್ಡ್ ಲೂಸ್) ಪ್ಯಾಂಟ್ ಅನ್ನು ಗಮನಿಸಿದ ಫ್ಯಾನ್ಸ್, 'ವಿಜಯ್ ಸರ್ ಪ್ಯಾಂಟ್ ಸ್ವಲ್ಪ ಜಾಸ್ತಿನೇ ಲೂಸ್ ಆಗಿಲ್ವಾ?', 'ಇದು ಯಾವ ಸೀಮೆಯ ಫ್ಯಾಷನ್ ಬ್ರೋ?' ಎಂದು ತಮಾಷೆಯಾಗಿ ಕಾಲೆಳೆದಿದ್ದಾರೆ. ಹೀಗೆ ಒಂದೇ ಫ್ರೇಮ್ನಲ್ಲಿ ರಶ್ಮಿಕಾ ತಮ್ಮ ಕ್ಲಾಸಿ ಲುಕ್ನಿಂದ ಮೆಚ್ಚುಗೆ ಗಳಿಸಿದರೆ, ವಿಜಯ್ ತಮ್ಮ ಡಿಫರೆಂಟ್ ಪ್ಯಾಂಟ್ ಸ್ಟೈಲ್ನಿಂದ ಸೋಶಿಯಲ್ ಮೀಡಿಯಾದಲ್ಲಿ ನಗೆಚಟಾಕಿಗೆ ಕಾರಣವಾಗಿದ್ದಾರೆ.
'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಈ ಜೋಡಿಗೆ ಬೆಳ್ಳಿಪರದೆಯಾಚೆಗೂ ಅಪಾರ ಅಭಿಮಾನಿ ಬಳಗವಿದೆ. ಇಬ್ಬರೂ ಪ್ರವಾಸಕ್ಕೆ ತೆರಳುತ್ತಿರಲಿ ಅಥವಾ ಏರ್ಪೋರ್ಟ್ನಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳಲಿ, ಕ್ಯಾಮೆರಾ ಕಣ್ಣಿಗೆ ಬಿದ್ದರೆ ಸಾಕು ಇಂಟರ್ನೆಟ್ನಲ್ಲಿ ಟ್ರೆಂಡಿಂಗ್ ಸೃಷ್ಟಿಯಾಗುತ್ತದೆ. ಸಿನಿಮಾ ಕೆಲಸಗಳ ಒತ್ತಡದ ನಡುವೆಯೂ ಈ ಜೋಡಿ ಒಟ್ಟಿಗೆ ಸಾಗುತ್ತಿರುವ ಈ ವಿಡಿಯೋ, ಇಬ್ಬರ ನಡುವಿನ ನೈಜ ಆಪ್ತತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
ಇಲ್ಲಿದೆ ನೋಡಿ ವಿಡಿಯೋ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.