ಮದುವೆ ಬಳಿಕ ರಶ್ಮಿಕಾಗೆ ಬಂತು ಕನ್ನಡ ಹಾಡಿನ ಮೇಲೆ ಪ್ರೀತಿ; ಟ್ರೇನ್ ಹೋದ್ಮೆಲೆ ಟಿಕೆಟ್ ತಗೊಂಡ್ರು ಎಂದ ನೆಟ್ಟಿಗರು!

Published : Mar 06, 2026, 01:33 PM ISTUpdated : Mar 06, 2026, 01:39 PM IST
Rashmika Mandanna Vijay Deverakonda

ಸಾರಾಂಶ

ರಶ್ಮಿಕಾ ಮಂದಣ್ಣ ಅವರನ್ನು 'ಕನ್ನಡ ವಿರೋಧಿ' ಎಂದು ಕೆಲವರು ಟೀಕಿಸುತ್ತಲೇ ಬಂದಿದ್ದರು. ಆದರೆ, ತಮ್ಮ ಬದುಕಿನ ಅತ್ಯಂತ ಪ್ರಮುಖ ಘಟ್ಟವಾದ ಮದುವೆಯ ಸಂದರ್ಭದಲ್ಲಿ ರಶ್ಮಿಕಾ ಉಟ್ಟ ಉಡುಪು, ತೋರಿದ ಲಾಂಛನಗಳು ಮತ್ತು ಬಳಸಿದ ಕನ್ನಡ ಹಾಡು ಅವರ ಮೇಲಿದ್ದ ಎಲ್ಲಾ ಆರೋಪಗಳಿಗೆ ಮೌನವಾಗಿಯೇ ಉತ್ತರಿಸಿದಂತಿದೆ.

ಕನ್ನಡ ವಿರೋಧಿ ಎಂದವರಿಗೆ ಸೈಲೆಂಟ್ ಉತ್ತರ ಕೊಟ್ಟ ರಶ್ಮಿಕಾ ಮಂದಣ್ಣ!

ಬೆಂಗಳೂರು: ದಕ್ಷಿಣ ಭಾರತದ ಚಿತ್ರರಂಗದ 'ಮೋಸ್ಟ್ ಹ್ಯಾಪನಿಂಗ್ ಕಪಲ್' ಎಂದೇ ಗುರುತಿಸಿಕೊಂಡಿದ್ದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಟಾಲಿವುಡ್ ರೌಡಿ ಸ್ಟಾರ್ ವಿಜಯ್ ದೇವರಕೊಂಡ (Vijay Deverakonda) ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಫೆಬ್ರವರಿ 26ರಂದು ರಾಜಸ್ಥಾನದ ಅರಮನೆಯಲ್ಲಿ ಅತ್ಯಂತ ಅದ್ದೂರಿಯಾಗಿ ಜರುಗಿದ ಈ ವಿವಾಹ ಮಹೋತ್ಸವದ ಚಿತ್ರಗಳು ಇಂದಿಗೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿವೆ. ಆದರೆ, ಮದುವೆಯ ನಂತರ ನಡೆದ ಆರತಕ್ಷತೆಯಲ್ಲಿ ರಶ್ಮಿಕಾ ಮಂದಣ್ಣ ತೋರಿದ 'ಕನ್ನಡ ಪ್ರೇಮ' ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಮೈಸೂರು ರೇಷ್ಮೆಯಲ್ಲಿ ಮಿಂಚಿದ ತೆಲಂಗಾಣದ ಸೊಸೆ:

ಮಾರ್ಚ್ 4ರಂದು ನಡೆದ ಅದ್ದೂರಿ ಆರತಕ್ಷತೆ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಅವರ ಉಡುಪಿನ ಆಯ್ಕೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ರಶ್ಮಿಕಾ ತೆಲಂಗಾಣದ ಮನೆಗೆ ಸೊಸೆಯಾಗಿ ಹೋಗಿದ್ದರೂ, ತಮ್ಮ ಮೂಲವನ್ನು ಮಾತ್ರ ಮರೆತಿಲ್ಲ. ಈ ವಿಶೇಷ ದಿನದಂದು ಅವರು ಕರ್ನಾಟಕದ ಹೆಮ್ಮೆಯ 'ಮೈಸೂರು ಸಿಲ್ಕ್' ಸೀರೆಯನ್ನು ಉಟ್ಟು ಕಂಗೊಳಿಸಿದರು. ಅಷ್ಟೇ ಅಲ್ಲದೆ, ಆ ಸೀರೆಯ ಮೇಲೆ ಕರ್ನಾಟಕ ಸರ್ಕಾರದ ಲಾಂಛನವಾದ 'ಗಂಡಭೇರುಂಡ' ಚಿತ್ರದ ಎಂಬ್ರಾಯ್ಡರಿ ಇದ್ದದ್ದು ಕನ್ನಡಿಗರ ಅಭಿಮಾನವನ್ನು ಇಮ್ಮಡಿಗೊಳಿಸಿದೆ.

ಕೊಡವ ಸಂಸ್ಕೃತಿಯ ಅನಾವರಣ:

ಕೇವಲ ಸೀರೆಯಷ್ಟೇ ಅಲ್ಲ, ರಶ್ಮಿಕಾ ಧರಿಸಿದ್ದ ರವಿಕೆಯ (Blouse) ವಿನ್ಯಾಸದಲ್ಲೂ ಒಂದು ವಿಶೇಷತೆ ಇತ್ತು. ಕೊಡಗಿನ ಕುವರಿಯಾದ ರಶ್ಮಿಕಾ, ತಮ್ಮ ಸಮುದಾಯದ ಸಂಪ್ರದಾಯವನ್ನು ಬಿಂಬಿಸುವಂತೆ ರವಿಕೆಯ ಹಿಂಭಾಗದಲ್ಲಿ ಕೊಡವರ ಪವಿತ್ರ ಲಾಂಛನಗಳಾದ 'ಪಿಚೆ ಕತ್ತಿ' ಮತ್ತು 'ಬಂದೂಕಿನ' ಚಿತ್ರಗಳನ್ನು ಬಿಡಿಸಿದ್ದರು. ಈ ಮೂಲಕ ತಾವು ಎಲ್ಲಿಗೇ ಹೋದರೂ ತಮ್ಮ ಕೊಡವ ಸಂಸ್ಕೃತಿಯನ್ನು ಎದೆಯ ಮೇಲೆ ಹೊತ್ತು ನಡೆಯುತ್ತೇನೆ ಎಂಬ ಸಂದೇಶವನ್ನು ರಶ್ಮಿಕಾ ಸಾರಿದ್ದಾರೆ.

ವೈರಲ್ ಆಯ್ತು 'ಏಳಮ್ಮ ತುಳಸಿ' ಮ್ಯೂಸಿಕ್:

ಇವೆಲ್ಲದರ ನಡುವೆ ರಶ್ಮಿಕಾ ಹಂಚಿಕೊಂಡಿರುವ ಇನ್‌ಸ್ಟಾಗ್ರಾಂ ವಿಡಿಯೋವಂತೂ ಈಗ ಟ್ರೆಂಡಿಂಗ್ ಲಿಸ್ಟ್‌ನಲ್ಲಿದೆ. ತಮ್ಮ ಮದುವೆಯ ಸುಂದರ ಕ್ಷಣಗಳ ವಿಡಿಯೋಗೆ ರಶ್ಮಿಕಾ ಹಿನ್ನೆಲೆ ಸಂಗೀತವಾಗಿ ಬಳಸಿಕೊಂಡಿರುವುದು ಪುರಂದರ ದಾಸರ ರಚನೆಯ 'ಏಳಮ್ಮ ತುಳಸಿ' ಎಂಬ ಕನ್ನಡ ಹಾಡನ್ನು! ಇತ್ತೀಚೆಗೆ ಯುವ ಸಂಗೀತ ನಿರ್ದೇಶಕ ಕೆ. ಸುಮೇಧ್ ಅವರು ಅತ್ಯಂತ ಆಧುನಿಕವಾಗಿ ಮತ್ತು ಮಧುರವಾಗಿ ಸಂಯೋಜಿಸಿರುವ ಈ ಹಾಡು ಈಗಾಗಲೇ ಯೂಟ್ಯೂಬ್‌ನಲ್ಲಿ 70 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದು ದಾಖಲೆ ಬರೆದಿದೆ. ಇದೇ ಹಾಡನ್ನು ರಶ್ಮಿಕಾ ತಮ್ಮ ಲೈಫ್‌ನ ಅತಿ ದೊಡ್ಡ ಸಂಭ್ರಮಕ್ಕೆ ಬಳಸಿರುವುದು ವಿಶೇಷ.

 

 

ಟೀಕಾಕಾರರಿಗೆ ತಕ್ಕ ಉತ್ತರ:

ಕಳೆದ ಕೆಲವು ವರ್ಷಗಳಿಂದ ರಶ್ಮಿಕಾ ಮಂದಣ್ಣ ಅವರನ್ನು 'ಕನ್ನಡ ವಿರೋಧಿ' ಎಂದು ಕೆಲವರು ಟೀಕಿಸುತ್ತಲೇ ಬಂದಿದ್ದರು. ಆದರೆ, ತಮ್ಮ ಬದುಕಿನ ಅತ್ಯಂತ ಪ್ರಮುಖ ಘಟ್ಟವಾದ ಮದುವೆಯ ಸಂದರ್ಭದಲ್ಲಿ ರಶ್ಮಿಕಾ ಉಟ್ಟ ಉಡುಪು, ತೋರಿದ ಲಾಂಛನಗಳು ಮತ್ತು ಬಳಸಿದ ಕನ್ನಡ ಹಾಡು ಅವರ ಮೇಲಿದ್ದ ಎಲ್ಲಾ ಆರೋಪಗಳಿಗೆ ಮೌನವಾಗಿಯೇ ಉತ್ತರಿಸಿದಂತಿದೆ. ಹೊರರಾಜ್ಯದಲ್ಲಿ ನೆಲೆಸಿದರೂ ತನ್ನ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಮರೆಯದ ರಶ್ಮಿಕಾ ಅವರ ಈ ನಡೆಗೆ ಈಗ ಕರ್ನಾಟಕದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ, ವಿಜಯ್ ಮತ್ತು ರಶ್ಮಿಕಾ ಜೋಡಿ ಈಗ ಬಾಲಿವುಡ್‌ನಿಂದ ಹಿಡಿದು ಸ್ಯಾಂಡಲ್‌ವುಡ್‌ವರೆಗೆ ಹಾರ್ಟ್ ಆಫ್ ದಿ ಟೌನ್ ಆಗಿ ಮಿಂಚುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Virosh ರೋಚಕ ಸ್ಟೋರಿ: ಅಂದು ಜೀವನದ ಮೊದಲ ಗೋಲ್ಡ್​ಮೆಡಲ್​ ಹಾಕಿದ, ಇಂದು ಚಿನ್ನದ ತಾಳಿ ಕಟ್ಟಿದ!
ಡಿವೋರ್ಸ್‌ ಪಡೆದು ಬೇರೆಯವರೊಂದಿಗೆ ಲವ್‌ನಲ್ಲಿದ್ರೂ ಈ ಮಾಜಿ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಮಾಡ್ತಿರೋದೇನು?