ಕನ್ನಡಿಗರ ವಿರೋಧದ ನಡುವೆಯೂ 5 ಥಿಯೇಟರ್‌ನಲ್ಲಿ ಡಿಯರ್ ಕಾಮ್ರೇಡ್‌ ರಿಲೀಸ್!

By Web Desk  |  First Published Jul 27, 2019, 3:22 PM IST

ಪಂಚಭಾಷೆಯ ಲಿಲ್ಲಿ-ಬಾಬಿ ಕಾಂಬಿನೇಷನ್‌ 'ಡಿಯರ್ ಕಾಮ್ರೇಡ್‌' ಕರ್ನಾಟಕದಲ್ಲಿ ರಿಲೀಸ್ ಮಾಡಲು ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರೂ 5 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.


ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಟೈಂ ಸರಿ ಇಲ್ವೋ ಏನೋ ಗೊತ್ತಿಲ್ಲ ಬಟ್‌ ಇಡುವ ಪ್ರತಿವೊಂದು ಹೆಜ್ಜೆಯನ್ನೂ ಅಭಿಮಾನಿಗಳು ಗಮನಿಸುತ್ತಿದ್ದಾರೆ. ಅದರಲ್ಲೂ ‘ಡಿಯರ್ ಕಾಮ್ರೇಡ್‌’ ಹೆಸರು ಕೇಳಿದರೆ ಸಾಕು ಫುಲ್ ಗರಂ ಆಗುತ್ತಾರೆ ಕನ್ನಡ ಪ್ರೇಮಿಗಳು.

ಕನ್ನಡ ಚಿತ್ರರಂಗದಿಂದಲೇ ಸಿನಿ ಜರ್ನಿ ಶುರು ಮಾಡಿದ ರಶ್ಮಿಕಾ ಮಂದಣ್ಣ ಖಾಸಗಿ ವಾಹಿನಿ ಸಂದರ್ಶನದಲ್ಲಿ ‘ಕನ್ನಡ ಮಾತನಾಡುವುದು ಸ್ವಲ್ಪ ಕಷ್ಟವೆಂದಿದ್ದಾರೆ. ಅವರ ಮಾತು ಕನ್ನಡಿಗರಿಗೆ ಕೋಪ ತಂದಿದೆ.

Latest Videos

undefined

ಕನ್ನಡಿಗರನ್ನು ಎದುರಾಕ್ಕೊಂಡ ರಶ್ಮಿಕಾ; ಡಿಯರ್ ಕಾಮ್ರೆಡ್ ಫೋಟೋಗಳಿವು

ಡಿಯರ್ ಕಾಮ್ರೇಡ್‌ ಚಿತ್ರವನ್ನು ಕನ್ನಡಕ್ಕಿಂತ ಹೆಚ್ಚಾಗಿ ತೆಲುಗಿನಲ್ಲಿ ರಿಲೀಸ್ ಮಾಡಬೇಕೆಂದು ನಿರ್ಧಾರ ಮಾಡಿಕೊಂಡಿದ್ದರೂ ಕರ್ನಾಟಕದಲ್ಲಿ 200 ಸ್ಕ್ರೀನ್‌ ಸಿಕ್ಕಿತ್ತು. ಆದರೆ ಕನ್ನಡ ಸಂಘಟನೆಗಳು ರಿಲೀಸ್ ಮಾಡಲು ತಡೆಯಾಚಿಸಿದ್ದು ಕೇವಲ 5 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿತ್ತು. ಪೀಣ್ಯದ ಭಾರತಿಯಲ್ಲಿ ಒಂದು ಶೋ, ಬನಶಂಕರಿಯ ಕಾಮಾಕ್ಯದಲ್ಲಿ ಎರಡು ಶೋ, ಜಿಗಿಣಿಯ ನಂದೀಶ್ವರದಲ್ಲಿ ಒಂದು ಶೋ, ಕೆಂಗೇರಿಯ ವೆಂಕಟೇಶ್ವರದಲ್ಲಿ ಎರಡು ಶೋ ಹಾಗೂ ಸಿಂಗಾಪುರದ ವೈನಿಧಿಯಲ್ಲಿ ಒಂದು ಶೋ ಪ್ರದರ್ಶನವಾಗಿದೆ.

ನಿನ್ನೆ ಅಂದರೆ ಜುಲೈ 26 ರಂದು ಡಿಯರ್ ಕಾಮ್ರೆಡ್ ದೇಶಾದ್ಯಂತ ರಿಲೀಸ್ ಆಗಿದೆ. ಆದರೆ ರಶ್ಮಿಕಾ ಹೇಳಿಕೆಯಿಂದ ಕನ್ನಡಪರ ಸಂಘಟನೆಗಳು ರಿಲೀಸ್ ಗೆ ಅವಕಾಶ ನೀಡಿರಲಿಲ್ಲ. 5 ಥಿಯೇಟರ್ ನಲ್ಲಿ ರಿಲೀಸ್ ಆದರೂ ಪ್ರತಿಭಟನಾಕಾರರ ಒತ್ತಾಯದಿಂದ ಅಲ್ಲಿಗೆ ನಿಲ್ಲಿಸಬೇಕಾಯಿತು.

 

click me!