
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅಕೌಂಟ್ಗೆ ಮತ್ತೊಂದು ಮೆಗಾಪ್ರಾಜೆಕ್ಟ್ ಸೇರಿಕೊಂಡಿದೆ. ಹೃತಿಕ್ ರೋಶನ್ (Hrithik Roshan) ನಟನೆಯ ಸೂಪರ್ ಹಿಟ್ ಸೂಪರ್ ಹೀರೋ ಕ್ರಿಶ್ ಸರಣಿಯ ಹೊಸ ಮೂವಿಗೆ ರಶ್ಮಿಕಾ ಎಂಟ್ರಿ ಕೊಟ್ಟಿದ್ದಾರೆ. ಬಾಲಿವುಡ್ ಹ್ಯಾಂಡಸಮ್ ಹಂಕ್ ಹೃತಿಕ್ ಜೊತೆ ಕಿರಿಕ್ ಬ್ಯೂಟಿ ಸ್ಕ್ರೀನ್ ಶೇರ್ ಮಾಡಲಿದ್ದಾರೆ.
ಯೆಸ್ ಕಿರಿಕ್ ಬ್ಯೂಟಿ ರಶ್ಮಿಕಾ ಮತ್ತೊಂದು ಬಿಗ್ ಪ್ರಾಜೆಕ್ಟ್ ಸೈನ್ ಮಾಡಿದ್ದಾರೆ. ಹೃತಿಕ್ ರೋಷನ್ ನಟನೆಯ ಬಾಲಿವುಡ್ ಸೂಪರ್ ಹೀರೋ ಸೀರೀಸ್ ಕ್ರಿಶ್ ನಲ್ಲಿ ರಶ್ಮಿಕಾ ನಟಿಸೋದು ನಿಕ್ಕಿಯಾಗಿದೆ. ಫಾರ್ ದಿ ಫಸ್ಟ್ ಟೈಂ ಬಾಲಿವುಡ್ ಹ್ಯಾಂಡಸಮ್ ಹಂಕ್ ಹೃತಿಕ್ ರೋಷನ್ ಜೊತೆಗೆ ರಶ್ಮಿಕಾ ಸ್ಕ್ರೀನ್ ಶೇರ್ ಮಾಡ್ತಾ ಇದ್ದಾರೆ.
ಅಸಲಿಗೆ ಕ್ರಿಶ್ ಇಂಡಿಯನ್ ಸಿನಿಇಂಡಸ್ಟ್ರಿಯ ಮೊದಲ ಸೂಪರ್ ಹೀರೋ. 2003ರಲ್ಲಿ ಬಂದ ಕೋಯಿ ಮಿಲ್ ಗಯಾ ಮೂವಿಯ ಸೂಪರ್ ಸಕ್ಸಸ್ ನಂತರ, ಆ ಸ್ಟೋರಿಯನ್ನ ಮತ್ತಷ್ಟು ಹಿಗ್ಗಿಸಿ ಕ್ರಿಶ್ ಅನ್ನೋ ಸೂಪರ್ ಹೀರೋನ ಕ್ರಿಯೇಟ್ ಮಾಡಿದ್ರು ನಿರ್ದೇಶಕ ರಾಕೇಶ್ ರೋಶನ್.
ಹೃತಿಕ್ ಸೂಪರ್ ಹೀರೋ ಆಗ್ಲಿಕ್ಕೆ ಹೇಳಿ ಮಾಡಿಸಿದ ನಟ. ಹೃತಿಕ್ ಪರ್ಸನಾಲಿಟಿಗೆ ಎಂಥಾ ಸಾಹಸ ಮಾಡಿದ್ರೂ ರಿಯಲ್ ಅನ್ನಿಸುತ್ತೆ. ಅಂತೆಯೇ 2006ರಲ್ಲಿ ಬಂದ ಕ್ರಿಶ್ ಸೂಪರ್ ಡೂಪರ್ ಹಿಟ್ ಆಗಿತ್ತು.
ಇನ್ನೂ 2013 ರಲ್ಲಿ 3ಡಿ ತಂತ್ರಜ್ಞಾನದೊಂದಿಗೆ ಕ್ರಿಶ್-3 ತೆರೆಗೆ ಬಂದಿತ್ತು. ಹೃತಿಕ್ ಪ್ರಿಯಾಂಕಾ ಛೋಪ್ರಾ, ಕಂಗನಾ ರಣೌತ್ ನಟಿಸಿದ ಆ ಸಿನಿಮಾ ಕೂಡ ಬಾಕ್ಸಾಫೀಸ್ನಲ್ಲಿ ಧೂಳ್ ಎಬ್ಬಿಸಿತ್ತು. ಮತ್ತೀಗ ಕ್ರಿಶ್ -4 ಶುರುವಾಗಿದೆ.
ಯೆಸ್ ರಶ್ಮಿಕಾನ ಎಲ್ಲರೂ ಲಕ್ಕಿ ಕ್ವೀನ್ ಅಂತಾರೆ. ರಶ್ಮಿಕಾ ನಾಯಕಿಯಾದ್ರೆ ಸಿನಿಮಾ ಸಕ್ಸಸ್ ಖಚಿತ ಅಂತಾರೆ. ಅಂತೆಯೇ ಸದ್ಯ ಹೃತಿಕ್ ಸಾಲು ಸಾಲು ಸೋಲುಗಳ ಸುಳಿಯಲ್ಲಿ ಸಿಲುಕಿರೋ ವಿಷ್ಯ ಕೂಡ ಗೊತ್ತೇ ಇದೆ. ಹೃತಿಕ್ ನಟಿಸಿದ ದೊಡ್ಡ ಬಜೆಟ್ನ ಫೈಟರ್ ಮತ್ತು ವಾರ್-2 ಸಿನಿಮಾಗಳು ನಿರೀಕ್ಷೆಗೆ ತಕ್ಕಂಥ ಯಶಸ್ಸು ಕಾಣಲಿಲ್ಲ.
ಇತ್ತ ರಶ್ಮಿಕಾ ಮಾತ್ರ ಸಾಲು ಸಾಲು ಹಿಟ್ ಕೊಡ್ತಾ ಸಕ್ಸಸ್ ಅಲೆಯಲ್ಲಿ ತೇಲ್ತಾ ಇದ್ದಾರೆ. ಶ್ರೀವಲ್ಲಿ ತನ್ನ ಲಕ್ನಾ ಹೃತಿಕ್ಗೂ ತಂದುಕೊಡ್ತಾರಾ? ಸದ್ಯಕ್ಕೆ ಬಾಲಿವುಡ್ ಫ್ಲಾಪ್ ಹೀರೋ ಎನ್ನಿಸಿಕೊಂಡಿರುವ ನಟ ಹೃತಿಕ್ ರೋಶನ್ ಅವರನ್ನು ‘ಲಕ್ಕೀ ಹೀರೋಯಿನ್’ ಎನ್ನಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಸದ್ಯ ಕೈಹಿಡಿದು ಮೇಲೆತ್ತಬಹುದು ಎನ್ನಲಾಗುತ್ತಿದೆ. ಮುಂದಿನದನ್ನು ಕಾದು ನೋಡಬೇಕಷ್ಟೇ! ಅನ್ನೋದನ್ನ ಕಾದುನೋಡಬೇಕಿದೆ.
ಸದ್ಯ ಕ್ರಿಶ್-4 ಸ್ಕ್ರೀನ್ ಪ್ಲೇ, ಬಜೆಟ್, ಕಾಸ್ಟಿಂಗ್ ಎಲ್ಲವೂ ಫೈನಲ್ ಆಗಿದೆ. 2026ರಿಂದ ಚಿತ್ರೀಕರಣ ಆರಂಭವಾಗಲಿದ್ದು, 2027ರಲ್ಲಿ ಕ್ರಿಶ್-4 ರಿಲೀಸ್ ಆಗಲಿದೆ. ಅಲ್ಲಿಗೆ ಹೃತಿಕ್ ಅಂಡ್ ರಶ್ಮಿಕಾ ಕೆಮೆಸ್ಟ್ರಿ ನೋಡಲಿಕ್ಕೆ ಇನ್ನೂ ಎರಡು ವರ್ಷ ಕಾಯಬೇಕಿದೆ.
ಹೆಚ್ಚಿನ ಮಾಹಿತಿಗೆ ‘ಸಿನಿಮಾ ಹಂಗಾಮ’ ವಿಡಿಯೋ ನೋಡಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.