
ಇನ್‌ಸ್ಟಾದಲ್ಲಿ ಲೈವ್ ಬಂದ ನಟ ಆಯುಷ್ಮಾನ್ ಖುರಾನ ನಟ ರಣವೀರ್ ಸಿಂಗ್ ಅವರನ್ನೂ ಲೈವ್‌ಗೆ ಸೇರಿಸಿಕೊಳ್ಳೋಕೆ ಡಿಸೈಡ್ ಮಾಡಿದ್ರು. ರಣವೀರ್ ಲೈವ್‌ಗೆ ಬಂದ್ರೂ ಬೇಗನೆ ಎಕ್ಸಿಟ್ ಆದ್ರು.
ಲಾಕ್‌ಡೌನ್ ನಂತ್ರ ಮನೆಯಲ್ಲೇ ಇರುವ ನಟ ಆಯುಷ್ಮಾನ್ ಖುರಾನ್ ತಮ್ಮ ಫ್ಯಾನ್ ಜೊತೆ ಮಾತಾಡೋಕೆ ಡಿಸೈಡ್ ಮಾಡಿ ಇನ್‌ಸ್ಟಾ ಲೈವ್ ಬಂದಿದ್ರು. ಹಾಗೆಯೇ ನಟ ರಣ್‌ವೀರ್ ಸಿಂಗ್ ಅವ್ರನ್ನೂ ಸೇರಿಸಿದ್ರು.
ದೀಪಿಕಾ ರಣವೀರ್ ತಿಂಗಳ ಆಹಾರದ ಖರ್ಚಿಷ್ಟು... !
ಆಗಷ್ಟೇ ಎದ್ದಿದ್ದ ರಣವೀರ್ ಸಿಂಗ್ ಲೈವ್‌ಗೆ ಜಾಯಿನ್ ಆದರೂ ನಿದ್ದೆ ಮಂಪರಿನಲ್ಲಿಯೇ ಮಾತನಾಡಿದ್ದಾರೆ. ತಮ್ಮ ಉದ್ದದ ಕೂದಲನ್ನು ಕೈಯಿಂದ ಆಡಿಸಿ ಸ್ಮೈಲ್ ಕೊಟ್ಟಾಗ ಆಯುಷ್ಮಾನ್ ಕೂಡಾ ತಮ್ಮ ಹ್ಯಾಟ್ ತೆಗೆದಿದ್ದಾರೆ.
ಪತಿ ನಂಬರ್ ಹಿಂಗೆಲ್ಲಾ ಸೇವ್ ಮಾಡ್ಬೋದು; ದೀಪಿಕಾ ಪಡುಕೋಣೆ ಮಾಡಿರೋದು ನೋಡಿ!
ಇಬ್ಬರೂ ಗಟ್ಟಿಯಾಗಿ ಜೋರಾಗಿ ನಗುತ್ತಾ ಹರಟುತ್ತಿದ್ದಾಗ ಕ್ಯಾಮೆರಾದಿಂದ ಆಚೆ ನೋಡಿದ ರಣವೀರ್ ಸಿಂಗ್ ಗಾಬರಿಬಿದ್ದಿದ್ದಾರೆ. ತಕ್ಷಣ 'ಓಕೆ ಬಾಯ್ ಬಾಯ್ ಬಾಯ್. ಅತ್ತಿಗೆ ಬೈತಿದ್ದಾರೆ. ಅತ್ತಿಗೆಯೂ ಝೂಮ್ ಕಾಲ್‌ನಲ್ಲಿರೋದ್ರಿಂದ ಗಲಾಟೆ ಮಾಡಬೇಡ ಎನ್ನುತ್ತಿದ್ದಾರೆ' ಎಂದು ಹೇಳಿದ್ದಾರೆ. ಈ ಲವ್ ಯೂ, ಐ ಮಿಸ್‌ಯೂ ಎಂದು ಆಯುಷ್ಮಾನ್ ಹೇಳ್ತಿದ್ದಂತೆ ಇ ಲವ್ ಯೂ ಆಯುಷ್ ಎಂದು ರಣವೀರ್ ಲೈವ್‌ನಿಂದ ಹೊರ ಬಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.