ಲೀಕ್ ಆಯ್ತು ರಣವೀರ್ ದೀಪಿಕಾ ಮದುವೆಯ ಮೆನು: ಇಲ್ಲಿದೆ ಖಾದ್ಯಗಳ ವಿವರ

Published : Nov 12, 2018, 11:21 AM IST
ಲೀಕ್ ಆಯ್ತು ರಣವೀರ್ ದೀಪಿಕಾ ಮದುವೆಯ ಮೆನು: ಇಲ್ಲಿದೆ ಖಾದ್ಯಗಳ ವಿವರ

ಸಾರಾಂಶ

ರಣವೀರ್ ಹಾಗೂ ದೀಪಿಕಾ ಮದುವೆ ಸದ್ಯ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಈ ಮದುವೆ ಗಂಡು ಹಾಗೂ ಹೆಣ್ಣನ್ನು ಹೊರತುಪಡಿಸಿ ಇತರರಿಗೂ ವಿಶೇಷವಾಗಿದೆ. ಇದಕ್ಕೆ ಕಾರಣ ಮದುವೆಗೆ ತಯಾರಾಗುವ ಖಾದ್ಯಗಳು. ಬಹುಶಃ ಮದುವೆಯ ಮೆನುವಿನಲ್ಲಿರುವ ಖಾದ್ಯಗಳು ಮತ್ತೊಮ್ಮೆ ತಿನ್ನಲು ಸಿಗುತ್ತದೋ ಇಲ್ಲವೋ ಎಂದು ಹೇಳಲು ಸಾಧ್ಯವಿಲ್ಲ ಯಾಕೆಂದರೆ ಮೆನುವಿನಲ್ಲಿ ಸ್ವಾದಿಷ್ಟ ತಿಂಡಿ ತಿನಿಸುಗಳಿವೆ ಎನ್ನಲಾಗಿದೆ. ಸದ್ಯ ಈ ಮದುವೆಗೆ ತಯಾರಾಗುವ ಊಟ ಹಾಗೂ ತಿಂಡಿ ತಿನಿಸುಗಳ ವಿವರ ಬಹಿರಂಗವಾಗಿದ್ದು, ಈ ಕುರಿತಾದ ಮಾಹಿತಿ ಇಲ್ಲಿ ನೀಡಲಾಗಿದೆ.

ಬಾಲಿವುಡ್ ಇಂಡಸ್ಟ್ರಿಯ ಅತ್ಯಂತ ಚಾರ್ಮಿಂಗ್ ನಟ ಅಂದರೆ ರಣವೀರ್ ಸಿಂಗ್ ಮದುಮಗ ಆಗಲಿದ್ದಾರೆ. ಈಗಾಗಲೇ ಇವರ ಹೃದಯ ಕದ್ದಿರುವ ಬಾಲಿವುಡ್‌ನ ಡಿಂಪಲ್ ಕ್ವೀನ್ ದೀಪಿಕಾ ಹೆಂಡತಿಯಾಗಿ ಮನೆ ಬೆಳಗಲಿದ್ದಾರೆ. ರಣವೀರ್ ಹಾಗೂ ದೀಪಿಕಾ ಪಡುಕೋಣೆಗೆ ಈ ಮದುವೆ ಅದೆಷ್ಟು ವಿಶೇಷವೋ, ಮದುವೆಗ ಸಂಭ್ರಮದಲ್ಲಿ ಪಾಲ್ಗೊಳ್ಳುವವರಿಗೂ ಅಷ್ಟೇ ವಿಶೇಷವಾಗಿದೆ.

ರಣವೀರ್ ಹಾಗೂ ದೀಪಿಕಾ ಮದುವೆ ಸದ್ಯ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಈ ಮದುವೆ ಗಂಡು ಹಾಗೂ ಹೆಣ್ಣನ್ನು ಹೊರತುಪಡಿಸಿ ಇತರರಿಗೂ ವಿಶೇಷವಾಗಿದೆ. ಇದಕ್ಕೆ ಕಾರಣ ಮದುವೆಗೆ ತಯಾರಾಗುವ ಖಾದ್ಯಗಳು. ಬಹುಶಃ ಮದುವೆಯ ಮೆನುವಿನಲ್ಲಿರುವ ಖಾದ್ಯಗಳು ಮತ್ತೊಮ್ಮೆ ತಿನ್ನಲು ಸಿಗುತ್ತದೋ ಇಲ್ಲವೋ ಎಂದು ಹೇಳಲು ಸಾಧ್ಯವಿಲ್ಲ ಯಾಕೆಂದರೆ ಮೆನುವಿನಲ್ಲಿ ಸ್ವಾದಿಷ್ಟ ತಿಂಡಿ ತಿನಿಸುಗಳಿವೆ ಎನ್ನಲಾಗಿದೆ. 

ಮದುವೆ ದಿನಾಂಕ ಸಮೀಪಿಸುತ್ತಿದ್ದಂತೆಯೇ ಮೆನು ಕಾರ್ಡ್‌ನಲ್ಲಿರುವ ಖಾದ್ಯಗಳ ವಿವರಗಳೂ ಬಹಿರಂಗವಾಗತೊಡಗಿವೆ. ಮದುವೆ ಇಟಲಿಯಲ್ಲಿರುವುದರಿಂದ ಮೆನುವಿನಲ್ಲಿ ಕಾಂಟಿನೆಂಟಲ್ ಹಾಗೂ ಇಟಾಲಿಯನ್ ಎರಡೂ ಬಗೆಯ ಖಾದ್ಯಗಳಿರಲಿವೆ. ಇದರೊಂದಿಗೆ ಪಂಜಾಬಿ ಹಾಗೂ ದಕ್ಷಿಣ ಭಾರತೀಯ ಅತಿಥಿಗಳಿಗೂ ವಿಶೇಷ ಊಟವಿರಲಿದೆ. ಹೀಗಿರುವಾಗ ಪಂಜಾಬಿ ಮೆನುವಿನಲ್ಲಿ ದಾಲ್ ಮಖ್ನೀ, ಶಾಹೀ ಪನೀರ್, ದಹೀ ಭಲ್ಲೆ ಕೂಡಾ ಇರುತ್ತದೆ ಎನ್ನಲಾಗಿದೆ. ಮೇನ್ ಕೋರ್ಸ್ ಹೊರತುಪಡಿಸಿ ಸಿಹಿ ತಿಂಡಿಗಳಿಗೂ ವಿಶೇಷ ವ್ಯವಸ್ಥೆ ಮಾಡಲಾಗಿದೆಯಂತೆ.

ಸಿಹಿ ತಿಂಡಿ ಹಾಗೂ ರಣವೀರ್ ದೀಪಿಕಾ ಮದುವೆಯ ವೆಡ್ಡಿಂಗ್ ಕೇಕ್ ಮಾಡುವ ಜವಾಬ್ದಾರಿ ಸ್ವಿಟ್ಜರ್ಲ್ಯಾಂಡ್‌ನಿಂದ ಬರುವ ಬಾಣಸಿಕನಿಗೆ ನೀಡಲಾಗಿದೆ. ಹಾಗಾದ್ರೆ ಈ ಮದುವೆಯ ಊಟ ಅದೆಷ್ಟು ಸ್ವಾದಿಷ್ಟವಾಗಿರಲಿದೆ ಎಂಬುವುದನ್ನು ನಾವು ಊಹಿಸಿಕೊಳ್ಳಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?