
ಬಾಲಿವುಡ್‌ನಲ್ಲಿ ಮದುವೆ ಸಂಭ್ರಮ ಹೆಚ್ಚಾಗುತ್ತಿದೆ. ಒಬ್ಬರಾದಮೇಲೊಬ್ಬರು ನಾಲ್ವರಾಗುತ್ತಿದ್ದಾರೆ. ಸೋನಮ್ ಕಪೂರ್, ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕಾ ಛೋಪ್ರಾ...ಇದೀಗ ಸುಶ್ಮಿತಾ ಸೇನ್ ಸಹ ಮದುವೆಯಾಗೋ ಮನಸ್ಸು ಮಾಡುತ್ತಿದ್ದಾರೆ.
ಹೌದು, ಎಲ್ಲೆಡೆ ನೋಡಿದರೂ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆ ಕಾಣಿಸುತ್ತಿರುವ ಈ ವಿಶ್ವ ಸುಂದರಿ ಇದೀಗ ಹಸೆಮಣೆ ಏರಲು ನಿರ್ಧರಿಸಿದ್ದಾರೆ. ಇಬ್ಬರೂ ಪರಿಚಿತರಾಗಿ, ಹೆಚ್ಚು ದಿನಗಳೇನೂ ಆಗಿಲ್ಲ. 2 ತಿಂಗಳ ಹಿಂದೆಯಷ್ಟೇ ಫ್ಯಾಶನ್ ಶೋನಲ್ಲಿ ಭೇಟಿಯಾಗಿದ್ದರು. ಅಲ್ಲಿ ಬೆಳೆದ ಸ್ನೇಹ ಪ್ರೀತಿಯಾಗಿ ಬೆಳೆದಿದೆ. ಈಗ ಆ ಪ್ರೀತಿ ಮುಂದಿನ ವರ್ಷ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.
ಅಷ್ಟೇ ಅಲ್ಲದೆ ಸುಷ್ಮಿತಾ ಮಕ್ಕಳೂ ಈ ಬಾಂಧವ್ಯಕ್ಕೆ ಒಪ್ಪಿದ್ದಾರಂತೆ. ರೋಹ್ಮನ್-ಸುಶ್ಮಿತಾ ಮಕ್ಕಳೊಟ್ಟಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಜಾಲತಾಣದಲ್ಲಿಯೂ ಹರಿದಾಡುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.