
ಚೆನ್ನೈನ ಒಡಪಳನಿ ಎನ್ನುವ ಬಡಾವಣೆಯಲ್ಲಿ ಕನ್ನಡದ ನಟ ಹುಚ್ಚ ವೆಂಕಟ್ ಅವರು ಹುಚ್ಚನ ರೀತಿ ತಿರುಗುತ್ತಿರುವ ದೃಶ್ಯಗಳನ್ನು ‘ರಾಂಧವ’ ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಂತರ ಅವರ ರಕ್ಷಣೆ ಮಾಡಲಾಗಿತ್ತು. ಯಶವಂತಪುರದ ಮನೆಗೂ ಹಿಂತಿರುಗಿದ್ದರು. ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ಇನ್ನೊಂದು ಕಿರಿಕ್ ಮಾಡಿಕೊಂಡಿದ್ದಾರೆ.
ಮಡಿಕೇರಿಯಲ್ಲಿ ವೆಂಕಟ್ ಹುಚ್ಚಾಟ...ಕಾರಿನ ಗಾಜು ಪುಡಿ ಪುಡಿ
ಗುರುವಾರ ಸಂಜೆ ಹುಚ್ಚ ವೆಂಕಟ್ ಮಡಿಕೇರಿಯ ಡಿಪೋ ಬಳಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಆಗಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಅಲ್ಲಿ ನಾಪೋಕ್ಲುವಿನ ದಿಲೀಪ್ ಎಂಬುವವರು ಕಾರು ನಿಲ್ಲಿಸಿ ಎಟಿಎಂ ಗೆ ತೆರಳಿದ್ದರು. ವಾಪಸ್ ಬಂದಾಗ, ‘ನಾನು ಯಾರು ಗೊತ್ತಾ’ ಎಂದಿದ್ದಾರೆ. ದಿಲೀಪ್, ‘ಹಾಂ ನೀವು ವೆಂಕಟ್ ಅಲ್ವಾ’? ಎನ್ನುತ್ತಾರೆ. ಆಗ ವೆಂಕಟ್, ನನಗೆ ಇನ್ನೂ ಒಂದು ಹೆಸರಿನಿಂದ ಕರೆಯುತ್ತಾರೆ ಏನು ಗೊತ್ತಾ ಎಂದು ಮರು ಪ್ರಶ್ನೆ ಇಡುತ್ತಾರೆ. ಗೊತ್ತಿಲ್ಲ ಸಾರ್ ಎಂದಾಗ ದಿಲೀಪ್ ಗೆ ಕೆನ್ನೆಗೆ ಬಾರಿಸುತ್ತಾರೆ. ಅವರ ಕಾರಿನ ಗ್ಲಾಸನ್ನು ಪುಡಿ ಪುಡಿ ಮಾಡುತ್ತಾರೆ. ಇದರಿಂದ ರೊಚ್ಚಿಗೆದ್ದ ಸ್ಥಳಿಯರು ವೆಂಕಟ್ ಗೆ ಹಿಗ್ಗಾಮುಗ್ಗ ಥಳಿಸುತ್ತಾರೆ.
ಮಡಿಕೇರಿಯಲ್ಲಿ ವೆಂಕಟ್ ಹುಚ್ಚಾಟ; ಸ್ಥಳೀಯರಿಂದ ಬಿತ್ತು ಗೂಸಾ!
ಇದೀಗ ಹುಚ್ಚ ವೆಂಕಟ್ ಪರವಾಗಿ ರಾಂಧವ ಭುವನ್ ಪೊನ್ನಣ್ಣ ಮನವಿ ಮಾಡಿದ್ದಾರೆ. ಗೆಳೆಯರೆ ದಯವಿಟ್ಟು ಹುಚ್ಚ ವೆಂಕಟ್ ಅನ್ನು ಎಲ್ಲಿ ಕಂಡರು ಹೊಡೀಬೇಡಿ . ಅವರಿಗೆ ಚಿಕಿತ್ಸೆಯ ಅವಶ್ಯಕತೆ ಇದೆ. ಅವರು ಕೆಟ್ಟವರಲ್ಲ. ಮಾನಸಿಕ ತೊಂದರೆಯಲ್ಲಿರುವವರು . ನನ್ನ ಕಳಕಳಿಯ ವಿನಂತಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.