ಸಿದ್ಧಾರ್ಥ್- ಅಲಿಯಾ ಭಟ್ ಬೇರೆಯಾಗಲು ರಣಬೀರ್ ಕಾರಣಾನಾ?

By Web Desk  |  First Published Aug 22, 2018, 1:18 PM IST

ಅಲಿಯಾ ಭಟ್- ರಣಬೀರ್ ಕಪೂರ್ ಬಿ ಟೌನ್ ನ ಜೋಡಿ ಹಕ್ಕಿಗಳು ಎಂಬುದು ಗೊತ್ತೇ ಇದೆ. ಸಿದ್ಧಾರ್ಥ್ ಮಲೋತ್ರಾ ಜೊತೆ ಮೊದಲು ಕಾಣಿಸಿಕೊಂಡಿದ್ದ ಅಲಿಯಾ ಇದೀಗ ರಣಬೀರ್ ಜೊತೆ ಕಾಣಿಸಿಕೊಳ್ಳಲು ಶುರುವಾದ ಮೇಲೆ ಸಿದ್ದಾರ್ಥ್ ಮಲೋತ್ರಾ ಅಲಿಯಾರನ್ನು ಇಗ್ನೋರ್ ಮಾಡಲು ಶುರು ಮಾಡಿದ್ದಾರೆ. ಅವರಿಬ್ಬರ ನಡುವೆ ಅಷ್ಟಕ್ಕಷ್ಟೇ ಎನ್ನುವಂತಾಗಿದೆ. 


ನವದೆಹಲಿ (ಆ. 22): ಅಲಿಯಾ ಭಟ್- ರಣಬೀರ್ ಕಪೂರ್ ಬಿ ಟೌನ್ ನ ಜೋಡಿ ಹಕ್ಕಿಗಳು ಎಂಬುದು ಗೊತ್ತೇ ಇದೆ. ಸಿದ್ಧಾರ್ಥ್ ಮಲೋತ್ರಾ ಜೊತೆ ಮೊದಲು ಕಾಣಿಸಿಕೊಂಡಿದ್ದ ಅಲಿಯಾ ಇದೀಗ ರಣಬೀರ್ ಜೊತೆ ಕಾಣಿಸಿಕೊಳ್ಳಲು ಶುರುವಾದ ಮೇಲೆ ಸಿದ್ದಾರ್ಥ್ ಮಲೋತ್ರಾ ಅಲಿಯಾರನ್ನು ಇಗ್ನೋರ್ ಮಾಡಲು ಶುರು ಮಾಡಿದ್ದಾರೆ.

ಅವರಿಬ್ಬರ ನಡುವೆ ಅಷ್ಟಕ್ಕಷ್ಟೇ ಎನ್ನುವಂತಾಗಿದೆ. ಸಂಬಂಧ ಮೊದಲಿನಂತಿಲ್ಲ ಎಂದು ಹೇಳಲಾಗಿದೆ. ಇದಕ್ಕೆ ಇತ್ತೀಚಿನ ಘಟನೆಯೇ ಸಾಕ್ಷಿಯಾಗಿದೆ. 

Tap to resize

Latest Videos

ಇತ್ತೀಚಿಗೆ ನಡೆದ ಒಂದು ಸಮಾರಂಭದಲ್ಲಿ ಸಿದ್ಧಾರ್ಥ್ ಅಲಿಯಾ ಕಡೆ ತಿರುಗಿಯೂ ನೋಡಿಲ್ಲವಂತೆ. ಅಲಿಯಾ ನಗಲು ಪ್ರಯತ್ನಿಸಿದರೂ ಸಿದ್ಧಾರ್ಥ್ ಅವರ ಕಡೆ ತಿರುಗಿಯೂ ನೋಡಿಲ್ಲ. ಸಾಕಷ್ಟು ಪಾರ್ಟಿಗಳಿಗೆ, ಸಮಾರಂಭಗಳಿಗೆ ಆಹ್ವಾನಿಸಿದರೂ ಬಂದಿಲ್ಲ. ಅಲಿಯಾ ಮೆಸೇಜ್ ಗಳಿಗೆ ಉತ್ತರಿಸಿಲ್ಲ.  ಒಟ್ಟಿನಲ್ಲಿ ಇಬ್ಬರ ನಡುವೆ ಅಷ್ಟಕ್ಕಷ್ಟೇ ಆಗಿರೋದಂತೂ ಸತ್ಯ.   


 

click me!