ದರ್ಶನ್‌ ವಿರುದ್ಧ ಪೋಸ್ಟ್‌ ಹಾಕಿದ್ದಕ್ಕೆ ಕೆಟ್ಟ ಕಾಮೆಂಟ್‌.. ರಮ್ಯಾ ಟಾಂಗ್‌ಗೆ ದರ್ಶನ್‌ ಫ್ಯಾನ್ಸ್‌ ಥಂಡಾ..?

Published : Jul 27, 2025, 06:37 PM ISTUpdated : Jul 27, 2025, 08:26 PM IST
Ramya Darshan Thoogudeepa

ಸಾರಾಂಶ

ನಟ ದರ್ಶನ್​ಗೆ ದೊಡ್ಡ ಅಭಿಮಾನಿ ಬಳಗ ಇದೆ ಅನ್ನೋದು ಗೊತ್ತೇ ಇದೆ. ತನ್ನ ಅಭಿಮಾನಿಗಳಿಗೆ ದರ್ಶನ್ 'ಸೆಲೆಬ್ರಿಟೀಸ್' ಅಂತಾನೇ ಕರೀತಾರೆ. ಆದ್ರೆ ಈ ಸೆಲೆಬ್ರಿಟೀಸ್ ಈಗ ಸ್ಯಾಂಡಲ್​ವುಡ್​ನ ಕೆಲ ಸೆಲೆಬ್ರಿಟೀಸ್​​ಗೆ ಇನ್ನಿಲ್ಲದ ಕಾಟ ಕೊಡ್ತಾ ಇದ್ದಾರೆ.

'ದಿ ಡೆವಿಲ್; ನಟ ದರ್ಶನ್​ (Darshan Thoogudeepa) ಕೇಸ್ ಬಗ್ಗೆ ಪ್ರತಿಕ್ರಿಯಿಸಿದ್ದಕ್ಕೆ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಮೇಲೆ ದರ್ಶನ್ ಫ್ಯಾನ್ಸ್ ಮುಗಿಬಿದ್ದಿದ್ದಾರೆ ಎನ್ನಲಾಗ್ತಿದೆ. ತಮ್ಮನ್ನ ಟ್ರೋಲ್ ಮಾಡಿದ ದರ್ಶನ್ ಫ್ಯಾನ್ಸ್​ಗೆ ರಮ್ಯಾ (Sandalwood Queen Ramya) ಸರಿಯಾಗೇ ಟಾಂಗ್ ಕೊಟ್ಟಿದ್ದಾರೆ. ಇನ್ನು, ಜೀವಬೆದರಿಕೆ ಹಾಕಿದ್ದ ನಟ ದರ್ಶನ್ ಪುಂಡ ಅಭಿಮಾನಿಗಳ ವಿರುದ್ದ ನಟ ಪ್ರಥಮ್ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಸ್ಯಾಂಡಲ್​ವುಡ್ ಸೆಲೆಬ್ರಿಟೀಸ್​ಗೆ ದಾಸನ ಸೆಲೆಬ್ರಿಟೀಸ್ ಕಾಟ? ಟ್ರೋಲ್ ಮಾಡಿದ 'ಡಿ ಬಾಸ್' ಫ್ಯಾನ್ಸ್​ಗೆ ಖಡಕ್ ಉತ್ತರ ಕೊಟ್ಟ ರಮ್ಯಾ:

ಹೌದು, ನಟ ದರ್ಶನ್​ಗೆ ದೊಡ್ಡ ಅಭಿಮಾನಿ ಬಳಗ ಇದೆ ಅನ್ನೋದು ಗೊತ್ತೇ ಇದೆ. ತನ್ನ ಅಭಿಮಾನಿಗಳಿಗೆ ದರ್ಶನ್ 'ಸೆಲೆಬ್ರಿಟೀಸ್' ಅಂತಾನೇ ಕರೀತಾರೆ. ಆದ್ರೆ ಈ ಸೆಲೆಬ್ರಿಟೀಸ್ ಈಗ ಸ್ಯಾಂಡಲ್​ವುಡ್​ನ ಕೆಲ ಸೆಲೆಬ್ರಿಟೀಸ್​​ಗೆ ಇನ್ನಿಲ್ಲದ ಕಾಟ ಕೊಡ್ತಾ ಇದ್ದಾರೆ. ದರ್ಶನ್ ಕೊಲೆ ಕೇಸ್ ಬಗ್ಗೆ ಮಾತನಾಡಿದವರ ಮೇಲೆ ಹರಿಹಾಯ್ತಾ ಇದ್ದಾರೆ. ಆ ಬಿಸಿ ನಟಿ ರಮ್ಯಾಗೂ ತಾಗಿದೆ.

ಇತ್ತೀಚಿಗೆ ಸುಪ್ರೀಂ ಕೋರ್ಟ್​ನಲ್ಲಿ ದರ್ಶನ್ ಬೇಲ್ ಅರ್ಜಿ ಬಗ್ಗೆ ವಿಚಾರಣೆ ನಡೆದಾಗ ರಮ್ಯಾ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ರು. ಸುಪ್ರೀಂ ಕೋರ್ಟ್​ನಿಂದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಅನ್ನೋ ಭರವಸೆ ವ್ಯಕ್ತಪಡಿಸಿದ್ರು. ಇದ್ರಿಂದ ಕೆರಳಿದ ದಾಸನ ಫ್ಯಾನ್ಸ್​ ರಮ್ಯಾನ ಹಿಗ್ಗಾಮುಗ್ಗಾ ಟ್ರೋಲ್ ಮಾಡೋದಕ್ಕೆ ಶುರುಮಾಡಿದ್ರು. ಇದಕ್ಕೆ ಸೋಷಿಯಲ್ ಮಿಡಿಯಾದಲ್ಲೇ ಖಡಕ್ ಉತ್ತರ ಕೊಟ್ಟಿದ್ದಾರೆ ರಮ್ಯಾ.

ರಮ್ಯಾ ಪೋಸ್ಟ್ :

'ಎಲ್ಲಾ ಡಿಬಾಸ್ ಅಭಿಮಾನಿಗಳಿಗೆ ನನ್ನ ಇನ್​ಸ್ಟಾಗ್ರಾಂಗೆ ಸ್ವಾಗತ. ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಅನ್ನೋದಕ್ಕೇ ನಿಮ್ಮ ಕಾಮೆಂಟ್ಸ್‌ಗಳೇ ಸಾಕ್ಷಿ' ಎಂದಿದ್ದಾರೆ ನಟಿ ರಮ್ಯಾ.

ಈ ಬಗ್ಗೆ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿರೋ ನಟಿ ರಮ್ಯಾ, 'ಹೌದು' ನಿಮ್ಮ ಕಾಮೆಂಟ್​ಗಳೇ ನಿಮ್ಮ ಸಂಸ್ಕಾರ ಹೇಳುತ್ವೆ..' ಎಂದು ಹೇಳಿರೋ ರಮ್ಯಾ ದರ್ಶನ್ ಫ್ಯಾನ್ಸ್​ಗೆ ನೇರಾನೇರ ಟಾಂಗ್ ಕೊಟ್ಟಿದ್ದಾರೆ. ಇನ್ನು, ಬಿಗ್ ಬಾಸ್ ಖ್ಯಾತಿಯ ಪ್ರಥಮ್​ಗೂ ದರ್ಶನ್ ಅಭಿಮಾನಿಗಳಿಂದ ಕೆಟ್ಟ ಅನುಭವ ಆಗಿದೆ. ಇತ್ತೀಚಿಗೆ ವೈರಲ್ ಆದ ಒಂದು ಆಡಿಯೋದಲ್ಲಿ ದರ್ಶನ್ ಫ್ಯಾನ್ಸ್ ತನಗೆ ಜೀವಬೆದರಿಕೆ ಒಡ್ಡಿದ್ರು ಅಂತ ಪ್ರಥಮ್ ಹೇಳಿದ್ದು ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಆ ಆಡಿಯೋ ನಿಜ ಅಂತ ಒಪ್ಪಿಕೊಂಡಿರೋ ಪ್ರಥಮ್, ದರ್ಶನ್‌ ಫ್ಯಾನ್ಸ್​ನಿಂದ ತಮಗಾದ ಕಿರುಕುಳವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಪ್ರಥಮ್ ಹೇಳಿದ್ದೇನು?

'ನಿಮ್ಮ ಅಭಿಮಾನಿಗಳಿಗೆ ಬುದ್ದಿ ಹೇಳಿ, ರೌಡಿಗಳನ್ನ ಸಾಕಬೇಡಿ ಅಂತ ದರ್ಶನ್​ಗೆ ಕಿವಿಮಾತು ಹೇಳಿರೋ ಪ್ರಥಮ್, ಇದೇ ರೀತಿ ಪುಂಡಾಟ ಆಡುವವರ ವಿರುದ್ದ ಕಾನೂನು ರೀತ್ಯಾ ಕ್ರಮಕ್ಕೆ ಮುಂದಾಗ್ತೀನಿ' ಅಂತ ಹೇಳಿದ್ದಾರೆ. ಒಟ್ಟಾರೆ ದರ್ಶನ್ ಕುರಿತ ಅಭಿಮಾನ ಓಕೆ.. ಆದ್ರೆ ಆ ನಟನ ಕುಕೃತ್ಯಗಳನ್ನ ಸಮರ್ಥನೆ ಮಾಡಿಕೊಳ್ತಾ ಇದೇ ರೀತಿ ಹುಚ್ಚಾಟವಾಡಿದ್ರೆ, ಅದಕ್ಕೆ ತಕ್ಕ ಬೆಲೆತೆರಬೇಕಾಗುತ್ತೆ ಡಿ ಬಾಸ್ ಫ್ಯಾನ್ಸ್ ಎನ್ನಲಾಗ್ತಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ